ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL–2020: ರಾಯಲ್ಸ್‌ಗೆ‌ 4ನೇ ಸೋಲು; ಐದನೇ ಜಯದೊಂದಿಗೆ ಅಗ್ರಸ್ಥಾನಕ್ಕೆ ಡೆಲ್ಲಿ

Last Updated 9 ಅಕ್ಟೋಬರ್ 2020, 18:44 IST
ಅಕ್ಷರ ಗಾತ್ರ

ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ 185 ರನ್‌ಗಳ ಗುರಿ ಬೆನ್ನತ್ತಲು ವಿಫಲವಾದ ರಾಜಸ್ಥಾನ ರಾಯಲ್ಸ್‌ ಕೇವಲ 138 ರನ್‌ ಗಳಿಸಿ ಆಲೌಟ್‌ ಆಯಿತು. ಇದರೊಂದಿಗೆ 46 ರನ್‌ಗಳ ಗೆಲುವು ಸಾಧಿಸಿದ ಡೆಲ್ಲಿ ತಂಡ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 5ನೇ ಜಯ ದಾಖಲಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೇಲೇರಿತು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಡೆಲ್ಲಿ ತಂಡ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ಸವಾಲಿನಮೊತ್ತ ಕಲೆಹಾಕಿತ್ತು.ಒಂದು ಹಂತದಲ್ಲಿ ಡೆಲ್ಲಿ ತಂಡ ಕೇವಲ 79 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆರಂಭಿಕ ಪೃಥ್ವಿ ಶಾ (19), ಶಿಖರ್ ಧವನ್‌ (5) ಬೇಗನೆ ವಿಕೆಟ್‌ ಒಪ್ಪಿಸಿದರು. ಅದೇರೀತಿನಾಯಕ ಶ್ರೇಯಸ್‌ ಅಯ್ಯರ್‌ (22) ಮತ್ತು ರಿಷಭ್‌ ಪಂತ್‌ (5) ಇಲ್ಲದ ರನ್‌ ಕದಿಯಲು ಹೋಗಿ ರನೌಟ್‌ ಆದರು.

ಹೀಗಾಗಿ ಈ ತಂಡ ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಲ್ಲಿತ್ತು. ಆದರೆ, ಮಾರ್ಕಸ್‌ ಸ್ಟೋಯಿನಸ್‌ ಮತ್ತು ಶಿಮ್ರೋನ್ ಹೆಟ್ಮೆಯರ್‌ ಅದಕ್ಕೆ ಅವಕಾಶ ನೀಡಲಿಲ್ಲ.30 ಎಸೆತಗಳನ್ನು ಆಡಿದ ಸ್ಟೋಯಿನಸ್‌ 4 ಸಿಕ್ಸರ್ ಸಹಿತ 39 ರನ್ ಗಳಿಸಿದರೆ, ಹೆಟ್ಮೆಯರ್‌ 24 ಎಸೆತಗಳಲ್ಲಿ 1 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 45 ರನ್‌ ಬಾರಿಸಿದರು. ಕೊನೆಯಲ್ಲಿ ಬಿರುಸಾಗಿ ಬ್ಯಾಟ್‌ ಬೀಸಿದ ಅಕ್ಷರ್ ಪಟೇಲ್‌ (17) ಮತ್ತು ಹರ್ಷಲ್‌ ಪಟೇಲ್‌ (16) ತಂಡದ ಮೊತ್ತವನ್ನು 180ರ ಗಡಿ ದಾಟಿಸಿದರು.

ಈ ಗುರಿ ಎದುರು ಬ್ಯಾಟಿಂಗ್‌ ಆರಂಭಿಸಿದ ರಾಯಲ್ಸ್‌ ಬ್ಯಾಟ್ಸ್‌ಮನ್‌ಗಳುನೀರಸ ಪ್ರದರ್ಶನ ತೋರಿದರು. ಡೆಲ್ಲಿ ಬೌಲರ್‌ಗಳ ಶಿಸ್ತಿನ ಬೌಲಿಂಗ್‌ ದಾಳಿ ಎದುರು ಆರಂಭಿಕ ಯಶಸ್ವಿ ಜೈಸ್ವಾಲ್‌ (34), ಸ್ಟೀವ್‌ ಸ್ಮಿತ್‌ (24)ಮತ್ತು ರಾಹುಲ್‌ ತೆವಾಟಿಯ (38)ಅಲ್ಪ ಹೋರಾಟ ನಡೆಸಿದರಾದರೂ ಉಳಿದೆಲ್ಲ ಬ್ಯಾಟ್ಸ್‌ಮನ್‌ಗಳು ನಿರುತ್ತರರಾದರು. ಹೀಗಾಗಿ ಈ ತಂಡ ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲು ಅನುಭವಿಸಬೇಕಾಯಿತು.

ಡೆಲ್ಲಿ ಪರ ಕಗಿಸೊ ರಬಾಡ 3 ವಿಕೆಟ್‌ ಪಡೆದರೆ, ಆರ್.ಅಶ್ವಿನ್, ಸ್ಟೋಯಿನಸ್‌ ತಲಾ ಎರಡು ವಿಕೆಟ್ ಉರುಳಿಸಿದರರು. ಅಕ್ಷರ್‌ ಪಟೇಲ್‌, ಹರ್ಷಲ್‌ ಪಟೇಲ್‌ಮತ್ತು ಎನ್ರಿಚ್‌ ನೋರ್ಟ್ಜೆ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

ದಾಖಲೆ ಬರೆದ ರಬಾಡ
ಈ ಪಂದ್ಯದಲ್ಲಿ 3 ವಿಕೆಟ್‌ ಪಡೆದಡೆಲ್ಲಿವೇಗಿ ರಬಾಡ ಸತತ 20ಇನಿಂಗ್ಸ್‌ಗಳಲ್ಲಿ ವಿಕೆಟ್‌ ಪಡೆದ ಸಾಧನೆ ಮಾಡಿದರು. ಆ ಮೂಲಕಐಪಿಎಲ್‌ನಲ್ಲಿಆರ್.ವಿನಯ್‌ ಕುಮಾರ್‌ ನಿರ್ಮಿಸಿದ್ದದಾಖಲೆಯನ್ನು ಮುರಿದರು.

ಆರ್‌. ವಿನಯ್‌ ಕುಮಾರ್ ಅವರು 2012–13ರ ಅವಧಿಯಲ್ಲಿ ಸತತವಾಗಿ 19 ಪಂದ್ಯಗಳಲ್ಲಿ ವಿಕೆಟ್‌ ಪಡೆದಿದ್ದರು. ಇದು ಈ ವರೆಗಿನ ದಾಖಲೆಯಾಗಿತ್ತು.

ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ 6 ಪಂದ್ಯ ಆಡಿರುವ ರಬಾಡ ಒಟ್ಟು 15 ವಿಕೆಟ್‌ಗಳನ್ನು ಪಡೆದುಕೊಂಡಿದ್ದು, ಅತಿಹೆಚ್ಚು ವಿಕೆಟ್‌ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್‌ ವೇಗಿ ಜಸ್‌ಪ್ರೀತ್‌ ಬೂಮ್ರಾ (11 ವಿಕೆಟ್) ಎರಡನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT