ಶುಕ್ರವಾರ, ಮಾರ್ಚ್ 31, 2023
22 °C

ಐಪಿಎಲ್‌ ಮಿನಿ ಹರಾಜು: ಅತಿ ಹೆಚ್ಚು ಬೆಲೆಗೆ ಮಾರಾಟವಾದ ಅಗ್ರ ಹತ್ತು ಆಟಗಾರರು ಇವರೇ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೊಚ್ಚಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಕಣದಲ್ಲಿದ್ದ 405 ಆಟಗಾರರ ಪೈಕಿ ತಮ್ಮ ತಂಡಕ್ಕೆ ಬೇಕಾದ ಆಟಗಾರರನ್ನು ಕೊಂಡುಕೊಳ್ಳಲು ಪ್ರಾಂಚೈಸಿಗಳು ಕೋಟಿ ಕೋಟಿ ಹಣ ಸುರಿದಿವೆ.

ಇಂಗ್ಲೆಂಡ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಅವರನ್ನು ಪಂಜಾಬ್‌ ಕಿಂಗ್ಸ್‌ ತಂಡ ಬರೋಬ್ಬರಿ ₹ 18.5 ಕೋಟಿ ನೀಡಿ ಖರೀದಿಸಿದೆ. ಇದರೊಂದಿಗೆ ಕರನ್‌ ಅವರು ಐಪಿಎಲ್‌ ಹರಾಜು ಇತಿಹಾಸದಲ್ಲಿಯೇ ಅತಿಹೆಚ್ಚು ಮೊತ್ತ ಗಳಿಸಿಕೊಂಡ ಆಟಗಾರ ಎನಿಸಿಕೊಂಡಿದ್ದಾರೆ.

ಇದೇ ಮೊದಲ ಬಾರಿಗೆ ಐಪಿಎಲ್‌ ಹರಾಜಿನಲ್ಲಿ ಪಾಲ್ಗೊಂಡಿರುವ ಆಸ್ಟ್ರೇಲಿಯಾದ ಕೆಮರೂನ್‌ ಗ್ರೀನ್‌, ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್‌ ಅವರು ಘಟಾನುಘಟಿಗಳನ್ನು ಹಿಂದಿಕ್ಕಿ ಭಾರಿ ಮೊತ್ತ ಜೇಬಿಗಿಳಿಸಿಕೊಳ್ಳುವ ಮೂಲಕ ಕ್ರಿಕೆಟ್‌ ಪ್ರಿಯರ ಹುಬ್ಬೇರುವಂತೆ ಮಾಡಿದ್ದಾರೆ.

ಈ ಬಾರಿ ಅತಿ ಹೆಚ್ಚು ಮೊತ್ತ ಗಳಿಸಿದ ಅಗ್ರ ಹತ್ತು ಆಟಗಾರರು
1. ಸ್ಯಾಮ್‌ ಕರನ್‌ (ಇಂಗ್ಲೆಂಡ್‌)
: ₹ 18.50 ಕೋಟಿ – ಪಂಜಾಬ್‌ ಕಿಂಗ್ಸ್‌
2. ಕೆಮರೂನ್‌ ಗ್ರೀನ್‌ (ಆಸ್ಟ್ರೇಲಿಯಾ): ₹ 17.50 ಕೋಟಿ – ಮುಂಬೈ ಇಂಡಿಯನ್ಸ್‌
3. ಬೆನ್‌ ಸ್ಟೋಕ್ಸ್‌ (ಇಂಗ್ಲೆಂಡ್‌): ₹ 16.25 ಕೋಟಿ – ಚೆನ್ನೈ ಸೂಪರ್‌ ಕಿಂಗ್ಸ್‌
4. ನಿಕೋಲಸ್‌ ಪೂರನ್‌ (ವೆಸ್ಟ್‌ ಇಂಡೀಸ್‌): ₹ 16 ಕೋಟಿ – ಲಖನೌ ಸೂಪರ್‌ ಜೈಂಟ್ಸ್‌
5. ಹ್ಯಾರಿ ಬ್ರೂಕ್‌ (ಇಂಗ್ಲೆಂಡ್): ₹ 13.5 ಕೋಟಿ – ಸನ್‌ರೈಸರ್ಸ್‌ ಹೈದರಾಬಾದ್
6. ಮಯಂಕ್‌ ಅಗರವಾಲ್ (ಭಾರತ): ₹ 8.25 ಕೋಟಿ – ಸನ್‌ರೈಸರ್ಸ್‌ ಹೈದರಾಬಾದ್
7. ಶಿವಂ ಮಾವಿ (ಭಾರತ): ₹ 6 ಕೋಟಿ – ಗುಜರಾತ್‌ ಟೈಟನ್ಸ್‌
8. ಜೇಸನ್‌ ಹೋಲ್ಡರ್‌ (ವೆಸ್ಟ್‌ ಇಂಡೀಸ್‌): ₹ 5.75 ಕೋಟಿ – ರಾಜಸ್ಥಾನ ರಾಯಲ್ಸ್‌
9. ಮುಕೇಶ್ ಕುಮಾರ್‌ (ಭಾರತ): ₹ 5.5 ಕೋಟಿ – ಡೆಲ್ಲಿ ಕ್ಯಾಪಿಟಲ್ಸ್‌
10. ಹೆನ್ರಿಚ್‌ ಕ್ಲಾಸೆನ್‌ (ದಕ್ಷಿಣ ಆಫ್ರಿಕಾ): ₹ 5.25 ಕೋಟಿ – ಸನ್‌ರೈಸರ್ಸ್‌ ಹೈದರಾಬಾದ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು