ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL ಆಡಲು ದುಬೈಗೆ ತೆರಳಿರುವ ಆಟಗಾರರಿಗೆ ವಿಧಿಸಿರುವ ಕೋವಿಡ್‌ ಷರತ್ತುಗಳು ಹೀಗಿವೆ!

Last Updated 21 ಆಗಸ್ಟ್ 2020, 11:44 IST
ಅಕ್ಷರ ಗಾತ್ರ

ದುಬೈ: ಕೊರೊನಾ ವೈರಸ್‌ ಕರಿನೆರಳಿನ ಅಡಿಯಲ್ಲೇ ಐಪಿಎಲ್‌ ಆಡಲು ದುಬೈಗೆ ಬಂದಿರುವ ವಿವಿಧ ತಂಡಗಳ ಆಟಗಾರರ ಮೊದಲ ದಿನ ಹೇಗಿತ್ತು? ಅವರಿಗೆ ವಿಧಿಸಲಾಗಿರುವ ಷರತ್ತುಗಳೇನು? ನಿಯಮಾವಳಿಗಳೇನು?

ದುಬೈಗೆ ಬಂದಿಳಿದಿರುವ ಆಟಗಾರರು ಹೋಟೆಲ್‌ನ ತಮ್ಮ ಬಾಲ್ಕನಿಯ ಮೂಲಕವೇ ಎಲ್ಲರೊಂದಿಗೆ ಕುಶಲೋಪರಿ ವಿಚಾರಿಸಿಕೊಂಡರು. ಆಟಗಾರರು ಆರು ದಿನ ಹೋಟೆಲ್‌ ಕೋಣೆಗಳಿಗೇ ಸೀಮಿತವಾಗಬೇಕು ಎಂದು ಸೂಚಿಸಲಾಗಿದೆ. ಫಿಟ್‌ನೆಸ್‌ ತರಬೇತುದಾರರು ಫಿಟ್‌ನೆಸ್ ಸೂತ್ರಗಳನ್ನು ಆಟಗಾರರ ಕೈಗಿಟ್ಟಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರರು ಗುರುವಾರ ಸಂಜೆ ದುಬೈಗೆ ಆಗಮಿಸಿದರೆ, ಕೋಲ್ಕತಾ ನೈಟ್ ರೈಡರ್ಸ್ ತಂಡ ರಾತ್ರಿ ಅಬುಧಾಬಿಗೆ ಬಂದಿಳಿಯಿತು.

ಬಿಸಿಸಿಐ ವಿಧಿಸಿರುವ ನಿಯಮಗಳ ಪ್ರಕಾರ ರಾಯಲ್ಸ್‌ ತಂಡ ವಿಮಾನ ನಿಲ್ದಾಣದಲ್ಲಿಯೇ ಕೋವಿಡ್‌ ಪರೀಕ್ಷೆಗೆ ಒಳಗಾಯಿತು. ಪಂಜಾಬ್‌ ತಂಡ ಶುಕ್ರವಾರ ಮತ್ತೊಮ್ಮೆ ಪರೀಕ್ಷೆಗೆ ಒಳಪಟ್ಟಿತು.

ಬಿಸಿಸಿಐ ರೂಪಿಸಿರುವ ಕೋವಿಡ್‌ ನಿಯಮಾವಳಿಗಳ ಪ್ರಕಾರ 1, 3 ಮತ್ತು 6 ನೇ ದಿನದಂದು ಆಟಗಾರರ ಪರೀಕ್ಷೆ ನಡೆಸಲಾಗುತ್ತದೆ. ಅದರ ನಂತರ ತಂಡಗಳು ಸೆಪ್ಟೆಂಬರ್ 19 ರಿಂದ ಲೀಗ್‌ಗೆ ತರಬೇತಿಯನ್ನು ಪ್ರಾರಂಭಿಸಬಹುದು.

ಸದ್ಯ ದುಬೈಗೆ ಬಂದಿಳಿದಿರುವ ಆಟಗಾರರು ಆರುದಿನಗಳ ಕಾಲ ಹೋಟೆಲ್‌ನ ಕೊಠಡಿಗಳಲ್ಲೇ ಬಂಧಿಯಾಗಿರಬೇಕು. ಹೋಟೆಲ್‌ನ ಬಾಲ್ಕನಿ ಮೂಲಕ ಆಟಗಾರರು ಪರಸ್ಪರ ಮಾತನಾಡಿಕೊಳ್ಳಬಹುದು. ಆದರೆ, ಅಂತರ ಪಾಲಿಸುವುದು ಕಡ್ಡಾಯ ಎಂದು ಬಿಸಿಸಿಐ ಆಟಗಾರರಿಗೆ ಸೂಚಿಸಿದೆ.

ಆಟಗಾರರು ಕೋಣೆಗೆ ಪರ್ಯಾಯವಾಗಿ ಹೊರಾಂಗಣವನ್ನು ಬಳಸಲು ಅವಕಾಶವಿದೆ. ಒಬ್ಬ ಆಟಗಾರ ಬರುವಾಗ ಇನ್ನೊಬ್ಬ ಆಟಗಾರ ಹೊರಾಂಗಣದಲ್ಲಿ ಇರುವಂತಿಲ್ಲ ಎಂದು ತಿಳಿಸಲಾಗಿದೆ.

ಕೋವಿಡ್‌ ನಿಯಮಾವಳಿಗಳ ಅನ್ವಯ ತಾವು ತಂಗಿರುವ ಹೋಟೆಲ್‌ನಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ರಾಯಲ್ಸ್‌ ತಂಡದ ಆಟಗಾರ ಜಯದೇವ ಉನಾದ್ಕಟ್‌ ಅವರು ಸಾಮಾಜಿಕ ತಾಣದಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಮುಂಬೈ ಇಂಡಿಯನ್ಸ್‌ ಶುಕ್ರವಾರ ಭಾರತದಿಂದ ದುಬೈಗೆ ಪ್ರಯಾಣ ಬೆಳೆಸಿದವು. ದೆಹಲಿ ಕ್ಯಾಪಿಟಲ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಈ ವಾರಾಂತ್ಯದಲ್ಲಿ ಯುಎಇಗೆ ತೆರಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT