ಶನಿವಾರ, ಸೆಪ್ಟೆಂಬರ್ 26, 2020
26 °C

ಐಪಿಎಲ್‌ | ಆರ್‌ಸಿಬಿ ಆಟಗಾರರಿಗೆ ಕ್ವಾರಂಟೈನ್ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರು ಶುಕ್ರ ವಾರದಿಂದ ಒಂದು ವಾರ ಹೋಟೆಲ್‌ ಕ್ವಾರಂಟೈನ್ ಆರಂಭಿಸಲಿದ್ದಾರೆ.

ಸೆಪ್ಟೆಂಬರ್‌ 19ರಿಂದ ಯುಎ ಇಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಆರ್‌ಸಿಬಿ  ಆಡಲಿದೆ.

’ಆರ್‌ಸಿಬಿಯಲ್ಲಿ ಆಡುವ ಭಾರತ ತಂಡದ ಆಟಗಾರರು ಮತ್ತಿತರರು ಬೆಂಗಳೂರಿಗೆ ಬರಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕೂಡ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದೇ 21ರಂದು ತಂಡವು ಯುಎಇಗೆ ತೆರಳಲಿದೆ‘ ಎಂದು ಆರ್‌ಸಿಬಿ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಸಂಜಯ್ ಚೂರಿವಾಲಾ ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.

’ಯುಎಇಗೆ ತೆರಳುವ ಮುನ್ನ ನೆಟ್ಸ್‌ ಅಭ್ಯಾಸ ಇರುವುದಿಲ್ಲ. ವಿದೇಶಿ ಆಟಗಾರರೂ ಬರುತ್ತಿಲ್ಲ. ಅವರು ನೇರವಾಗಿ ಯುಎ ಇಗೆ ಬರಲಿದ್ದಾರೆ‘ ಎಂದೂ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ಡೇಲ್ ಸ್ಟೇಯ್ನ್, ಶ್ರೀಲಂಕಾದ ಇಸುರು ಉಡಾನ, ಕ್ರಿಸ್ ಮಾರಿಸ್, ಆ್ಯರನ್ ಫಿಂಚ್ ಮತ್ತು ಮೋಯಿನ್ ಅಲಿ ಅವರು ತಂಡದಲ್ಲಿದ್ಧಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು