ಮಂಗಳವಾರ, ಜನವರಿ 18, 2022
22 °C

IPL 2022: ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರು ಯಾರೆಲ್ಲ? ಇಲ್ಲಿದೆ ಪಟ್ಟಿ...

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರನ್ನು ಕ್ರಮವಾಗಿ ಚೆನ್ನೈಯಿನ್ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ತಮ್ಮಲ್ಲೇ ಉಳಿಸಿಕೊಂಡಿವೆ. ನಾಯಕ ಕೆ.ಎಲ್‌.ರಾಹುಲ್ ಅವರನ್ನು ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿದೆ. ಕನ್ನಡಿಗ ಮಯಂಕ್ ಅಗರವಾಲ್ ಅವರು ಪಂಜಾಬ್ ಕಿಂಗ್ಸ್‌ನಲ್ಲೇ ಇದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯ 2022ರ ಆವೃತ್ತಿಗೆ ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸಲು ಮಂಗಳವಾರ ಕೊನೆಯ ದಿನವಾಗಿತ್ತು. ಸನ್‌ರೈಸರ್ಸ್ ಹೈದರಾಬಾದ್ ತಂಡ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಉಳಿಸಿಕೊಂಡಿದ್ದು ಸ್ಪಿನ್ನರ್ ರಶೀದ್ ಖಾನ್ ಅವರನ್ನೂ ಬಿಡುಗಡೆ ಮಾಡಿದೆ.

ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ರವೀಂದ್ರ ಜಡೇಜ, ಋತುರಾಜ್ ಗಾಯಕವಾಡ್ ಮತ್ತು ಮೋಯಿನ್ ಅಲಿ ಅವರನ್ನು ಚೆನ್ನೈ ಉಳಿಸಿಕೊಂಡಿದೆ. ಸುನಿಲ ನಾರಾಯಣ್‌, ಆ್ಯಂಡ್ರೆ ರಸೆಲ್‌, ವರುಣ್ ಚಕ್ರವರ್ತಿ ಮತ್ತು ವೆಂಕಟೇಶ್ ಅಯ್ಯರ್ ಅವರು ಕೋಲ್ಕತ್ತ ನೈಟ್ ರೈಡರ್ಸ್‌ನಲ್ಲಿ ಉಳಿದುಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್ ಶರ್ಮಾ, ವೇಗಿ ಜಸ್‌ಪ್ರೀತ್ ಬೂಮ್ರಾ, ಆಲ್‌ರೌಂಡರ್ ಕೀರನ್ ಪೊಲಾರ್ಡ ಮತ್ತು ಸೂರ್ಯಕುಮಾರ್ ಯಾದವ್‌ ಅವರನ್ನು ಉಳಿಸಿದ್ದು ಡೆಲ್ಲಿ ರಿಷಭ್ ಪಂತ್‌, ಪೃಥ್ವಿ ಶಾ, ಅಕ್ಷರ್ ಪಟೇಲ್ ಮತ್ತು ಆ್ಯನ್ರಿಚ್ ನಾರ್ಕಿಯ ಅವರನ್ನು ಬಿಟ್ಟುಕೊಡಲು ಸಿದ್ಧವಿರಲಿಲ್ಲ.

ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ಅವರನ್ನು ಮುಂಬೈ ಇಂಡಿಯನ್ಸ್ ಬಿಡಗಡೆ ಮಾಡಿದ್ದು ಆರ್‌ಸಿಬಿ ತಂಡ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ವೇಗಿ ಹರ್ಷಲ್ ಪಟೇಲ್ ಅವರನ್ನು ಬಿಡುಗಡೆ ಮಾಡಿದೆ.

ಓದಿ: 

ಉಳಿದುಕೊಂಡ ಆಟಗಾರರು (ಮೊತ್ತ/₹ಗಳಲ್ಲಿ)

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (15 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್‌ (11 ಕೋಟಿ), ಮೊಹಮ್ಮದ್ ಸಿರಾಜ್ (7 ಕೋಟಿ).

ಚೆನ್ನೈ ಸೂಪರ್ ಕಿಂಗ್ಸ್‌: ರವೀಂದ್ರ ಜಡೇಜ: (16 ಕೋಟಿ), ಮಹೇಂದ್ರ ಸಿಂಗ್ ಧೋನಿ (12 ಕೋಟಿ), ಮೋಯಿನ್ ಅಲಿ (8 ಕೋಟಿ), ಋತುರಾಜ್ ಗಾಯಕವಾಡ್ (6 ಕೋಟಿ).

ಮುಂಬೈ ಇಂಡಿಯನ್ಸ್‌: ರೋಹಿತ್ ಶರ್ಮಾ (16 ಕೋಟಿ), ಜಸ್‌ಪ್ರೀತ್ ಬೂಮ್ರಾ (12 ಕೋಟಿ), ಸೂರ್ಯಕುಮಾರ್ ಯಾದವ್ (8 ಕೋಟಿ), ಕೀರನ್ ಪೊಲಾರ್ಡ್‌ (6 ಕೋಟಿ).

ಪಂಜಾಬ್ ಕಿಂಗ್ಸ್‌: ಮಯಂಕ್ ಅಗರವಾಲ್‌ (12 ಕೋಟಿ) ಆರ್ಷದೀಪ್ ಸಿಂಗ್ (4 ಕೋಟಿ).

ಸನ್‌ರೈಸರ್ಸ್ ಹೈದರಾಬಾದ್‌: ಕೇನ್ ವಿಲಿಯಮ್ಸನ್ (14 ಕೋಟಿ), ಅಬ್ದುಲ್ ಸಮದ್‌ (4 ಕೋಟಿ), ಉಮ್ರಾನ್ ಮಲಿಕ್ (4 ಕೋಟಿ).

ರಾಜಸ್ಥಾನ್ ರಾಯಲ್ಸ್‌: ಸಂಜು ಸ್ಯಾಮ್ಸನ್‌ (14 ಕೋಟಿ), ಜೋಸ್ ಬಟ್ಲರ್‌ (10 ಕೋಟಿ), ಯಶಸ್ವಿ ಜೈಸ್ವಾಲ್‌ (4 ಕೋಟಿ).

ಕೋಲ್ಕತ್ತ ನೈಟ್‌ ರೈಡರ್ಸ್‌: ಆ್ಯಂಡ್ರೆ ರಸೆಲ್‌ (12 ಕೋಟಿ), ವರುಣ್ ಚಕ್ರವರ್ತಿ (8 ಕೋಟಿ), ವೆಂಕಟೇಶ್ ಅಯ್ಯರ್ (8 ಕೋಟಿ), ಸುನಿಲ್ ನಾರಾಯಣ್‌ (6 ಕೋಟಿ).

ಡೆಲ್ಲಿ ಕ್ಯಾಪಿಟಲ್ಸ್‌: ರಿಷಭ್ ಪಂತ್‌ (16 ಕೋಟಿ), ಅಕ್ಷರ್ ಪಟೇಲ್‌ (9 ಕೋಟಿ), ಪೃಥ್ವಿ ಶಾ (7.5 ಕೋಟಿ), ಆ್ಯನ್ರಿಚ್ ನಾರ್ಕಿಯ (6.5 ಕೋಟಿ).

ಇನ್ನಷ್ಟು ಸುದ್ದಿಗಳು...

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು