ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಮುಂಬೈ ಇಂಡಿಯನ್ಸ್‌ಗೆ ಮರಳಿದ ಹಾರ್ದಿಕ್ ಪಾಂಡ್ಯ

Published 27 ನವೆಂಬರ್ 2023, 10:48 IST
Last Updated 27 ನವೆಂಬರ್ 2023, 10:48 IST
ಅಕ್ಷರ ಗಾತ್ರ

ನವದೆಹಲಿ: ಭಾನುವಾರ ರಾತ್ರಿ ನಡೆದ ಬೆಳವಣಿಗೆಯಲ್ಲಿ ಭಾರತ ಟಿ20 ಕ್ರಿಕೆಟ್‌ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮರಳಿದ್ದಾರೆ.

ಏಕಬಾರಿಯ ನಗದು ಪಾವತಿಯ ಒಪ್ಪಂದ ಅಂತಿಮಗೊಂಡ ಬೆನ್ನಲ್ಲೇ ಅವರು ಈ ಹಿಂದೆ ಪ್ರತಿನಿಧಿಸಿದ್ದ ಮುಂಬೈ ತಂಡಕ್ಕೆ ಹಿಂದಿರುಗಿದ್ದಾರೆ.

ಅವರು ಮರಳುವ ಬಗ್ಗೆ ಕೆಲವು ದಿನಗಳಿಂದ ಊಹಾಪೋಹಗಳು ಹರಡಿದ್ದವು. ಆದರೆ, ಗುಜರಾತ್‌ ಟೈಟಾನ್ಸ್‌ ತಂಡ ಭಾನುವಾರ ಪ್ರಕಟಿಸಿದ ಉಳಿಸಿಕೊಂಡ ಆಟಗಾರರ ‍ಪಟ್ಟಿಯಲ್ಲಿ ಪಾಂಡ್ಯ ಅವರ ಹೆಸರಿತ್ತು. ಹೀಗಾಗಿ, ತಂಡದಲ್ಲಿ ಮುಂದುವರಿಯುವಂತೆ ಕಂಡಿತ್ತು. ಆದರೆ, ತಡರಾತ್ರಿ ನಡೆದ ಈ ಬೆಳವಣಿಗೆಯಿಂದ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.

ಮತ್ತೊಂದೆಡೆ ಮುಂಬೈ ತಂಡವು 2024ರ ಐಪಿಎಲ್‌ಗೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಮುಂದುವರಿಸಿದೆ. ಆದರೆ, ತಂಡದಲ್ಲಿದ್ದ ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್ ಅವರನ್ನು ಬಿಡುಗಡೆ ಮಾಡಿದೆ. ಆರ್ಚರ್ ಮೊಣಕೈ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಶ್ರೀಲಂಕಾದ ಲೆಗ್‌ಸ್ಪಿನ್ನರ್‌ ವನಿಂದು ಹಸರಂಗ, ಆಸ್ಟ್ರೇಲಿಯಾದ ವೇಗದ ಬೌಲರ್‌ ಜೋಶ್ ಹ್ಯಾಜಲ್‌ವುಡ್, ಇಂಗ್ಲೆಂಡ್‌ನ ಎಡಗೈ ಬ್ಯಾಟರ್‌ ಡೇವಿಡ್‌ ವಿಲಿ ಅವರನ್ನು ಬಿಡುಗಡೆ ಮಾಡಿದೆ.

ಐಪಿಎಲ್‌ ಮುಂದಿನ ಆವೃತ್ತಿಗೆ ಡಿಸೆಂಬರ್ 19ರಂದು ಬಿಡ್ಡಿಂಗ್‌ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಫ್ರಾಂಚೈಸಿಗಳು ಹಲವು ಆಟಗಾರರನ್ನು ಉಳಿಸಿಕೊಂಡು, ಮತ್ತೆ ಕೆಲವರನ್ನು ಬಿಡುಗಡೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT