ಮಂಗಳವಾರ, ಸೆಪ್ಟೆಂಬರ್ 21, 2021
28 °C

ಐಪಿಎಲ್‌-2020 | ನಾಳೆ ವೇಳಾಪಟ್ಟಿ ಬಿಡುಗಡೆ: ಬ್ರಿಜೇಶ್ ಪಟೇಲ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಯುನೈಟೆಡ್ ಅರಬ್ ಎಮಿರೆಟ್ಸ್‌ನಲ್ಲಿ ಇದೇ 19ರಿಂದ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿಯನ್ನು ಭಾನುವಾರ ಪ್ರಕಟಿಸಲಾಗುವುದು ಎಂದು ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

ಪಂದ್ಯಗಳು ನಡೆಯಲಿರುವ ದುಬೈ, ಅಬುಧಾಬಿ ನಗರಗಳಲ್ಲಿ ಕೋವಿಡ್ –14 ತಡೆಗೆ ಪ್ರತ್ಏಕವಾಸದ ನಿಯಮಗಳು ಬೇರೆ ಬೇರೆ ಇವೆ. ಆದ್ದರಿಂದ  ಐಪಿಎಲ್‌ನ ಕಾರ್ಯಚಟುವಟಿಕೆಗಳ ನಿರ್ವಹಣಾ ತಂಡವು ವೇಳಾಪ್ಟಿಯ ರಚನೆಯಲ್ಲಿ ಸಮಯ ತೆಗೆದುಕೊಂಡಿದೆ.

ಹೋದ ವರ್ಷದ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಮತ್ತು ರನ್ನರ್ಸ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಉದ್ಘಾಟನೆ ಪಂದ್ಯವನ್ನು ಆಡುವ ಸಾಧ್ಯತೆ ಇದೆ. ಈ ಸಲದ ಟೂರ್ನಿಯು 53 ದಿನಗಳವರೆಗೆ ನಡೆಯಲಿದೆ.  ಒಂದೇ ದಿನ ಎರಡು ಪಂದ್ಯಗಳನ್ನು  ಆಯೋಜಿಸುವ ಸಾಧ್ಯತೆಗಳೂ ಕಡಿಮೆ ಇದೆ ಎಂದು ಹೇಳಲಾಗುತ್ತಿದೆ.

ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ಪಂದ್ಯಗಳು ನಡೆಯಲಿವೆ. ಅಬುಧಾಬಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮೊದಲ ಹಂತದ ಪಂದ್ಯಗಳನ್ನು ದುಬೈನಲ್ಲಷ್ಟೇ  ಆಯೋಜಿಸುವ ಕುರಿತೂ ಚಿಂತನೆ ನಡೆಸಲಾಗುತ್ತಿದೆ ಎಂದು ಈಚೆಗೆ ಬಿಸಿಸಿಐ ಮೂಲಗಳು ಹೇಳಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು