ಮಂಗಳವಾರ, 3 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL Winners List: 5ನೇ ಬಾರಿಗೆ ಟ್ರೋಫಿ ಗೆದ್ದ ಚೆನ್ನೈ

Published 30 ಮೇ 2023, 10:59 IST
Last Updated 30 ಮೇ 2023, 10:59 IST
ಅಕ್ಷರ ಗಾತ್ರ

ಅಹಮದಾಬಾದ್: ಐಪಿಎಲ್ 2023 ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಮಗದೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಈ ಮೂಲಕ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದೆ. ಅಲ್ಲದೆ ಒಟ್ಟಾರೆಯಾಗಿ ಚೆನ್ನೈ 10ನೇ ಬಾರಿ ಫೈನಲ್‌ಗೇರಿದ ಸಾಧನೆ ಮಾಡಿದೆ.

ಈ ಮೂಲಕ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ.

2008ರಲ್ಲಿ ನಡೆದ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಮಣಿದಿದ್ದ ಚೆನ್ನೈ ರನ್ನರ್-ಅಪ್ ಎನಿಸಿಕೊಂಡಿತ್ತು.

ಧೋನಿ ನಾಯಕತ್ವದಲ್ಲೇ 2010ರಲ್ಲಿ ಚೆನ್ನೈ ಮೊದಲ ಬಾರಿಗೆ ಪ್ರಶಸ್ತಿ ಜಯಿಸಿತ್ತು. 2011ರಲ್ಲೂ ಪ್ರಶಸ್ತಿ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದಿತ್ತು.

2012, 2013 ಹಾಗೂ 2015ನೇ ಸಾಲಿನಲ್ಲಿ ರನ್ನರ್-ಅಪ್ ಆಗಿ ಹೊರಹೊಮ್ಮಿತ್ತು. ಬಳಿಕ ಎರಡು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ, 2018ರಲ್ಲಿ ಮತ್ತೆ ಚಾಂಪಿಯನ್ ಆಗಿತ್ತು.

2019ರಲ್ಲಿ ರನ್ನರ್-ಅಪ್ ಆದ ಚೆನ್ನೈ 2021ರಲ್ಲಿ ಟ್ರೋಫಿ ಮುಡಿಗೇರಿಸಿತ್ತು. ಧೋನಿ ನಾಯಕತ್ವದಲ್ಲಿ ಈಗ ಚೆನ್ನೈ ಐದನೇ ಬಾರಿಗೆ ಕಿರೀಟ ಗೆದ್ದಿದೆ.

ಐಪಿಎಲ್ ಟ್ರೋಫಿ ವಿಜೇತ ತಂಡಗಳ ಸಂಪೂರ್ಣ ಪಟ್ಟಿ ಇಲ್ಲಿದೆ:

  • 2008: ರಾಜಸ್ಥಾನ ರಾಯಲ್ಸ್

  • 2009: ಡೆಕ್ಕನ್ ಚಾರ್ಜರ್ಸ್

  • 2010: ಚೆನ್ನೈ ಸೂಪರ್ ಕಿಂಗ್ಸ್

  • 2011: ಚೆನ್ನೈ ಸೂಪರ್ ಕಿಂಗ್ಸ್

  • 2012: ಕೋಲ್ಕತ್ತ ನೈಟ್ ರೈಡರ್ಸ್

  • 2013: ಮುಂಬೈ ಇಂಡಿಯನ್ಸ್

  • 2014: ಕೋಲ್ಕತ್ತ ನೈಟ್ ರೈಡರ್ಸ್

  • 2015: ಮುಂಬೈ ಇಂಡಿಯನ್ಸ್

  • 2016: ಸನ್‌ರೈಸರ್ಸ್ ಹೈದರಾಬಾದ್

  • 2017: ಮುಂಬೈ ಇಂಡಿಯನ್ಸ್

  • 2018: ಚೆನ್ನೈ ಸೂಪರ್ ಕಿಂಗ್ಸ್

  • 2019: ಮುಂಬೈ ಇಂಡಿಯನ್ಸ್

  • 2020: ಮುಂಬೈ ಇಂಡಿಯನ್ಸ್

  • 2021: ಚೆನ್ನೈ ಸೂಪರ್ ಕಿಂಗ್ಸ್

  • 2022: ಗುಜರಾತ್ ಟೈಟನ್ಸ್

  • 2023: ಚೆನ್ನೈ ಸೂಪರ್ ಕಿಂಗ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT