ಸೋಮವಾರ, ನವೆಂಬರ್ 30, 2020
19 °C

ಯುವ ಕ್ರಿಕೆಟಿಗರಲ್ಲಿ ಪಂದ್ಯ ಗೆಲ್ಲಿಸುವ ಕಿಡಿ ಕಂಡುಬಂದಿಲ್ಲ: ಎಂಎಸ್ ಧೋನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Dhoni

ಯುಎಇ: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಯುವ ಕ್ರಿಕೆಟಿಗರಲ್ಲಿ ಪಂದ್ಯ ಗೆಲ್ಲಿಸುವ ಕಿಡಿ ಕಂಡು ಬಂದಿಲ್ಲ. ಹಾಗಾಗಿ ಪ್ರಸ್ತುತ ತಂಡದಲ್ಲಿ ಅನುಭವಿ ಆಟಗಾರರ ಬದಲು ಅವರು ಸ್ಥಾನಪಡೆದುಕೊಂಡಿಲ್ಲ ಎಂದು ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಮೂರು ಬಾರಿ ಐಪಿಎಲ್ ಟ್ರೋಫಿ ಗೆದ್ದಿದ್ದ ಸಿಎಸ್‌ಕೆ ಈ ಬಾರಿಯ ಐಪಿಎಲ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿತ್ತು. ಸೋಮವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಸಿಎಸ್‌ಕೆ ಪರಾಭವಗೊಂಡಿದ್ದು ಐಪಿಎಲ್‌ನಲ್ಲಿ ಏಳು ಬಾರಿ ಸೋಲು ಅನುಭವಿಸಿದೆ.

ತಂಡದಲ್ಲಿ ಕಿರಿಯ ಆಟಗಾರರಿಗೆ ಅವಕಾಶ ನೀಡದೆ ಹಿರಿಯ ಆಟಗಾರರನ್ನೇ ಧೋನಿ ಆಡಿಸುತ್ತಿರುವುದರಿಂದ ಸಿಎಸ್‌ಕೆ ಈ ರೀತಿ ಸೋಲುತ್ತಿದೆ ಎಂಬ ವ್ಯಾಪಕ ಟೀಕೆ ಕೇಳಿಬರುತ್ತಿದೆ.

ಈ ಟೀಕೆಗಳಿಗೆ ಪ್ರತಿಕ್ರಿಯಿಸಿದ ಧೋನಿ ಏಕಾಏಕಿ ಬದಲಾವಣೆ ಸಾಧ್ಯವಿಲ್ಲ. ಡ್ರೆಸ್ಸಿಂಗ್ ರೂಂನಲ್ಲಿ ಅಭದ್ರತೆ ಮೇಲುಗೈ ಸಾಧಿಸಲು ಬಯಸುವುದಿಲ್ಲ. ಈ ಬಾರಿ ನಮಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂಬುದು ನಿಜ ಎಂದಿದ್ದಾರೆ.

ಪಂದ್ಯ ಗೆದ್ದುಕೊಡುವ ಕಿಡಿ ನಮಗೆ ಯುವ ಆಟಗಾರರಲ್ಲಿ ಕಂಡಿಲ್ಲ. ಆದರೆ ಮುಂಬರುವ ಪಂದ್ಯಗಳಲ್ಲಿ ಅವರಿಗೆ ಅವಕಾಶ ನೀಡಲಾಗುವುದು. ಅವರಿಗೆ ತಂಡದಲ್ಲಿ ಸ್ಥಾನ ನೀಡಿ ಅವರು ಒತ್ತಡವಿಲ್ಲದೆ ಆಡುವ ಅವಕಾಶವೂ ಸಿಗಬಹುದು.

ಪಿಚ್‌ನಲ್ಲಿ ವೇಗದ ಬೌಲರ್‌ಗಳಿಗೆ ಕಷ್ಟವಾಗುತ್ತಿತ್ತು. ಹಾಗಾಗಿ ಜಡೇಜಾ (ರವೀಂದ್ರ)ನ್ನು ಕರೆದಿದ್ದು. ಪ್ರತಿ ಬಾರಿ ನಾವು ನಿರೀಕ್ಷಿಸಿದ್ದೇ ಆಗಬೇಕು ಎಂದೇನಿಲ್ಲ. ಎಲ್ಲಿ ಎಡವಿದ್ದು ಎಂಬುದನ್ನು ನೋಡಬೇಕಾಗಿದೆ. ಪ್ರಕ್ರಿಯೆಯ ಆಧಾರದ ಮೇಲೆ ಫಲಿತಾಂಶವೂ ಇರುತ್ತದೆ. ಆದರೆ ನೀವು ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸಿದ್ದರೆ ಫಲಿತಾಂಶದ ಅನಗತ್ಯ ಒತ್ತಡ ಡ್ರೆಸ್ಸಿಂಗ್ ಕೋಣೆಗೆ ಪ್ರವೇಶಿಸುವುದಿಲ್ಲ ಎಂದು ಧೋನಿ ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು