ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನಿ ಕಪ್‌: ರೆಸ್ಟ್‌ ಆಫ್‌ ಇಂಡಿಯಾಕ್ಕೆ ಮುನ್ನಡೆ

Last Updated 3 ಮಾರ್ಚ್ 2023, 16:17 IST
ಅಕ್ಷರ ಗಾತ್ರ

ಗ್ವಾಲಿಯರ್‌: ರೆಸ್ಟ್‌ ಆಫ್‌ ಇಂಡಿಯಾ ತಂಡದವರು ಇರಾನಿ ಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಇನಿಂಗ್ಸ್‌ ಮುನ್ನಡೆ ಗಳಿಸಿದ್ದು, ಹಿಡಿತ ಬಿಗಿಗೊಳಿಸಿದ್ದಾರೆ.

ಗ್ವಾಲಿಯರ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ಮೊದಲ ಇನಿಂಗ್ಸ್‌ನಲ್ಲಿ 294 ರನ್‌ಗಳಿಗೆ ಆಲೌಟಾಗಿ 190 ರನ್‌ಗಳ ಹಿನ್ನಡೆ ಅನುಭವಿಸಿತು. ಯಶ್‌ ದುಬೆ (109) ಶತಕ ಗಳಿಸಿದರು.

ರೆಸ್ಟ್‌ ಆಫ್‌ ಇಂಡಿಯಾ ತಂಡ ಮೂರನೇ ದಿನ ಶುಕ್ರವಾರದ ಆಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ 1 ವಿಕೆಟ್‌ಗೆ 85 ರನ್‌ ಗಳಿಸಿದ್ದು, ಒಟ್ಟಾರೆ ಮುನ್ನಡೆಯನ್ನು 275 ರನ್‌ಗಳಿಗೆ ಹೆಚ್ಚಿಸಿಕೊಂಡಿತು. ಅಭಿಮನ್ಯು ಈಶ್ವರನ್‌ (ಬ್ಯಾಟಿಂಗ್‌ 26) ಮತ್ತು ಯಶಸ್ವಿ ಜೈಸ್ವಾಲ್‌ (ಬ್ಯಾಟಿಂಗ್‌ 58) ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್
ಮೊದಲ ಇನಿಂಗ್ಸ್
ರೆಸ್ಟ್ ಆಫ್ ಇಂಡಿಯಾ:
121.3 ಓವರ್‌ಗಳಲ್ಲಿ 484
ಮಧ್ಯಪ್ರದೇಶ: 112.5 ಓವರ್‌ಗಳಲ್ಲಿ 294 (ಯಶ್‌ ದುಬೆ 109, ಸಾರಾಂಶ್‌ ಜೈನ್‌ 66, ಪುಲಕಿತ್‌ ನಾರಂಗ್ 65ಕ್ಕೆ 4, ನವದೀಪ್‌ ಸೈನಿ 56ಕ್ಕೆ 3, ಮುಕೇಶ್‌ ಕುಮಾರ್ 44ಕ್ಕೆ 2)

ಎರಡನೇ ಇನಿಂಗ್ಸ್‌: ರೆಸ್ಟ್‌ ಆಫ್‌ ಇಂಡಿಯಾ: 18 ಓವರ್‌ಗಳಲ್ಲಿ 1 ವಿಕೆಟ್‌ಗೆ 85 (ಅಭಿಮನ್ಯು ಈಶ್ವರನ್‌ ಬ್ಯಾಟಿಂಗ್‌ 26, ಯಶಸ್ವಿ ಜೈಸ್ವಾಲ್‌ ಬ್ಯಾಟಿಂಗ್‌ 58, ಕುಮಾರ್‌ ಕಾರ್ತಿಕೇಯ 21ಕ್ಕೆ 1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT