ಮಂಗಳವಾರ, ಮಾರ್ಚ್ 21, 2023
27 °C

IPL 2022 | ಗುಜರಾತ್ ಟೈಟನ್ಸ್ ತಂಡದ 4 ವಿಕೆಟ್ ಕಬಳಿಸಿದ ಕಗಿಸೊ ರಬಾಡ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

IPL 2022 TWITTER IMAGE

ಬೆಂಗಳೂರು: ಐಪಿಎಲ್‌ 2022 ಟೂರ್ನಿಯ 48ನೇ ಪಂದ್ಯದಲ್ಲಿ ಮಂಗಳವಾರ, ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡು, ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು 143 ರನ್ ಗಳಿಸಿತು.

ಮುಂಬೈನ ಡಿ.ವೈ.ಪಾಟೀಲ್‌ ಕ್ರೀಡಾಂಗಣದಲ್ಲಿ ಆಯೋಜನೆಯಾಗಿರುವ ಇಂದಿನ ಪಂದ್ಯದಲ್ಲಿ, ಗುಜರಾತ್‌ ಟೈಟನ್ಸ್‌ ಮತ್ತು ಪಂಜಾಬ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಿವೆ.

ಪಂಜಾಬ್ ಕಿಂಗ್ಸ್ ತಂಡದ ಬೌಲರ್ ಕಗಿಸೊ ರಬಾಡ ಅವರು ಈ ಪಂದ್ಯದ ಟಾಪ್ ಪರ್ಫಾಮರ್ ಎನ್ನಿಸಿಕೊಂಡರು.

33 ರನ್ ನೀಡಿ ಕಗಿಸೊ ರಬಾಡ, ಗುಜರಾತ್ ಟೈಟನ್ಸ್ ತಂಡದ 4 ಪ್ರಮುಖ ವಿಕೆಟ್ ಕಬಳಿಸಿದರು. ಇದರಿಂದಾಗಿ ಗುಜರಾತ್ ಟೈಟನ್ಸ್ ತಂಡದ ಒಟ್ಟಾರೆ ಮೊತ್ತ 143ಕ್ಕೆ ಸೀಮಿತವಾಯಿತು.

ನಾಲ್ಕು ಓವರ್‌ ಬೌಲಿಂಗ್ ಮಾಡಿದ ಕಗಿಸೊ ರಬಾಡ, ಗುಜರಾತ್ ಟೈಟನ್ಸ್ ತಂಡಕ್ಕೆ ಅತಿ ದುಬಾರಿಯಾಗಿ ಪರಿಣಮಿಸಿದರು.

ಗುಜರಾತ್ ಟೈಟನ್ಸ್ ತಂಡದ ಬ್ಯಾಟರ್ ಸಾಯಿ ಸುದರ್ಶನ್ 50 ಎಸೆತಗಳಲ್ಲಿ 64 ರನ್ ಗಳಿಸುವ ಮೂಲಕ ಏಕೈಕ ಆಸರೆಯಾಗಿ, ತಂಡದ ಮೊತ್ತ 143ಕ್ಕೆ ಏರಿಕೆಯಾಗುವಂತೆ ನೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು