ಕರುಣ್‌ ನಾಯರ್‌ ನಿಶ್ಚಿತಾರ್ಥ

ಮಂಗಳವಾರ, ಜೂಲೈ 23, 2019
25 °C

ಕರುಣ್‌ ನಾಯರ್‌ ನಿಶ್ಚಿತಾರ್ಥ

Published:
Updated:
Prajavani

ಬೆಂಗಳೂರು: ಕರ್ನಾಟಕದ ಕ್ರಿಕೆಟಿಗ ಕರುಣ್‌ ನಾಯರ್‌, ತಮ್ಮ ಬಹುಕಾಲದ ಗೆಳತಿ ಸನಯಾ ಟಂಕರಿವಾಲಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ವಿಷಯವನ್ನು ಕರುಣ್‌ ಭಾನುವಾರ ಬಹಿರಂಗಪಡಿಸಿದ್ದಾರೆ. ‘ಶಿ ಸೆಡ್‌ ಯೆಸ್‌’ (ಅವಳು ಸಮ್ಮತಿಸಿದಳು) ಎಂದು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಭಾವಿ ಪತ್ನಿಯ ಜೊತೆಗಿರುವ ಚಿತ್ರ ಮತ್ತು ವಿಡಿಯೊವನ್ನೂ ಪೋಸ್ಟ್‌ ಮಾಡಿದ್ದಾರೆ.

ಸನಯಾ ಕೂಡಾ ತಾವಿಬ್ಬರು ಜೊತೆಗಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

27 ವರ್ಷ ವಯಸ್ಸಿನ ಕರುಣ್‌, ಭಾರತದ ಪರ ಆರು ಟೆಸ್ಟ್‌ ಮತ್ತು ಎರಡು ಏಕದಿನ ಪಂದ್ಯ ಆಡಿದ್ದಾರೆ. ಇಂಗ್ಲೆಂಡ್‌ ಎದುರಿನ ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸಿ ಮಿಂಚಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !