ವಿಶ್ವಕಪ್ ಟೂರ್ನಿ 2003 : ಪಾಕ್‌ಗೆ ಸಚಿನ್ ಆಘಾತ; ಕೀನ್ಯಾ ಅಚ್ಚರಿಯ ಓಟ

ಬುಧವಾರ, ಮೇ 22, 2019
34 °C
ವಿಶ್ವಕಪ್ ಹೆಜ್ಜೆಗುರುತುಗಳು

ವಿಶ್ವಕಪ್ ಟೂರ್ನಿ 2003 : ಪಾಕ್‌ಗೆ ಸಚಿನ್ ಆಘಾತ; ಕೀನ್ಯಾ ಅಚ್ಚರಿಯ ಓಟ

Published:
Updated:
Prajavani

2003ರ ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್‌ ಅಭಿಮಾನಿಗಳನ್ನು ಬಹುವಾಗಿ ಸೆಳೆದ ವಿಷಯಗಳಲ್ಲಿ ಎರಡು ಮಹತ್ವದ ಸಂಗತಿಗಳು ಇವೆ. ಅದರಲ್ಲಿ ಒಂದು  ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ. ಅದರಲ್ಲಿ ಸಚಿನ್ ತೆಂಡೂಲ್ಕರ್‌ ಬ್ಯಾಟಿಂಗ್ ವೈಭವ. ಇನ್ನೊಂದು; ಆ ಸಂದರ್ಭದಲ್ಲಿ ಕ್ರಿಕೆಟ್‌ ಲೋಕದ ಹಸುಗೂಸು ಕೀನ್ಯಾ ದೇಶದ ತಂಡವು ಸೆಮಿಫೈನಲ್ ಪ್ರವೇಶಿಸಿದ್ದು ಅಚ್ಚರಿ ಮೂಡಿಸಿತ್ತು.

* ಆ ವರ್ಷದ ಮಾರ್ಚ್‌ 1ರಂದು ಸೆಂಚುರಿಯನ್ ಪಾರ್ಕ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಇತ್ತ ಭಾರತದ ಕ್ರಿಕೆಟ್‌ ಅಭಿಮಾನಿಗಳು ಬೆಳಗಿನ ಜಾವ ಐದು ಗಂಟೆಯಿಂದಲೇ ಟಿವಿಗಳ ಮುಂದೆ ಪವಡಿಸಿದ್ದರು. ಪಾಕ್ ತಂಡದ ನಾಯಕ ವಕಾರ್ ಯೂನಸ್‌ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.

* ಆರಂಭಿಕ ಬ್ಯಾಟ್ಸ್‌ಮನ್ ಸಯೀದ್ ಅನ್ವರ್ (101; 126ಎಸೆತ, 7ಬೌಂಡರಿ) ಆಕರ್ಷಕ ಶತಕ ಹೊಡೆದರು. ತಂಡವು 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 273 ರನ್‌ ಗಳಿಸಿತು.

* ವಕಾರ್,  ವಾಸೀಂ ಅಕ್ರಂ ಮತ್ತು ಶೋಯಬ್ ಅಕ್ತರ್ ಅವರಂತಹ ಘಟಾನುಘಟಿ ಬೌಲರ್‌ಗಳು ಪಾಕ್ ತಂಡಕ್ಕೆ ಗೆಲುವು ಕೊಡಿಸಲು ಪಣ ತೊಟ್ಟಿದ್ದರು. ಆದರೆ, ಭಾರತದ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಜೋಡಿಯು ಪಾಕ್ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿತು. ಅಪ್ಪರ್‌ಕಟ್, ಡ್ರೈವ್, ಪುಲ್‌ ಹೊಡೆತಗಳ ಆಟ ರಂಗೇರಿತು. ಕೇವಲ 5.4 ಓವರ್‌ಗಳಲ್ಲಿ ತಂಡದ ಮೊತ್ತ 50ರ ಗಡಿ ದಾಟಿತು. ಆದರೆ ಆರನೇ ಓವರ್‌ನಲ್ಲಿ ವಕಾರ್ ಅವರ ಎರಡು ಎಸೆತಗಳಲ್ಲಿ ಸೆಹ್ವಾಗ್ ಮತ್ತು ನಾಯಕ ಗಂಗೂಲಿ ಔಟಾದರು.

* ತಂಡವನ್ನು ಸಂಕಷ್ಟದ ಹಾದಿಯಿಂದ ಗೆಲುವಿನತ್ತ ಎತ್ತಿ ತರುವಲ್ಲಿ ಸಚಿನ್ ಯಶಸ್ವಿಯಾದರು. ಮೊಹಮ್ಮದ್ ಕೈಫ್ ಜೊತೆಗೆ 102 ರನ್‌ ಸೇರಿಸಿದರು. ಸಚಿನ್ 98 ರನ್‌ ಗಳಿಸಿದರು. ಶತಕಕ್ಕೆ ಎರಡು ರನ್ ಅಗತ್ಯವಿದ್ದಾಗ ಔಟಾದರು. ನಂತರ ರಾಹುಲ್ ದ್ರಾವಿಡ್ ಮತ್ತು ಅರ್ಧಶತಕ ಬಾರಿಸಿದ ಯುವರಾಜ್ ಸಿಂಗ್ ತಂಡವನ್ನು ಜಯದ ದಡ ಸೇರಿಸಿದರು. ಭಾರತ 6 ವಿಕೆಟ್‌ಗಳಿಂದ ಗೆದ್ದರೆ, ಸಚಿನ್ ಪಂದ್ಯಶ್ರೇಷ್ಠರಾದರು.

* ಕೀನ್ಯಾ ದೇಶವು ಈ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದು ರೋಚಕಗಾಥೆ. ಈ ಹಾದಿಯಲ್ಲಿ ಸ್ಟೀವ್ ಟಿಕೊಲೊ ನಾಯಕತ್ವದ ತಂಡವು 1996ರ ವಿಶ್ವ ಚಾಂಪಿಯನ್ ಶ್ರೀಲಂಕಾ ತಂಡಕ್ಕೆ ಸೋಲುಣಿಸಿತ್ತು.  ನೈರೋಬಿಯಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಕೀನ್ಯಾ ತಂಡವು ಮೊದಲು ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 210 ರನ್ ಗಳಿಸಿತ್ತು. ಈ ಸಾಧಾರಣ ಗುರಿಯನ್ನು ಮುಟ್ಟಲು ಲಂಕಾದ   ಜಯಸೂರ್ಯ, ಮರ್ವನ್ ಅಟ್ಟಪಟ್ಟು, ಮಹೇಲ ಜಯವರ್ಧನೆ, ಅರವಿಂದ ಡಿಸಿಲ್ವಾ, ಕುಮಾರ ಸಂಗಕ್ಕಾರ ಮತ್ತು ಹಷನ್ ತಿಲಕರತ್ನೆ ಅವರಂತಹ ಬ್ಯಾಟ್ಸ್‌ಮನ್‌ಗಳಿಗೆ ಸಾಧ್ಯವಾಗಲಿಲ್ಲ.

* ಒಟ್ಟು 9 ಪಂದ್ಯಗಳಲ್ಲಿ ಆಡಿದ್ದ ಕೀನ್ಯಾ ನಾಲ್ಕರಲ್ಲಿ ಗೆದ್ದು ಐದರಲ್ಲಿ ಸೋತಿತ್ತು. ಸೆಮಿಫೈನ ಲ್‌ನಲ್ಲಿ ಭಾರತದ ಎದುರು ಪರಾಭವಗೊಂಡಿತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !