ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

MI vs KXIP: ಮುಂಬೈ ಜಯದ ಓಟದ ತಡೆಗೆ ಕಿಂಗ್ಸ್‌ ಇಲೆವನ್ ಪಂಜಾಬ್ ಛಲ

ಪಂಜಾಬ್ ತಂಡಕ್ಕೆ ರಾಹುಲ್, ಕ್ರಿಸ್ ಗೇಲ್ ಬ್ಯಾಟಿಂಗ್ ಬಲ
Last Updated 18 ಅಕ್ಟೋಬರ್ 2020, 1:30 IST
ಅಕ್ಷರ ಗಾತ್ರ

ದುಬೈ: ‘ಸಿಕ್ಸರ್ ಕಿಂಗ್’ ಕ್ರಿಸ್ ಗೇಲ್ ಕಣಕ್ಕಿಳಿದಿರುವುದರಿಂದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದಲ್ಲಿ ನವಚೈತನ್ಯ ಪ್ರವಹಿಸುತ್ತಿದೆ.

ಹೋದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರಿನ ಜಯದಲ್ಲಿ ಗೇಲ್ ಅರ್ಧಶತಕದ ಕಾಣಿಕೆ ಇತ್ತು. ಈ ಟೂರ್ನಿಯಲ್ಲಿ ಅವರು ಆಡಿದ್ದ ಮೊದಲ ಪಂದ್ಯವೂ ಅದಾಗಿತ್ತು. ಆ ಗೆಲುವಿನಿಂದ ಆತ್ಮವಿಶ್ವಾಸದಲ್ಲಿ ತೇಲುತ್ತಿರುವ ಕೆ.ಎಲ್. ರಾಹುಲ್ ನಾಯಕತ್ವದ ಪಂಜಾಬ್ ತಂಡವು ಭಾನುವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಎದುರು ಆಡಲಿದೆ.

ಈಗಾಗಲೇ 12 ಅಂಕಗಳನ್ನು ಗಳಿಸಿರುವ ಬಲಾಢ್ಯ ರೋಹಿತ್ ಶರ್ಮಾ ಬಳಗವನ್ನು ಎದುರಿಸಲು ರಾಹುಲ್ ಮತ್ತು ಮುಖ್ಯ ಕೋಚ್ ಅನಿಲ್ ಕುಂಬ್ಳೆ ಬಹಳಷ್ಟು ನಿಖರವಾದ ಯೋಜನೆ ರೂಪಿಸುವ ಒತ್ತಡದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಗೆದ್ದಿರುವ ಕಿಂಗ್ಸ್ ತಂಡವು ಪ್ಲೇ ಆಫ್‌ ಪ್ರವೇಶಿಸಲು ಇನ್ನುಳಿದಿರುವ ಎಲ್ಲ ಪಂದ್ಯಗಳಲ್ಲಿಯೂ ಗೆದ್ದರೆ ಸುರಕ್ಷಿತ.

ರಾಹುಲ್, ಮಯಂಕ್ ಅಗರವಾಲ್, ಗೇಲ್, ನಿಕೋಲಸ್ ಪೂರನ್ ಅವರು ಬ್ಯಾಟಿಂಗ್‌ ವಿಭಾಗವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ ಜಸ್‌ಪ್ರೀತ್ ಬೂಮ್ರಾ, ರಾಹುಲ್ ಚಾಹರ್, ನೇಥನ್ ಕೌಲ್ಟರ್ ನೈಲ್ ಅವರನ್ನು ಎದುರಿಸುವ ಸವಾಲು ಈಗ ಅವರ ಮುಂದಿದೆ.

ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ, ರವಿ ಬಿಷ್ಣೋಯಿ ಮತ್ತು ಮುರುಗನ್ ಅಶ್ವಿನ್ ಅವರ ಮೇಲೆಯೇ ಕಿಂಗ್ಸ್ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ಆಲ್‌ರೌಂಡ್‌ ವೈಫಲ್ಯ ಅನುಭವಿಸುತ್ತಿರುವುದು ತಂಡಕ್ಕೆ ಚಿಂತೆಯಾಗಿದೆ.

ಆದರೆ, ಮುಂಬೈ ಎಲ್ಲ ವಿಭಾಗಗಳಲ್ಲಿಯೂ ಪಾರುಪತ್ಯ ಮೆರೆಯುತ್ತಿದೆ. ಟೂರ್ನಿಯ ಮೊದಲ ಸುತ್ತಿನಲ್ಲಿಯೂ ಕಿಂಗ್ಸ್‌ ವಿರುದ್ಧ ಜಯಿಸಿತ್ತು. ರೋಹಿತ್, ಕ್ವಿಂಟನ್ ಡಿಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಕೀರನ್ ಪೊಲಾರ್ಡ್ ಅವರನ್ನು ಕಟ್ಟಿಹಾಕುವುದೇ ಬೌಲರ್‌ಗಳಿಗೆ ಕಠಿಣ ಸವಾಲು.

ಮಾರ್ಗನ್–ವಾರ್ನರ್ ಮುಖಾಮುಖಿ

ಅಬುಧಾಬಿ: ‘ಹೊಸ ನಾಯಕ’ ಏಯಾನ್ ಮಾರ್ಗನ್ ಅವರ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಡೇವಿಡ್ ವಾರ್ನರ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಭಾನುವಾರ ಸಂಜೆ ಮುಖಾಮುಖಿಯಾಗಲಿವೆ.

ದಿನೇಶ್ ಕಾರ್ತಿಕ್ ನಾಯಕತ್ವ ಬಿಟ್ಟ ಮತ್ತು ಮಾರ್ಗನ್ ವಹಿಸಿಕೊಂಡ ಶುಕ್ರವಾರದ ಪಂದ್ಯದಲ್ಲಿ ಕೋಲ್ಕತ್ತ ತಂಡವು ಮುಂಬೈ ಇಂಡಿಯನ್ಸ್ ಎದುರು ಸೋತಿತ್ತು.

ಇದೀಗ ಅಂಕಪಟ್ಟಿಯಲ್ಲಿ ತನಗಿಂತ ಒಂದು ಸ್ಥಾನ ಕೆಳಗಿರುವ ಸನ್‌ರೈಸರ್ಸ್‌ ವಿರುದ್ಧ ಜಯಿಸುವ ನಿರೀಕ್ಷೆಯಲ್ಲಿದೆ. ಆ್ಯಂಡ್ರೆ ರಸೆಲ್ ಅವರಂತಹ ಬ್ಯಾಟ್ಸ್‌ಮನ್‌ ರನ್‌ ಗಳಿಸದೇ ಇರುವುದು ತಂಡಕ್ಕೆ ಹಿನ್ನಡೆಯಾಗುತ್ತಿದೆ. ಪ್ಯಾಟ್ ಕಮಿನ್ಸ್‌ ಆಲ್‌ರೌಂಡ್ ಆಟವಾಡುತ್ತಿರುವುದು ಹೋರಾಟದ ವಿಶ್ವಾಸ ಮೂಡಿದೆ. ಆದರೆ ಸನ್‌ರೈಸರ್ಸ್‌ ತಂಡದ ಬೌಲಿಂಗ್‌ ವಿಭಾಗವು ಇನ್ನಷ್ಟು ಶಕ್ತಿಯುತವಾಗಿ ಕಣಕ್ಕಿಳಿಯಬೇಕು. ಜೇಸನ್ ಹೋಲ್ಡರ್‌ ಕಣಕ್ಕಿಳಿಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT