ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಒಗ್ಗಟ್ಟಿಲ್ಲ: ಕೋಚ್ ಗ್ಯಾರಿ ಕರ್ಸ್ಟನ್‌

Published 17 ಜೂನ್ 2024, 15:14 IST
Last Updated 17 ಜೂನ್ 2024, 15:14 IST
ಅಕ್ಷರ ಗಾತ್ರ

ನವದೆಹಲಿ: ‘ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಒಗ್ಗಟ್ಟು ಇರಲಿಲ್ಲ. ತಮ್ಮ ಸುದೀರ್ಘ ಕೋಚಿಂಗ್ ವೃತ್ತಿಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಹಿಂದೆಂದೂ ನೋಡಿರಲಿಲ್ಲ’ ಎಂದು ತಂಡದ ಮುಖ್ಯ ಕೋಚ್ ಗ್ಯಾರಿ ಕರ್ಸ್ಟನ್‌ ಟೀಕಾಪ್ರಹಾರ ನಡೆಸಿದ್ದಾರೆ.

ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ20 ವಿಶ್ವಕ‍ಪ್‌ನಿಂದ ಪಾಕಿಸ್ತಾನ ತಂಡವು ಗುಂಪು ಹಂತದಿಂದ ನಿರ್ಗಮಿಸಿದ ಬೆನ್ನಲ್ಲೇ ಕರ್ಸ್ಟನ್ ಈ ಹೇಳಿಕೆ ನೀಡಿದ್ದಾರೆ. 

ಕಳೆದ ಆವೃತ್ತಿಯಲ್ಲಿ ರನ್ನರ್ಸ್ ಅಪ್ ಆಗಿದ್ದ ಪಾಕಿಸ್ತಾನ ತಂಡ, ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಅಮೆರಿಕ ಎದುರು ಆಘಾತಕಾರಿ ಸೋಲು ಕಂಡಿದ್ದ ಪಾಕ್‌ ತಂಡ, ತನ್ನ ಬದ್ಧ ಎದುರಾಳಿ ಭಾರತದ ಎದುರೂ ಸೋತಿತ್ತು.‌

‘ಪಾಕ್ ತಂಡದಲ್ಲಿ ಒಗ್ಗಟ್ಟೇ ಇರಲಿಲ್ಲ. ತಮ್ಮದು ತಂಡವೆಂದು ಅವರು ಹೇಳಿಕೊಂಡರು. ಆದರೆ ತಂಡವಾಗಿ ಆಡಲಿಲ್ಲ. ಒಬ್ಬರು ಇನ್ನೊಬ್ಬರ ನೆರವಿಗೆ ಬರುತ್ತಿರಲಿಲ್ಲ. ಎಲ್ಲರೂ ಬೇರೆ ಬೇರೆಯಾಗಿರುತ್ತಿದ್ದರು. ನಾನು ಬೇರೆ ಬೇರೆ ತಂಡಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ ಇಂಥ ಸ್ಥಿತಿಯನ್ನೆಂದೂ ನೋಡಿರಲಿಲ್ಲ’ ಎಂದು ಕರ್ಸ್ಟನ್ ಹೇಳಿರುವುದನ್ನು ಹಿರಿಯ ಪತ್ರಕರ್ತರೊಬ್ಬರು ವರದಿ ಮಾಡಿದ್ದಾರೆ.

ಆಟಗಾರರ ಫಿಟ್ನೆಸ್ ಮಟ್ಟದ ಬಗ್ಗೆಯೂ ಕರ್ಸ್ಟನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವದ ಇತರ ಭಾಗಗಳಿಗೆ ಹೋಲಿಸಿದರೆ ಕೌಶಲ ಮಟ್ಟದಲ್ಲಿ ತಂಡವು ತುಂಬಾ ಹಿಂದುಳಿದಿದೆ ಅವರು ಹೇಳಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಜಿಯೊಸೂಪರ್‌.ಟಿವಿ4 ವರದಿ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT