ಗುರುವಾರ , ಅಕ್ಟೋಬರ್ 29, 2020
21 °C

ತನ್ನ ಬೌಲಿಂಗ್‌ಗೆ ತಾನೇ ವೀಕ್ಷಕ ವಿವರಣೆ ನೀಡಿದ ಕುಲದೀಪ್‌ ಯಾದವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರೀಡಾಪಟುವೊಬ್ಬ ತನ್ನ ಆಟಕ್ಕೆ ತಾನೇ ವೀಕ್ಷಕ ವಿವರಣೆ ನೀಡಿದರೆ ಹೇಗಿರುತ್ತದೆ?
–ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ್ದ ಕುಲದೀಪ್‌ ಯಾದವ್‌, ಅಂತಹ ಪ್ರಯತ್ನ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಐದು ವಿಕೆಟ್‌ ಪಡೆದ ಖುಷಿಯಲ್ಲಿದ್ದ ಯಾದವ್‌, ಹೋಟೆಲ್‌ ಕೊಠಡಿಯಲ್ಲಿ ಕುಳಿತು ಈ ರೀತಿ ಮಾಡಿದ್ದಾರೆ. ಲ್ಯಾಪ್‌ಟಾಪ್‌ನಲ್ಲಿ ಪಂದ್ಯದ ಹೈಲೈಟ್ಸ್‌ಗಳನ್ನು ವೀಕ್ಷಿಸುತ್ತಿದ್ದ ಯಾದವ್‌, ಪಂದ್ಯದಲ್ಲಿ ತಾವು ಬೌಲಿಂಗ್ ಮಾಡಿದ ದೃಶ್ಯ ಪ್ರಸಾರವಾದ ಸಂದರ್ಭದಲ್ಲಿ ವೀಕ್ಷಕ ವಿವರಣೆ ನೀಡಿದ್ದಾರೆ.

ಈ ವಿಡಿಯೊವನ್ನು ಬಿಸಿಸಿಐ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, 3 ಸಾವಿರಕ್ಕೂ ಹೆಚ್ಚು ಜನರು ಮೆಚ್ಚಿಕೊಂಡಿದ್ದಾರೆ.

ಪಂದ್ಯವನ್ನು ಭಾರತ ಇನಿಂಗ್ಸ್‌ ಹಾಗೂ 272 ರನ್‌ಗಳ ದಾಖಲೆಯ ಅಂತರರದಿಂದ ಗೆದ್ದುಕೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ 1 ವಿಕೆಟ್‌ ಪಡೆದಿದ್ದ ಯಾದವ್‌ ಎರಡನೇ ಇನಿಂಗ್ಸ್‌ನಲ್ಲಿ 57 ರನ್‌ ನೀಡಿ ಐದು ವಿಕೆಟ್‌ ಉರುಳಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು