ಮಂಗಳವಾರ, ಆಗಸ್ಟ್ 3, 2021
28 °C

ಎಂಜಲು ಬಳಕೆ ಬಗ್ಗೆ ಚರ್ಚೆ ಆಗುತ್ತಿವೆ; ಆದರೆ, ಕ್ರಿಕೆಟ್ ಆರಂಭ ಮುಖ್ಯ: ಕುಂಬ್ಳೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚೆಂಡಿನ ಹೊಳಪು ಉಳಿಸಲು ಎಂಜಲು ಬಳಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಇಲ್ಲಿ ಪ್ರಮುಖವಾಗಿ ಕ್ರಿಕೆಟ್‌ ಆರಂಭಿಸುವುದು ಮುಖ್ಯವಾಗಿದೆ. ಜಗತ್ತು ಸಹಜ ಸ್ಥಿತಿಗೆ ಮರಳಿದರೆ ಎಲ್ಲವೂ ಹಾದಿಗೆ ಬರುತ್ತವೆ ಎಂದು ಐಸಿಸಿ ಕ್ರಿಕೆಟ್ ಸಮಿತಿ ಮುಖ್ಯಸ್ಥ ಅನಿಲ್ ಕುಂಬ್ಳೆ ಹೇಳಿದ್ಧಾರೆ.

‘ಎಂಜಲು ಬಳಕೆಯನ್ನು ತಾತ್ಕಾಲಿಕವಾಗಿ ಬಿಡಬೇಕು. ಒಂದೊಮ್ಮೆ ಕೊರೊನಾ ಹತೋಟಿಗೆ ಬಂದಾಗ ಮತ್ತೆ ಎಲ್ಲವೂ ಮೊದಲಿನಂತಾಗುವ ನಿರೀಕ್ಷೆ ಇದೆ. ಅದರಲ್ಲಿಯೂ ಎಂಜಲು ಬಳಕೆಯ ಹೆಚ್ಚು ಅಗತ್ಯ ಇರುವುದು ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ. ಆದ್ದರಿಂದ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಗಳಲ್ಲಿ ಆಡುವಾಗ ತಂಡದಲ್ಲಿ ಇಬ್ಬರು ಸ್ಪಿನ್ನರ್‌ಗಳಿಗೆ ಅವಕಾಶ ಕೊಡಿ. ಪಿಚ್‌ ಸಿದ್ಧತೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಎಲ್ಲರಿಗೂ ಅನುಕೂಲವಾಗುತ್ತದೆ. ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಚೆಂಡಿನ ಹೊಳಪಿನ ಪ್ರಶ್ನೆಯೇ ಇಲ್ಲವಲ್ಲ’ ಎಂದು ಎಫ್‌ಐಸಿಸಿಐ ವೆಬಿನಾರ್‌ನಲ್ಲಿ  ಕುಂಬ್ಳೆ ಹೇಳಿದ್ದಾರೆ.

‘ಎಂಜಲು ಬದಲಿಗೆ ಬೇರೆ ವಸ್ತುಗಳನ್ನು ಬಳಸುವ ಕುರಿತು ಚರ್ಚೆ ನಡೆಯುತ್ತಿದೆ. ಆದರೆ ಚೆಂಡು ವಿರೂಪಗೊಳ್ಳದಂತೆ ಎಚ್ಚರಿಕೆ ವಹಿಸುವುದು ಪ್ರಮುಖವಾಗಿದೆ. ಅದಕ್ಕಾಗಿ ನಮ್ಮಲ್ಲಿ ಈಗಾಗಲೇ ಹಲವು ಕಟ್ಟುನಿಟ್ಟಾದ ನಿಯಮಗಳಿವೆ. ಆದ್ದರಿಂದ ವಿನೂತನವಾದ ಹಾದಿಯನ್ನು ಕಂಡುಕೊಳ್ಳಬೇಕು. ಚೆಂಡು ವಿರೂಪ ನಿಯಮಕ್ಕೆ ಅಪಚಾರವೂ ಆಗಬಾರದು’ ಎಂದು ಹೇಳಿದ್ದಾರೆ.

‘ಆಟಗಾರರಿಗೆ ಆರಂಭದಲ್ಲಿ ತುಸು ತೊಂದರೆಯಾಗಬಹುದು. ಆದ್ದರಿಂದ ಅವರಿಗೆ ಈ ಕುರಿತು ಸೂಕ್ತ ತರಬೇತಿ ನೀಡಬೇಕು. ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಆಡಲು ಕಣಕ್ಕಿಳಿಯುವ ಮುನ್ನ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ಬಂದರೆ ಸುಲಭ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು