ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಸಿಎ: ಲಿಸಾ ಮೊದಲ ಮಹಿಳಾ ಅಧ್ಯಕ್ಷೆ

Last Updated 21 ಜೂನ್ 2022, 13:35 IST
ಅಕ್ಷರ ಗಾತ್ರ

ಲಂಡನ್‌: ಆಸ್ಟ್ರೇಲಿಯಾದ ಲಿಸಾ ಸ್ಥಳೇಕರ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟರ್ಸ್ ಸಂಸ್ಥೆಗಳ ಫೆಡರೇಷನ್‌ಗೆ (ಎಫ್‌ಐಸಿಎ) ಮೊದಲ ಮಹಿಳಾ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾರೆ.

ಸ್ವಿಟ್ಜರ್ಲೆಂಡ್‌ನ ನಿಯೊನ್‌ನಲ್ಲಿ ನಡೆದ ಎಫ್‌ಐಸಿಎನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಲಿಸಾ ಅವರ ನೇಮಕವನ್ನು ದೃಢಪಡಿಸಲಾಗಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕಿ 42 ವರ್ಷದ ಲಿಸಾ, ಈ ಹಿಂದೆ ದಕ್ಷಿಣ ಆಫ್ರಿಕಾದ ಬ್ಯಾರಿ ರಿಚರ್ಡ್ಸ್, ವೆಸ್ಟ್ ಇಂಡೀಸ್‌ನ ಜಿಮ್ಮಿ ಆ್ಯಡಮ್ಸ್ ಮತ್ತು ಇಂಗ್ಲೆಂಡ್‌ನ ವಿಕ್ರಂ ಸೋಲಂಕಿ ನಿರ್ವಹಿಸಿದ್ದ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.

ಆಸ್ಟ್ರೇಲಿಯಾ ಪರ ಮೂರೂ ಮಾದರಿಗಳಲ್ಲಿ 187 ಅಂತರರಾಷ್ಟ್ರೀಯ ಪಂದ್ಯಗಳನ್ನು ಲಿಸಾ ಆಡಿದ್ದಾರೆ. 2005, 2013ರಲ್ಲಿ ಏಕದಿನ ವಿಶ್ವಕಪ್‌ ಮತ್ತು 2010, 2012ರಲ್ಲಿ ಟಿ20 ವಿಶ್ವಕಪ್ ಟೂರ್ನಿಯ ಜಯಿಸಿದ ತಂಡದ ಭಾಗವಾಗಿದ್ದರು.

2021ರಲ್ಲಿ ಲಿಸಾ ಅವರು ಆಸ್ಟ್ರೇಲಿಯಾದ ‘ಕ್ರಿಕೆಟ್‌ ಹಾಲ್‌ ಆಫ್ ಫೇಮ್‘ ಗೌರವಕ್ಕೆ ಭಾಜನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT