ಬುಧವಾರ, ಜನವರಿ 22, 2020
16 °C
ವರ್ಷದ ಸಾಧನೆ

ಟೆಸ್ಟ್ ಕ್ರಿಕೆಟ್: ಈ ವರ್ಷ 1000 ರನ್ ಪೂರೈಸಿದ ಏಕೈಕ ಬ್ಯಾಟ್ಸ್‌ಮನ್ ಲಾಬುಶೇನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರ್ತ್: ನ್ಯೂಜಿಲೆಂಡ್‌ ವಿರುದ್ಧದ ಪಿಂಕ್‌ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶತಕ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ ಆಸ್ಟ್ರೇಲಿಯಾ ಆಟಗಾರ ಮಾರ್ನಸ್ ಲಾಬುಶೇನ್‌, ಈ ವರ್ಷ ಆಡಿದ ಟೆಸ್ಟ್‌ ಪಂದ್ಯಗಳಿಂದ ಒಂದು ಸಾವಿರ ರನ್‌ ಪೂರೈಸಿದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೆ ಭಾಜನರಾದರು. ಮಾತ್ರವಲ್ಲದೆ ಈ ವರ್ಷ ಹೆಚ್ಚು ಬೌಂಡರಿ (123) ಬಾರಿಸಿದ ಸಾಧನೆಯೂ ಅವರದಾಯಿತು.

ಮಾರ್ನಸ್‌ ಈ ವರ್ಷ ಒಟ್ಟು 10 ಟೆಸ್ಟ್‌ಗಳ 15 ಇನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿದ್ದಾರೆ. 3 ಶತಕ ಹಾಗೂ ಆರು ಅರ್ಧಶತಕಗಳೊಂದಿಗೆ 68.13ರ ಸರಾಸರಿಯಲ್ಲಿ ಒಟ್ಟು 1,022 ರನ್‌ ಕಲೆಹಾಕಿದ್ದಾರೆ.

ಈ ವರ್ಷ ಆರಂಭದಲ್ಲಿ ಐಸಿಸಿ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ ಪಟ್ಟಿಯಲ್ಲಿ 110ನೇ ಸ್ಥಾನದಲ್ಲಿದ್ದರು. ಆದರೆ, ಈ ವರ್ಷ ಅವರು ತೋರಿರುವ ಅಮೋಘ ಪ್ರದರ್ಶನದಿಂದಾಗಿ ಇದೀಗ 8ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರ ಖಾತೆಯಲ್ಲಿ 731 ಪಾಯಿಂಟ್ಸ್‌ ಇವೆ.

ಇದನ್ನೂ ಓದಿ: 

ಈ ವರ್ಷ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್‌ ಎರಡನೇ ಸ್ಥಾನದಲ್ಲಿದ್ದಾರೆ. ಅವರು 7 ಪಂದ್ಯಗಳ 11 ಇನಿಂಗ್ಸ್‌ಗಳಿಂದ 873 ರನ್‌ ಕಲೆ ಹಾಕಿದ್ದಾರೆ.

ಇಲ್ಲಿ ಗುರುವಾರ ಆರಂಭವಾದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾ 416 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ನ್ಯೂಜಿಲೆಂಡ್‌ ತಂಡ 166 ರನ್‌ ಗಳಿಷಲಷ್ಟೇ ಶಕ್ತವಾಗಿತ್ತು. 250 ರನ್‌ಗಳ ಮುನ್ನಡೆ ಸಾಧಿಸಿ ಎರಡನೇ ಇನಿಂಗ್ಸ್‌ ಆರಂಭಿಸಿದ ಆಸಿಸ್‌, ಮೂರನೇ ದಿನದಾಟದ ಅಂತ್ಯಕ್ಕೆ 57 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 167 ರನ್‌ ಗಳಿಸಿದೆ.

ಈ ಪಂದ್ಯದ ಎರಡೂ ಇನಿಂಗ್ಸ್‌ಗಳಿಂದ ಒಟ್ಟು 62 ರನ್‌ ಗಳಿಸಿದ ಡೇವಿಡ್‌ ಮಾರ್ನರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 7000 ರನ್‌ ಪೂರೈಸಿದ ಸಾಧನೆಯನ್ನೂ ಮಾಡಿದರು.

ಇದನ್ನೂ ಓದಿ: AUS vs NZ | ಟೆಸ್ಟ್ ಕ್ರಿಕೆಟ್‌ನಲ್ಲಿ 7,000 ರನ್‌ ಪೂರೈಸಿದ ಡೇವಿಡ್ ವಾರ್ನರ್

ಟೆಸ್ಟ್ ಕ್ರಿಕೆಟ್‌ನಲ್ಲಿ ಈ ವರ್ಷ ಹೆಚ್ಚು ರನ್‌ ಗಳಿಸಿದ 10 ಬ್ಯಾಟ್ಸ್‌ಮನ್‌ಗಳು

01 ಮಾರ್ನಸ್ ಲಾಬುಶೇನ್‌ 10 15 1022
02 ಸ್ಟೀವ್‌ ಸ್ಮಿತ್ 7 11 873
03 ಜೋ ರೂಟ್‌ 11 21 774
04 ಬೆನ್‌ ಸ್ಟೋಕ್ಸ್‌ 10 19 772
05 ಮಯಂಕ್‌ ಅಗರವಾಲ್ 8 11 754
06 ಜೋ ಬರ್ನ್ಸ್‌ 11 21 731
07 ಡೇವಿಡ್ ವಾರ್ನರ್ 8 14 646
08 ಅಜಿಂಕ್ಯ ರಹಾನೆ 8 11 642
09 ವಿರಾಟ್‌ ಕೊಹ್ಲಿ 8 11 612
10

ಟ್ರಾವಿಸ್‌ ಹೆಡ್

10

15​​​

600

ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 146.2 ಓವರ್‌ಗಳಲ್ಲಿ 416
ಡೇವಿಡ್ ವಾರ್ನರ್ 43, ಮಾರ್ನಸ್ ಲಾಬುಶೇನ್ 143, ಸ್ಟೀವ್ ಸ್ಮಿತ್ 43, ಟ್ರಾವಿಸ್ ಹೆಡ್ 56, ಟಿಮ್ ಪೆನ್ 39, ಪ್ಯಾಟ್ ಕಮಿನ್ಸ್ 20, ಮಿಚೆಲ್ ಸ್ಟಾರ್ಕ್ 30
ಟಿಮ್ ಸೌಥಿ 93ಕ್ಕೆ 4, ನೀಲ್ ವಾಗ್ನರ್ 92ಕ್ಕೆ 4

ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 55.2 ಓವರ್‌ಗಳಲ್ಲಿ 166
ಕೇನ್ ವಿಲಿಯಮ್ಸನ್ 34, ರಾಸ್ ಟೇಲರ್ 80
ಮಿಚೆಲ್ ಸ್ಟಾರ್ಕ್ 52ಕ್ಕೆ 5, ನಾಥನ್‌ ಲಯೋನ್‌ 48ಕ್ಕೆ 2

ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್: 57 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 167
ಮಾರ್ನಸ್ ಲಾಬುಶೇನ್ 50, ಜೋ ಬರ್ನ್ಸ್‌ 53, ಡೇವಿಡ್ ವಾರ್ನರ್ 19, ಸ್ಟೀವ್‌ ಸ್ಮಿತ್‌ 16
ಟಿಮ್ ಸೌಥಿ 63ಕ್ಕೆ 4, ನೀಲ್ ವಾಗ್ನರ್ 40 ಕ್ಕೆ 2

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು