ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PAK vs BAN | 2ನೇ ಕ್ರಿಕೆಟ್‌ ಟೆಸ್ಟ್‌: ಪಾಕ್‌ಗೆ ಮೆಹಿದಿ ಹಸನ್ ಕಡಿವಾಣ

Published : 31 ಆಗಸ್ಟ್ 2024, 15:51 IST
Last Updated : 31 ಆಗಸ್ಟ್ 2024, 15:51 IST
ಫಾಲೋ ಮಾಡಿ
Comments

ರಾವಲ್ಪಿಂಡಿ: ಆಫ್‌ ಸ್ಪಿನ್ನರ್‌ ಮೆಹಿದಿ ಹಸನ್ ಮಿರಾಜ್ ಅವರ ಐದು ವಿಕೆಟ್‌ ಗೊಂಚಲಿನ ನೆರವಿನಿಂದ ಬಾಂಗ್ಲಾದೇಶ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡ ದೊಡ್ಡ ಮೊತ್ತ ಗಳಿಸದಂತೆ ತಡೆಯಿತು. ಉತ್ತಮ ಆರಂಭ ಮಾಡಿದ್ದ ಪಾಕಿಸ್ತಾನ ಎರಡನೇ ದಿನವಾದ ಶನಿವಾರ 274 ರನ್‌ಗಳಿಗೆ ಆಲೌಟ್‌ ಆಯಿತು.

26 ವರ್ಷ ವಯಸ್ಸಿನ ಮಿರಾಜ್ ಟೆಸ್ಟ್‌ ಪಂದ್ಯಗಳಲ್ಲಿ ಹತ್ತನೇ ಬಾರಿ ಐದು ವಿಕೆಟ್‌ ಬುತ್ತಿ ಪಡೆದರು. ಬಾಂಗ್ಲಾದೇಶ, ತವರಿನಿಂದ ಹೊರಗೆ ಮೂರನೇ ಸಲ ಟೆಸ್ಟ್‌ ಸರಣಿಯೊಂದನ್ನು ಗೆಲ್ಲುವ ಯತ್ನದಲ್ಲಿದೆ. ದಿನದಾಟ ಮುಗಿದಾಗ ಬಾಂಗ್ಲಾದೇಶ ವಿಕೆಟ್‌ ನಷ್ಟವಿಲ್ಲದೇ 10 ರನ್ ಗಳಿಸಿದೆ.

ಒಂದು ಹಂತದಲ್ಲಿ 1 ವಿಕೆಟ್‌ಗೆ 99 ರನ್‌ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಪಾಕಿಸ್ತಾನ ನಂತರ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಹೋಯಿತು. 

ಪಾಕಿಸ್ತಾನದ ನಾಯಕ ಶಾನ್ ಮಸೂದ್‌ (57, 69ಎ) ಮತ್ತು ಆರಂಭ ಆಟಗಾರ ಸಯಿಮ್ ಅಯೂಬ್ (58, 110ಎ) ಅವರ ವಿಕೆಟ್‌ಗಳನ್ನು ಮಿರಾಜ್ ಪಡೆದರು.

ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶದ 10 ವಿಕೆಟ್‌ ಗೆಲುವಿನಲ್ಲಿ ಅವರು 21 ರನ್ನಿಗೆ 4 ವಿಕೆಟ್‌ ಪಡೆದು ಮಿಂಚಿದ್ದರು. ಮೆಹಿದಿ ಅವರಿಗೆ ಉತ್ತಮ ಬೆಂಬಲ ನೀಡಿದ ತಸ್ಕಿನ್ ಅಹ್ಮದ್ 57 ರನ್ನಿಗೆ 3 ವಿಕೆಟ್‌ ಪಡೆದರು.

ಸ್ಕೋರುಗಳು: ಮೊದಲ ಇನಿಂಗ್ಸ್‌: ಪಾಕಿಸ್ತಾನ: 85.1 ಓವರುಗಳಲ್ಲಿ 274 (ಸಯಿಮ್ ಅಯೂಬ್ 58, ಶಾನ್‌ ಮಸೂದ್‌ 57, ಮೊಹಮ್ಮದ್ ರಿಜ್ವಾನ್ 29, ಸಲ್ಮಾನ್ ಆಘಾ 54; ತಸ್ಕಿನ್ ಅಹ್ಮದ್ 57ಕ್ಕೆ3, ಮಹಿದಿ ಹಸನ್ ಮಿರಾಜ್ 61ಕ್ಕೆ5); ಬಾಂಗ್ಲಾದೇಶ: 2 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 10.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT