ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂದ್ಯದಲ್ಲಿ ನಿಧಾನ ಗತಿಯ ಓವರ್‌ ತಪ್ಪಿಸಲು ಮೈಕಲ್ ವಾನ್‌ ಕೊಟ್ಟ ಸಲಹೆ ಇದು

Published 13 ಜೂನ್ 2023, 11:19 IST
Last Updated 13 ಜೂನ್ 2023, 11:19 IST
ಅಕ್ಷರ ಗಾತ್ರ

ಭಾರತ – ಆಸ್ಟ್ರೇಲಿಯಾ ನಡುವೆ ಇತ್ತೀಚೆಗೆ ಅಂತ್ಯಗೊಂಡ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಉಭಯ ತಂಡಗಳೂ ನಿಧಾನಗತಿಯ ಓವರ್ ಮಾಡಿದ್ದು, ಕ್ರಿಕೆಟ್‌ ತಜ್ಞರು ಹಾಗೂ ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನು ತಪ್ಪಿಸಲು ಇಂಗ್ಲೆಂಡ್ ತಂಡ ಮಾಜಿ ಆಟಗಾರ ಮೈಕಲ್‌ ವಾನ್‌ ಸಲಹೆಯೊಂದನ್ನು ಮುಂದಿಟ್ಟಿದ್ದಾರೆ. ಎದುರಾಳಿ ತಂಡಕ್ಕೆ ಭಾರೀ ರನ್ ಪೆನಾಲ್ಟಿಯಾಗಿ ನೀಡುವುದು ಇದಕ್ಕೆ ಪರಿಹಾರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ ದಂಡ ವಿಧಿಸುವುದು ಇದಕ್ಕೆ ಪರಿಣಾಮಕಾರಿಯಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ದಂಡ ಇದಕ್ಕೆ ಕೆಲಸ ಮಾಡುವುದಿಲ್ಲ. ದಿನದಾಟದ ಅಂತ್ಯಕ್ಕೆ ಎದುರಾಳಿ ತಂಡಕ್ಕೆ ಇಂತಿಷ್ಟು ರನ್ ಪೆನಾಲ್ಟಿಯಾಗಿ ನೀಡಬಹುದು. ಪ್ರತೀ ಓವರ್‌ಗೆ 20 ರನ್‌ಗಳಂತೆ‘ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಪಂದ್ಯದಲ್ಲಿ ನಿಧಾನಗತಿಯ ಓವರ್‌ ಮಾಡಿದ್ದಕ್ಕೆ ಭಾರತ ತಂಡಕ್ಕೆ ಪಂದ್ಯದ ಸಂಭಾವನೆಯ ಶೇ 100 ಹಾಗೂ ಆಸ್ಟ್ರೇಲಿಯಾ ತಂಡಕ್ಕೆ ಪಂದ್ಯದ ಸಂಭಾವನೆಯ ಶೇ 80 ರಷ್ಟು ದಂಡ ವಿಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT