ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಮತ್ತೆ ಮಿಥಾಲಿ ಆಸರೆ

Last Updated 1 ಜುಲೈ 2021, 3:41 IST
ಅಕ್ಷರ ಗಾತ್ರ

ಟಾಂಟನ್: ಆತಿಥೇಯ ಇಂಗ್ಲೆಂಡ್‌ ಬೌಲರ್‌ಗಳ ಪರಿಣಾಮಕಾರಿ ದಾಳಿಯ ಮುಂದೆ ಮತ್ತೊಮ್ಮೆ ಮಿಂಚಿದ ಮಿಥಾಲಿ ರಾಜ್ ಭಾರತ ತಂಡಕ್ಕೆ ಆಸರೆಯಾದರು.

ಬುಧವಾರ ಇಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಮಿಥಾಲಿ (59; 92ಎ, 6ಬೌಂ) ನೆರವಿನಿಂದ ಭಾರತ ಮಹಿಳಾ ತಂಡವು 50 ಓವರ್‌ಗಳಲ್ಲಿ 221 ರನ್‌ ಗಳಿಸಿತು. ಮೊದಲ ಪಂದ್ಯದಲ್ಲಿಯೂ ಮಿಥಾಲಿ ರಾಜ್ ಉತ್ತಮವಾಗಿ ಆಡಿದ್ದರು.

ಈ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ (ಔಟಾಗದೆ 20) ಮತ್ತು ಪೂನಂ ಯಾದವ್ (10 ರನ್) ಅವರು ಕೊನೆಯ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 29 ರನ್‌ಗಳಿಂದಾಗಿ ತಂಡವು ಇನ್ನೂರು ರನ್‌ಗಳ ಗಡಿ ದಾಟಿತು.

ಇಂಗ್ಲೆಂಡ್‌ನ ಮಧ್ಯಮವೇಗಿ ಕೇಟ್ ಕ್ರಾಸ್ (34ಕ್ಕೆ5) ಅವರ ಉತ್ತಮ ದಾಳಿ ಮಾಡಿದರು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಬೌಲರ್‌ಗಳಿಗೆ ಆರಂಭದಲ್ಲಿ ಯಶಸ್ಸು ಸಿಗಲಿಲ್ಲ. ಸ್ಮೃತಿ ಮಂದಾನ (22; 30ಎ) ಮತ್ತು ಯುವಪ್ರತಿಭೆ ಶಫಾಲಿ ವರ್ಮಾ (44; 55ಎ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 56 ರನ್ ಗಳಿಸಿದರು.

12ನೇ ಓವರ್‌ನಲ್ಲಿ ಮಂದಾನ ವಿಕೆಟ್ ಗಳಿಸಿದ ಕೇಟ್ ಕ್ರಾಸ್, 16ನೇ ಓವರ್‌ನಲ್ಲಿ ಜೆಮಿಮಾ ರಾಡ್ರಿಗಸ್‌ (8ರನ್) ಅವರಿಗೂ ಪೆವಿಲಿಯನ್ ದಾರಿ ತೋರಿದರು. ಆತ್ಮವಿಶ್ವಾಸದಿಂದ ಆಡುತ್ತಿದ್ದ ಶಫಾಲಿ ಕೂಡ ನಂತರದ ಓವರ್‌ನಲ್ಲಿ ಎಕ್ಸೆಲ್‌ಸ್ಟೋನ್ ಎಸೆತದಲ್ಲಿ ಔಟಾದರು.

ಈ ಹಂತದಲ್ಲಿ ಮಿಥಾಲಿ ಮತ್ತು ಹರ್ಮನ್‌ಪ್ರೀತ್ ಕೌರ್ (19; 39ಎ) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 68 ರನ್ ಗಳಿಸಿದರು. ಲಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದ ಕೌರ್ ವಿಕೆಟ್ ಕಬಳಿಸಿದ ಕೇಟ್ ಕ್ರಾಸ್ ಸಂಭ್ರಮಿಸಿದರು. ಇದರಿಂದಾಗಿ ಇನಿಂಗ್ಸ್ ಕಟ್ಟುವ ಹೊಣೆ ನಾಯಕಿಯ ಮೇಲೆ ಬಿತ್ತು. ಆದರೆ, ಕೆಳಕ್ರಮಾಂಕದ ಬ್ಯಾಟರ್‌ಗಳು ಬೇಗನೆ ಔಟಾದರು.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 221 (ಸ್ಮೃತಿ ಮಂದಾನ 22, ಶಫಾಲಿ ವರ್ಮಾ 44, ಮಿಥಾಲಿ ರಾಜ್ 59, ಹರ್ಮನ್‌ಪ್ರೀತ್ ಕೌರ್ 19, ಜೂಲನ್ ಗೋಸ್ವಾಮಿ ಔಟಾಗದೆ 20, ಪೂನಂ ಯಾದವ್ 10, ಸೋಫಿ ಎಕ್ಸೆಲ್‌ಸ್ಟೋನ್ 25ಕ್ಕೆ2, ಕೇಟ್ ಕ್ರಾಸ್ 34ಕ್ಕೆ5) ವಿವರ ಅಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT