ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC | ಟಿ20 ಕ್ರಿಕೆಟ್ ತಂಡದ ನಾಯಕತ್ವ ತ್ಯಜಿಸಿದ ಅಫ್ಗಾನ್ ನಾಯಕ ಮೊಹಮ್ಮದ್ ನಬಿ

Last Updated 4 ನವೆಂಬರ್ 2022, 14:45 IST
ಅಕ್ಷರ ಗಾತ್ರ

ಅಡಿಲೇಡ್‌: ಮೊಹಮ್ಮದ್‌ ನಬಿ ಅವರು ಅಫ್ಗಾನಿಸ್ತಾನ ಟಿ20 ಕ್ರಿಕೆಟ್‌ ತಂಡದ ನಾಯಕತ್ವ ತ್ಯಜಿಸಿದ್ದಾರೆ. ಆಸ್ಟ್ರೇಲಿಯಾ ಎದುರಿನ ಪಂದ್ಯದ ಬೆನ್ನಲ್ಲೇ ಅವರ ನಿರ್ಧಾರ ಹೊರಬಿದ್ದಿದೆ.

‘ವಿಶ್ವಕಪ್‌ ಟೂರ್ನಿಗೆ ನಮಗೆ ಸರಿಯಾಗಿ ಸಿದ್ಧತೆ ನಡೆಸಲು ಆಗಿಲ್ಲ. ಕಳೆದ ಕೆಲ ಸರಣಿಗಳಲ್ಲಿ ತಂಡದ ಮ್ಯಾನೇಜರ್‌, ಆಯ್ಕೆ ಸಮಿತಿ ಮತ್ತು ನಾಯಕನ ನಡುವೆ ಕೆಲವೊಂದು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಇದು ತಂಡದ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ’ ಎಂದು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಆದ್ದರಿಂದ ತಕ್ಷಣದಿಂದಲೇ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ತಂಡದ ಆಡಳಿತ ಬಯಸುವುದಾದರೆ ಆಟಗಾರನಾಗಿ ಮುಂದುವರಿಯಲು ಸಿದ್ಧನಿದ್ದೇನೆ’ ಎಂದಿದ್ದಾರೆ.

ಅಫ್ಗನ್‌ ತಂಡ ಯಾವುದೇ ಗೆಲುವು ಪಡೆಯದೆ ವಿಶ್ವಕಪ್ ಟೂರ್ನಿಯಲ್ಲಿ ಅಭಿಯಾನ ಕೊನೆಗೊಳಿಸಿದೆ. ಎರಡು ಪಂದ್ಯಗಳು ರದ್ದುಗೊಂಡರೆ, ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT