ಲಂಡನ್ (ಎಎಫ್ಪಿ): ವಿಶ್ವಕಪ್ ವಿಜೇತ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಏಯಾನ್ ಮಾರ್ಗನ್ ಕ್ರಿಕೆಟ್ಗೆ ಮಂಗಳವಾರ ನಿವೃತ್ತಿ ಘೋಷಿಸಿದರು.

ಇಂಗ್ಲೆಂಡ್ ತಂಡವು 2019ರ ಏಕದಿನ ವಿಶ್ವಕಪ್ ಜಯಿಸಿತ್ತು. ಟಿ20 ಕ್ರಿಕೆಟ್ ರ್ಯಾಂಕಿಂಗ್ನಲ್ಲಿಯೂ ಅವರ ನಾಯಕತ್ವದಲ್ಲಿ ಅಗ್ರಸ್ಥಾನಕ್ಕೇರಿತ್ತು.ಕಳೆದೊಂದು ವರ್ಷದಿಂದ 35 ವರ್ಷದ ಮಾರ್ಗನ್ ಫಾರ್ಮ್ ಕೊರತೆ ಅನುಭವಿಸುತ್ತಿದ್ದರು.

‘ವೃತ್ತಿಜೀವನದ ಕೊನೆಯ ಹಂತಕ್ಕೆ ತಲುಪಿದ್ದೇನೆ. ವಿದಾಯ ಘೋಷಿಸಲು ಇದು ಸೂಕ್ತ ಸಮಯ. ಬಹಳಷ್ಟು ಅಮೋಘವಾದ ಕ್ಷಣಗಳನ್ನು ಈ ಪಯಣದಲ್ಲಿ ಅನುಭವಿಸಿದ್ದೇನೆ’ ಎಂದು ಸ್ಕೈ ಸ್ಪೋರ್ಟ್ಸ್ ವಾಹಿನಿಯಲ್ಲಿ ಹೇಳಿದ್ದಾರೆ.

ಮಾರ್ಗನ್ 225 ಏಕದಿನ ಪಂದ್ಯಗಳಲ್ಲಿ 6957 ರನ್ ಮತ್ತು 115 ಟಿ20 ಪಂದ್ಯಗಳಲ್ಲಿ 2458 ರನ್ಗಳನ್ನು ಗಳಿಸಿದ್ದಾರೆ.

ಐರ್ಲೆಂಡ್ನ ಡಬ್ಲಿನ್ನಲ್ಲಿ ಜನಿಸಿ ಇಂಗ್ಲೆಂಡ್ನಲ್ಲಿ ಬೆಳೆದವರು ಮಾರ್ಗನ್. 2010ರಲ್ಲಿ ಇಂಗ್ಲೆಂಡ್ ತಂಡವು ಟಿ20 ವಿಶ್ವಕಪ್ ಗೆದ್ದಾಗಲೂ ತಂಡದಲ್ಲಿದ್ದರು. ಎರಡೂ ಮಾದರಿಗಳಲ್ಲಿ ವಿಶ್ವಕಪ್ ಜಯಿಸಿದ ಇಂಗ್ಲೆಂಡ್ ದೇಶದ ಏಕೈಕ ಕ್ರಿಕೆಟಿಗ ಅವರಾಗಿದ್ದಾರೆ.

‘ಬಹಳ ಭಾರವಾದ ಹೃದಯದಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ಆದರೆ ಆಟದ ನಂಟು ಮುಂದುವರಿಸುತ್ತೇನೆ. ಕೌಂಟಿಯಲ್ಲಿ ಮಿಡಲ್ಸೆಕ್ಸ್ ತಂಡ ಮತ್ತು ಹಂಡ್ರೆಡ್ ಫ್ರ್ಯಾಂಚೈಸಿ ಲಂಡನ್ ಸ್ಪಿರಿಟ್ಗೆ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.