ಬುಧವಾರ, ಜನವರಿ 22, 2020
18 °C
ಕೋಲ್ಕತ್ತದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅಂ.ರಾ ವಿಮಾನ ನಿಲ್ದಾಣದಲ್ಲಿ ಘಟನೆ

ಏರ್‌ಪೋರ್ಟ್‌ನಲ್ಲಿ ಅದಲುಬದಲಾಯಿತು ಲಗೇಜ್: ಧೋನಿ ಬ್ಯಾಗ್ ಹೊತ್ತೊಯ್ದ ಸಹ ಪ್ರಯಾಣಿಕ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ಲಗೇಜ್‌ಅನ್ನು ಮತ್ತೊಬ್ಬ ಪ್ರಯಾಣಿಕ ತೆಗೆದುಕೊಂಡು ಹೋಗಿರುವ ಘಟನೆ ಇಲ್ಲಿನ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ವರದಿಯಾಗಿದೆ.

ಧೋನಿ ಸೋಮವಾರ ನಗರಕ್ಕೆ ಬಂದರು. ದೆಹಲಿಯಿಂದ ಹೊರಡುವ ಸಂದರ್ಭದಲ್ಲಿ ಅವರು ಸರಕು ಸಾಗಾಣೆ ವಿಭಾಗದಲ್ಲಿ ನೋಂದಣಿ ಮಾಡಿಕೊಳ್ಳುವಾಗ ಮತ್ತೊಬ್ಬರೂ ಅಲ್ಲಿದ್ದರು. ಆಗ ಧೋನಿ ಲಗೇಜ್‌ ಆ ಪ್ರಯಾಣಿಕನ ಹೆಸರಿನೊಂದಿಗೆ ನೋಂದಣಿಯಾಗಿದೆ. ಹೀಗಾಗಿ ಈ ಪ್ರಹಸನ ನಡೆದಿದೆ. ಆದರೆ, ಈ ವಿಚಾರ ಕೋಲ್ಕತ್ತಗೆ ಬಂದಿಳಿದ ಬಳಿಕ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ಹಾನಿಯಿಲ್ಲ: ವಿಮಾನಯಾನ ಸಂಸ್ಥೆ
ಧೋನಿ ಅವರು ಕೋಲ್ಕತ್ತ ನಿಲ್ದಾಣದಿಂದ ಹೊರಡುವಾಗ ಆಕಸ್ಮಿಕವಾಗಿ ಲಗೇಜ್‌ ವಿನಿಮಯವಾಗಿದೆ ಎಂದು ಹೇಳಿರುವ ವಿಮಾನಯಾನ ಸಂಸ್ಥೆ ಲಗೇಜ್‌ಗೆ ಯಾವುದೇ ಹಾನಿಯಾಗದು‌ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

ಸಿಬ್ಬಂದಿಯ ಕಣ್ತಪ್ಪಿನಿಂದಾಗಿ ಅಪರೂಪವೆಂಬಂತೆ ಈ ಘಟನೆ ನಡೆದಿರುವುದು ದುರದೃಷ್ಟಕರ. ಧೋನಿ ಅವರ ಲಗೇಜ್ ತೆಗೆದುಕೊಂಡು ಹೋಗಿರುವ ಪ್ರಯಾಣಿಕನಿಗೆ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರಿಂದ ಲಗೇಜ್‌ ಪಡೆದು, ಕ್ರಿಕೆಟಿಗ ಧೋನಿಗೆ ಇಂದು ಅದನ್ನು ತಲುಪಿಸಲಾಗುವುದು ಎಂದು ಭರವಸೆ ನೀಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು