ಶನಿವಾರ, ಅಕ್ಟೋಬರ್ 31, 2020
26 °C

ಐಪಿಎಲ್‌ನಿಂದ ದೂರ ಉಳಿದಿರುವ ಬಗ್ಗೆ ಮುಸ್ತಫಿಜುರ್‌ ರೆಹಮಾನ್‌ ವಿಷಾದ

ಪಿಟಿಐ Updated:

ಅಕ್ಷರ ಗಾತ್ರ : | |

ಡಾಕಾ: ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಶ್ರೀಲಂಕಾ ಪ್ರವಾಸವನ್ನು ಮತ್ತೊಮ್ಮೆ ಮುಂದೂಡಿಕೆ ಮಾಡಲಾಗಿದೆ. ಜತೆಗೆ, ಐಪಿಎಲ್‌ ಟೂರ್ನಿಯಿಂದಲ್ಲೂ ದೂರ ಉಳಿದಿರುವ ಬಗ್ಗೆ ವೇಗಿ ಮುಸ್ತಫಿಜುರ್‌ ರೆಹಮಾನ್‌ ವಿಷಾದ ವ್ಯಕ್ತಪಡಿಸಿದ್ದಾರೆ.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ನಿಗದಿ ಮಾಡಿದ್ದ 14 ದಿನಗಳ ಪ್ರತ್ಯೇಕವಾಸಕ್ಕೆ ಶ್ರೀಲಂಕಾ–ಬಾಂಗ್ಲಾ ಉಭಯ ದೇಶಗಳ ಮಂಡಳಿಗಳು ಒಪ್ಪದ ಕಾರಣ ಸರಣಿಯನ್ನು ಮುಂದೂಡಲಾಗಿದೆ.

ಐಪಿಎಲ್‌ ಟೂರ್ನಿಯಲ್ಲಿ ಫ್ರ್ಯಾಂಚೈಸ್‌ಗಳು ಸಂಪರ್ಕಿಸಿದ ಕಾರಣಕ್ಕೆ ವೇಗಿ ಮುಸ್ತಫಿಜುರ್‌ ರೆಹಮಾನ್‌ ಅವರಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ) ನಿರಾಕರಿಸಿದೆ.

ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತ್ತ ನೈಟ್‌ ರೈಡರ್ಸ್ (ಕೆಕೆಆರ್‌)‌ ತಂಡಗಳಲ್ಲಿದ್ದ ಇಬ್ಬರು ವೇಗದ ಬೌಲರ್‌ಗಳು ಟೂರ್ನಿಯಿಂದ ಹಿಂದೆ ಸರಿದ ಕಾರಣಕ್ಕೆ ಈ ಫ್ರ್ಯಾಂಚೈಸ್‌ಗಳು ಮುಸ್ತಫಿಜುರ್‌ ಅವರನ್ನು ಸಂಪರ್ಕಿಸಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು