ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ | ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಸ್ಥಾನದ ಮೇಲೆ ಅಗರ್ಕರ್ ಕಣ್ಣು

Last Updated 24 ಜನವರಿ 2020, 14:55 IST
ಅಕ್ಷರ ಗಾತ್ರ

ನವದೆಹಲಿ:ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ಹೊಸಬರನ್ನು ನೇಮಿಸಲು ಬಿಸಿಸಿಐ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಇಂದು ಕೊನೆ ದಿನ. ಆದರೆ, ಕೊನೇ ಗಳಿಕೆಯಲ್ಲಿ ಅರ್ಜಿ ಸಲ್ಲಿಸಿರುವ ಮಾಜಿ ವೇಗಿ ಅಜಿತ್‌ ಅಗರ್ಕರ್‌, ಮುಖ್ಯಸ್ಥ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.

ಮುಖ್ಯಸ್ಥ ಎಂ.ಎಸ್. ಕೆ. ಪ್ರಸಾದ್ ಮತ್ತು ಸದಸ್ಯ ಗಗನ್ ಖೋಡಾ ಅವರ ಸ್ಥಾನಗಳಿಗೆ ನೇಮಕಾತಿ ನಡೆಯಲಿದೆ.

ಅಗರ್ಕರ್‌ ಈ ಹಿಂದೆ ಮುಂಬೈ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದರು. ಹೀಗಾಗಿ ಅವರು ಬಿಸಿಸಿಐ ಮುಖ್ಯಸ್ಥರಾಗುವುದಕ್ಕೆ ನಿಯಮಗಳಲ್ಲಿ ಅಡತಡೆಗಳಿವೆ. ಆದಾಗ್ಯೂ ಅವರು ಅರ್ಜಿ ಸಲ್ಲಿಸಿದ್ದಾರೆ.

42 ವರ್ಷದ ಅಗರ್ಕರ್‌, 26 ಟೆಸ್ಟ್‌, 191 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮೂರೂ ಮಾದರಿಯಿಂದ ಒಟ್ಟು 349 ವಿಕೆಟ್‌ ಕಬಳಿಸಿದ್ದಾರೆ. ಅಷ್ಟಲ್ಲದೆ, ಭಾರತ ಪರ ಏಕದಿನ ಮಾದರಿಯಲ್ಲಿ ಅನಿಲ್‌ ಕುಂಬ್ಳೆ (334) ಮತ್ತು ಜಾವಗಲ್‌ ಶ್ರೀನಾಥ್‌ ಬಳಿಕ (315) ಅತಿಹೆಚ್ಚು ವಿಕೆಟ್‌ (288) ಕಬಳಿಸಿದ ಆಟಗಾರ ಎಂಬ ಶ್ರೇಯವೂ ಅವರದು.ಹೀಗಾಗಿ ಅವರ ಹೆಸರು ಮುಂಚೂಣಿಯಲ್ಲಿದೆ.

ಅಗರ್ಕರ್ ಮಾತ್ರವಲ್ಲದೆ ನಯನ್‌ ಮೋಂಗಿಯಾ (ಬರೋಡಾ(, ಲಕ್ಷ್ಮಣ್‌ ಶಿವರಾಮಕೃಷ್ಣನ್‌ (ತಮಿಳುನಾಡು), ಚೇತನ್‌ ಶರ್ಮಾ (ಹರಿಯಾಣ), ರಾಜೇಶ್‌ ಚೌಹಾಣ್‌ (ಮಧ್ಯಪ್ರದೇಶ), ಅಮೇ ಖುರಾಸಿಯಾ (ಮಧ್ಯಪ್ರದೇಶ), ಜ್ಞಾನೇಂದ್ರ ಪಾಂಡೆ (ಉತ್ತರಪ್ರದೇಶ) ಹಾಗೂ ಪ್ರೀತಂ ಗಂಧೆ (ವಿದರ್ಭ) ಅವರೂ ಮುಖ್ಯಸ್ಥ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT