ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2021 | ರಾಯಲ್ಸ್‌ ವಿರುದ್ಧ ಮುಂಬೈಗೆ ಗೆಲುವು, ಪ್ಲೇ ಆಫ್ ಕನಸು ಜೀವಂತ

ಅಲ್ಪಮೊತ್ತಕ್ಕೆ ಕುಸಿದ ಸಂಜು ಸ್ಯಾಮ್ಸನ್ ಬಳಗ
Last Updated 5 ಅಕ್ಟೋಬರ್ 2021, 17:33 IST
ಅಕ್ಷರ ಗಾತ್ರ

ಶಾರ್ಜಾ: ಬಲಗೈ ವೇಗಿ ನೇಥನ್ ಕೌಲ್ಟರ್‌ ನೈಲ್ ಮತ್ತು ಜಿಮ್ಮಿ ನಿಶಾಮ್ ಅವರ ವೇಗದ ದಾಳಿಯ ಮುಂದೆ ರಾಜಸ್ಥಾನ್ ರಾಯಲ್ಸ್ ತಂಡವು ಕುಸಿಯಿತು. ಮುಂಬೈ ಇಂಡಿಯನ್ಸ್ 8 ವಿಕೆಟ್‌ಗಳಿಂದ ಜಯಿಸಿತು.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 90 ರನ್‌ಗಳ ಅಲ್ಪಮೊತ್ತ ಪೇರಿಸಿತು. ಅದಕ್ಕುತ್ತರವಾಗಿ ಮುಂಬೈ ತಂಡವು 8.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 94 ರನ್ ಗಳಿಸಿ ಜಯಿಸಿತು. ಇಶಾನ್ ಕಿಶನ್ (ಔಟಾಗದೆ 50) ಮಿಂಚಿದರು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಹಾಲಿ ಚಾಂಪಿಯನ್ ಮುಂಬೈ ತಂಡದ ನಾಯಕನ ನಿರ್ಧಾರವನ್ನು ಬೌಲಿಂಗ್ ಪಡೆ ಸಮರ್ಥಿಸಿಕೊಂಡಿತು. ಕೌಲ್ಟರ್‌ ನೈಲ್ ನಾಲ್ಕು, ನಿಶಾಮ್ ಮೂರು ಮತ್ತು ಜಸ್‌ಪ್ರೀತ್ ಬೂಮ್ರಾ ಎರಡು ವಿಕೆಟ್ ಗಳಿಸಿದರು.

ರಾಯಲ್ಸ್ ತಂಡದ ಎವಿನ್ ಲೂಯಿಸ್ (24) ಮತ್ತು ಯಶಸ್ವಿ ಜೈಸ್ವಾಲ್ (12) ಉತ್ತಮ ಆರಂಭ ನೀಡುವ ಪ್ರಯತ್ನದಲ್ಲಿದ್ದರು. ಆದರೆ, ಕೌಲ್ಟರ್‌ ನೈಲ್ ಅದಕ್ಕೆ ಆಸ್ಪದ ಕೊಡಲಿಲ್ಲ. ‌ನಾಲ್ಕನೇ ಓವರ್‌ನಲ್ಲಿ ಜೈಸ್ವಾಲ್ ವಿಕೆಟ್ ಗಳಿಸಿದರು.

ನಂತರದ 63 ರನ್‌ಗಳ ಅಂತರದಲ್ಲಿ ಎಂಟು ವಿಕೆಟ್‌ಗಳು ಪತನವಾದವು.

ಆರನೇ ಓವರ್‌ನಲ್ಲಿ ಎವಿನ್ ಲೂಯಿಸ್‌ಗೆ ಬೂಮ್ರಾ ಮತ್ತು ಅದರ ನಂತರದ ಓವರ್‌ನ್ಲಲಿ ನಿಶಾಮ್, ನಾಯಕ ಸಂಜು ಸ್ಯಾಮ್ಸನ್‌ ಅವರ ವಿಕೆಟ್ ಗಳಿಸಿದರು.

ಸ್ಪೋಟಕ ಶೈಲಿಯ ಬ್ಯಾಟ್ಸ್‌ಮನ್ ಶಿವಂ ದುಬೆ ವಿಕೆಟ್ ಕಿತ್ತ ನಿಶಾಮ್, ರಾಹುಲ್ ತೆವಾಟಿಯಾ (12 ರನ್) ಆಟಕ್ಕೂ ಅಡ್ಡಿಯಾದರು.

ಇತ್ತ ಕೌಲ್ಟರ್‌ ನೈಲ್ ಗ್ಲೆನ್ ಫಿಲಿಪ್ಸ್, ಡೇವಿಡ್ ಮಿಲ್ಲರ್ ಮತ್ತು ಯುವ ಆಟಗಾರ ಚೇತನ್ ಸಕಾರಿಯಾ ವಿಕೆಟ್‌ಗಳನ್ನುಕಿತ್ತು ತಮ್ಮ ಬುಟ್ಟಿಗೆ ಹಾಕಿಕೊಂಡರು. ಚೊಚ್ಚಲ ಪಂದ್ಯವಾಡಿದ ದೆಹಲಿ ಹುಡುಗ ಕುಲದೀಪ್ ಯಾದವ್ ನಾಲ್ಕು ಎಸೆತ ಎದುರಿಸಿದರೂ ಖಾತೆ ತೆರೆಯದೇ ಔಟಾಗದೆ ಉಳಿದರು. ಅವರೊಂದಿಗೆ ಬಾಂಗ್ಲಾದ ಮುಸ್ತಫಿಜುರ್ ರೆಹಮಾನ್ (ಔಟಾಗದೆ 8) ಕೂಡ ವಿಕೆಟ್ ಉಳಿಸಿಕೊಂಡರು. ಅವರು ಒಂದು ಸಿಕ್ಸರ್ ಕೂಡ ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT