ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣದಲ್ಲಿ ನೇಪಾಳ ಕ್ರಿಕೆಟಿಗ ಸಂದೀಪ್ ತಪ್ಪಿತಸ್ಥ: ಕೋರ್ಟ್

Published 30 ಡಿಸೆಂಬರ್ 2023, 14:28 IST
Last Updated 30 ಡಿಸೆಂಬರ್ 2023, 14:28 IST
ಅಕ್ಷರ ಗಾತ್ರ

ಕಠ್ಮಂಡು: ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆ ಅವರ ಮೇಲಿದ್ದ ಅತ್ಯಾಚಾರ ಆರೋಪವು ಸಾಬೀತಾಗಿದೆ. ಅವರು ತಪ್ಪಿತಸ್ಥರು ಎಂದು ನ್ಯಾಯಾಲಯವು ತೀರ್ಮಾನಿಸಿದೆ.

ಹೋದ ವರ್ಷದ ಆಗಸ್ಟ್‌ನಲ್ಲಿ 18 ವರ್ಷದ ಹುಡುಗಿಯೊಬ್ಬಳ ಮೇಲೆ ಸಂದೀಪ್ ಹೋಟೆಲ್‌ವೊಂದರಲ್ಲಿ  ಅತ್ಯಾಚಾರ ಎಸಗಿದ್ದರೆಂದು ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು.  ನಂತರ ಅವರನ್ನು ಬಂಧಿಸಲಾಗಿತ್ತು. ಕಳೆದ ಜನವರಿಯವಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ನೇಪಾಳದ ಪ್ರಮುಖ ಆಟಗಾರನಾಗಿದ್ದ ಸಂದೀಪ್ 2018ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡಿದ್ದರು.

ಸಂದೀಪ್ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಶಿಶಿರ್ ರಜ್ ಧಾಕಲ್ ಅವರ  ಏಕಸದಸ್ಯ ನ್ಯಾಯಪೀಠವು ನಡೆಸಿತು. ಕಳೆದ ಭಾನುವಾರದಿಂದಲೇ ವಿಚಾರಣೆಗಳು ನಡೆದಿದ್ದವು. ಶುಕ್ರವಾರದಂದು ನ್ಯಾಯಾಧೀಶರು, ಸಂದೀಪ್ ಅವರು ತಪ್ಪೆಸಗಿದ್ದಾರೆಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಕಠ್ಮಂಡು ಪೋಸ್ಟ್‌ ಪತ್ರಿಕೆಯು ವರದಿ ಮಾಡಿದೆ.

ಅತ್ಯಾಚಾರ ಸಂತ್ರಸ್ತೆಯು ಗೌಶಾಲಾದ ಮೆಟ್ರೊಪಾಲಿಟಿನ್ ಪೊಲೀಸ್ ವೃತ್ತದ ಠಾಣೆಯಲ್ಲಿ 2022ರ ಸೆಪ್ಟೆಂಬರ್‌ನಲ್ಲಿ  ದೂರು ದಾಖಲಿಸಿದ್ದರು.

ನ್ಯಾಯಾಲಯವು ಶೀಘ್ರದಲ್ಲಿಯೇ ಶಿಕ್ಷೆ ಪ್ರಕಟಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT