ಶುಕ್ರವಾರ, ಅಕ್ಟೋಬರ್ 30, 2020
26 °C

ಐಸಿಸಿ ಮುಖ್ಯಸ್ಥ ಹುದ್ದೆ: ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 18ರ ಗಡುವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಮುಖ್ಯಸ್ಥ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನು ಸೂಚಿಸಲು ನಿರ್ದೇಶಕರ ಮಂಡಳಿಗೆ (ಬೋರ್ಡ್‌ ಆಫ್‌ ಡೈರೆಕ್ಟರ್ಸ್) ಅಕ್ಟೋಬರ್‌ 18ರ ಗಡುವು ನೀಡಲಾಗಿದೆ. ಭಾರತದ ಶಶಾಂಕ್ ಮನೋಹರ್‌ ಅವರಿಂದ ತೆರವಾದ ಸ್ಥಾನಕ್ಕೆ ಮುಖ್ಯಸ್ಥರ ಆಯ್ಕೆ ನಡೆಯಬೇಕಿದೆ.

ಐಸಿಸಿ ಲೆಕ್ಕಪತ್ರ ಸಮಿತಿಯ ಸ್ವತಂತ್ರ ಮುಖ್ಯಸ್ಥರು ಆಯ್ಕೆ ಪ್ರಕ್ರಿಯೆಯ ವೀಕ್ಷಕರಾಗಲಿದ್ದಾರೆ.

ಒಂದು ವೇಳೆ ಒಬ್ಬರಿಗಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೆ ಮತದಾನ ನಡೆಸಬೇಕೆ ಎಂಬುದನ್ನು ಐಸಿಸಿ ಇನ್ನೂ ನಿರ್ಧರಿಸಿಲ್ಲ. ನೂತನ ಮುಖ್ಯಸ್ಥರು ಈ ವರ್ಷದ ಡಿಸೆಂಬರ್‌ನಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಐಸಿಸಿ ಈಗಾಗಲೇ ತಿಳಿಸಿದೆ.

‘ಮುಂದಿನ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ. ಡಿಸೆಂಬರ್‌ ವೇಳೆಗೆ ನೂತನ ಮುಖ್ಯಸ್ಥರು ಅಧಿಕಾರ ವಹಿಸಿಕೊಳ್ಳಲಿದ್ದಾರೆ‘ ಎಂದು ಐಸಿಸಿ ತಿಳಿಸಿದೆ.

ನಿರ್ದೇಶಕರ ಮಂಡಳಿಯು ಸೂಚಿಸುವ ಅಭ್ಯರ್ಥಿಗಳು ಐಸಿಸಿ ಮುಖ್ಯಸ್ಥ ಹುದ್ದೆಗೆ ಸ್ಪರ್ಧಿಸಲಿದ್ದಾರೆ.

‘ಮಂಡಳಿಯ ಹಾಲಿ ಅಥವಾ ಮಾಜಿ ನಿರ್ದೇಶಕರಾಗಿರುವವರು ಮುಖ್ಯಸ್ಥ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರು‘ ಎಂದು ಐಸಿಸಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು