ಸೋಮವಾರ, ಮೇ 23, 2022
30 °C
ಭಾರತ–ಇಂಗ್ಲೆಂಡ್ ಪಿಂಕ್ ಬಾಲ್ ಟೆಸ್ಟ್ ಗೆ ವೇದಿಕೆ ಸಜ್ಜು

ಮೊಟೇರಾ ಕ್ರೀಡಾಂಗಣದಲ್ಲಿ ನೆರಳು ಮರೆಮಾಚಲು ಎಲ್‌ಇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ಮೊಟೇರಾದ ಸರ್ದಾರ್ ಪಟೇಲ್ ಕ್ರೀಡಾಂಗಣವು ಮೊದಲ ಟೆಸ್ಟ್ ಪಂದ್ಯ ಆಯೋಜಿಸಲು ಸರ್ವಸನ್ನದ್ಧವಾಗಿದೆ.

ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎಂಬ ಹೆಗ್ಗಳಿಕೆಇರುವ ಇಲ್ಲಿ ಇದೇ 24ರಿಂದ ಭಾರತ–ಇಂಗ್ಲೆಂಡ್ ನಡುವಣ ಹಗಲು–ರಾತ್ರಿ ಟೆಸ್ಟ್ ಪಂದ್ಯ ನಡೆಯಲಿದೆ.

ಅದಕ್ಕಾಗಿ ನಾಲ್ಕು ಡ್ರೆಸ್ಸಿಂಗ್ ಕೋಣೆಗಳನ್ನು ಸಿದ್ಧಪಡಿಸಲಾಗಿದೆ. ಬೇರೆ ಯಾವ ಕ್ರೀಡಾಂಗಣದಲ್ಲೂ ಇಷ್ಟು ಸಂಖ್ಯೆಯ ಡ್ರೆಸ್ಸಿಂಗ್ ರೂಮ್‌ಗಳಿಲ್ಲ. ಪ್ರತಿಯೊಂದು ಕೋಣೆಯಲ್ಲಿಯೂ ಅತ್ಯಾಧುನಿಕ ಜಿಮ್ನಾಷಿಯಂಗಳೂ ಇವೆ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಅನಿಲ್ ಪಟೇಲ್ ತಿಳಿಸಿದ್ದಾರೆ.

ಹೊನಲು ಬೆಳಕಿನಲ್ಲಿ ಉಂಟಾಗುವ ನೆರಳಿನ ಬಿಂಬಗಳನ್ನು ಮರೆಮಾಚಲು ಎಲ್‌ಇಡಿ ಬಲ್ಬ್‌ಗಳನ್ನು ಬಳಸಲಾಗಿದೆ. ಇದರಿಂದಾಗಿ ಚೆಂಡು ಎತ್ತರದಲ್ಲಿ ಸಾಗಿದಾಗಲೂ ಸ್ಪಷ್ಟವಾಗಿ ಗೋಚರಿಸಲಿದೆ ಎಂದು ಪಟೇಲ್ ಹೇಳಿದ್ದಾರೆ.

ಈ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿ ಸಾಮರ್ಥ್ಯವು 1.10 ಲಕ್ಷವಾಗಿದೆ. ಕೋವಿಡ್ ತಡೆ ಮಾರ್ಗಸೂಚಿಯನ್ವಯ ಸಾಮರ್ಥ್ಯದ ಶೇ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ. 55 ಸಾವಿರ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. 

ಈಚೆಗಷ್ಟೇ ಇಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ನಾಕೌಟ್ ಪಂದ್ಯಗಳು ನಡೆದಿದ್ದವು.

’ಕ್ರೀಡಾಂಗಣದ ಮಧ್ಯದಲ್ಲಿ 11 ಪಿಚ್‌ಗಳು ಇವೆ. ಇಲ್ಲಿಯ ವಿಶೇಷವೆಂದರೆ ಎಲ್ಲ ಪಿಚ್‌ಗಳಿಗೂ ಒಂದೇ ರೀತಿಯ ಮಣ್ಣು ಬಳಸಲಾಗಿದೆ. ಮಳೆ ಬಂದರೆ ನೀರು ಸರಾಗವಾಗಿ ಇಂಗಿಹೋಗಲು ಕೂಡ ಒಳಚರಂಡಿ ವ್ಯವಸ್ಥೆ ಮಾಡಲಾಗಿದೆ‘ ಎಂದೂ ತಿಳಿಸಿದರು.

’ಒಟ್ಟು 63 ಎಕರೆ ಜಾಗದಲ್ಲಿ ಈ ಕ್ರೀಡಾಂಗಣದ ನಿರ್ಮಾಣವಾಗಿದೆ. ಒಳಾಂಗಣದಲ್ಲಿ ಆರು ಪಿಚ್‌ಗಳು ಇವೆ. ಬೌಲಿಂಗ್ ಯಂತ್ರಗಳೂ ಇವೆ. ಹೊರಾಂಗಣದಲ್ಲಿಯೂ ಅಭ್ಯಾಸದ ಪಿಚ್‌ಗಳು, ಮಿನಿ ಪೆವಿಲಿಯನ್ ಮತ್ತು ಎರಡು ಮೈದಾನಗಳೂ ಇವೆ‘ ಎಂದು ಪಟೇಲ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು