ಶುಕ್ರವಾರ, ಫೆಬ್ರವರಿ 28, 2020
19 °C
ಏಕದಿನ ಸರಣಿ

IND vs NZ | ಜಡೇಜ, ಸೈನಿ ಹೋರಾಟ ವ್ಯರ್ಥ: ಭಾರತಕ್ಕೆ 22 ರನ್‌ಗಳ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಕ್ಲೆಂಡ್: ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ 22 ರನ್‌ಗಳ ಸೋಲು ಅನುಭವಿಸಿದೆ. ಈ ಮೂಲಕ ಕಿವೀಸ್‌ ಪಡೆ ಏಕದಿನ ಸರಣಿಯನ್ನು ಗೆದ್ದುಕೊಂಡಿತು. 

ಅನುಭವಿ ಆಟಗಾರ ರಾಸ್‌ ಟೇಲರ್‌ ಬ್ಯಾಟಿಂಗ್‌ ನೆರವಿನಿಂದ ಕಿವೀಸ್‌ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 273 ರನ್‌ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ್ದ ಭಾರತ ಮಯಂಕ್‌ ಅಗರ್‌ವಾಲ್‌ ವಿಕೆಟ್‌ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತ ಅನುಭವಿಸಿತು. ನಾಯಕ ಕೊಹ್ಲಿ ಸೇರಿದಂತೆ ಮಧ್ಯಮ ಕ್ರಮಾಂಕದ ಆಟಗಾರರು ಕಿವೀಸ್‌ ಬೌಲರ್‌ಗಳ ಎದುರು ಬಹಳ ಹೊತ್ತು ನಿಲ್ಲದೇ ಫೆವಿಲಿಯನ್‌ ಸೇರಿದರು. 

ಕೆಳ ಕ್ರಮಾಂಕದಲ್ಲಿ ಬಂದ ರವೀಂದ್ರ ಜಡೇಜ ಮತ್ತುನವದೀಪ್ ಸೈನಿ ಗೆಲುವಿನ ಆಸೆ ಮೂಡಿದರಾದರೂ ಪಂದ್ಯವನ್ನು ಗೆಲ್ಲಲಾಗಲಿಲ್ಲ. 

ಜಡೇಜ ಆಕರ್ಷಕ ಅರ್ಧ ಶತಕ ದಾಖಲಿಸಿದರು. ಜಡೇಜಾಗೆ ಉತ್ತಮ ಸಾಥ್‌ ಕೊಟ್ಟ ಸೈನಿ 45 ರನ್‌ ಸಿಡಿಸಿದರು.

ಇಲ್ಲಿನ ಈಡನ್‌ ಪಾರ್ಕ್‌ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಕಿವೀಶ್‌ಗೆ ಆರಂಭಿಕ ಮಾರ್ಟಿನ್‌ ಗ‌ಪ್ಟಿಲ್‌ (79) ಮತ್ತು ಹೆನ್ರಿ ನಿಕೋಲಸ್‌ (41) ಉತ್ತಮ ಆರಂಭ ನೀಡಿದ್ದರು. ಒಂದು ಹಂತದಲ್ಲಿ ಕೇವಲ ಒಂದು ವಿಕೆಟ್‌ ನಷ್ಟಕ್ಕೆ 93 ರನ್‌ ಗಳಿಸಿದ್ದ ಕಿವೀಸ್‌, ನಂತರ 104 ಅಂತರದಲ್ಲಿ ಏಳು ವಿಕೆಟ್‌ ಕಳೆದುಕೊಂಡಿತ್ತು.

ಹೀಗಾಗಿ ಆತಿಥೇಯರನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಯೋಜನೆ ಕೊಹ್ಲಿ ಬಳಗದ್ದಾಗಿತ್ತು. ಆದರೆ, ಟೇಲರ್‌ ಟೇಲರ್‌ ಅದಕ್ಕೆ ಅವಕಾಶ ನೀಡಲಿಲ್ಲ.

ಆಸರೆಯಾದ ರಾಸ್
ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ತಮ್ಮ ತಂಡಕ್ಕೆ ಜಯ ತಂದುಕೊಟ್ಟಿದ್ದ ಟೇರಲ್‌ ಇಲ್ಲಿ ಮೊತ್ತಮ್ಮೆ ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಗಟ್ಟಿಯಾಗಿ ನಿಂತ ಅವರು ತಂಡದ ಮೊತ್ತವನ್ನು ನಿಧಾನವಾಗಿ ಏರಿಸಿದರು.

194 ರನ್‌ ಗಳಿಗೆ ಎಂಟು ವಿಕೆಟ್ ಕಳೆದುಕೊಂಡಿದ್ದರೂ ದಿಟ್ಟ ಆಟವಾಡಿದ ಟೇಲರ್‌, ಜಿಮಿಸನ್ (25) ಜತೆ ಸೇರಿ ಮುರಿಯದ 9ನೇ ವಿಕೆಟ್‌ 76 ರನ್‌ ಕೂಡಿಸಿದರು. 74 ಎಸೆತಗಳನ್ನು ಎದುರಿಸಿದ ಟೇಲರ್‌ 6 ಬೌಂಡರಿ ಮತ್ತು 2 ಸಿಕ್ಸರ್‌ ಸಹಿತ 73 ರನ್ ಗಳಿಸಿದರು. ಹೀಗಾಗಿ ಕಿವೀಸ್‌ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು. ಆದರೆ ಓ ಮೊತ್ತವನ್ನು ಮೀರಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಜಡೇಜಾ ಮತ್ತು ಶೈನಿಯ ಹೋರಾಟ ವ್ಯರ್ಥವಾಯಿತು. 

ಟಿ20 ಸರಣಿಯನ್ನು 5–0 ಅಂತರದಿಂದ ಗೆದ್ದು ಬೀಗುತ್ತಿದ್ದ ಕೊಹ್ಲಿ ಬಳಗಕ್ಕೆ ಆತಿಥೇಯರ ವಿರುದ್ಧದ ಏಕ ದಿನ ಸರಣಿಯನ್ನು ಗೆಲ್ಲಲಾಗಲಿಲ್ಲ. 

ಸಂಕ್ಷಿಪ್ತ ಸ್ಕೋರ್‌...

ಭಾರತ: 251–10 (48.3 ಓವರ್‌ಗಳು)

ನ್ಯೂಜಿಲೆಂಡ್: 273–8 (50 ಓವರ್‌ಗಳು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)