ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಆಡುವವರೆಗೆ ಆರ್‌ಸಿಬಿ ಬಿಡುವುದಿಲ್ಲ: ವಿರಾಟ್‌ ಕೊಹ್ಲಿ

Last Updated 25 ಏಪ್ರಿಲ್ 2020, 3:15 IST
ಅಕ್ಷರ ಗಾತ್ರ

ಐಪಿಎಲ್‌ ಆಡುವವರೆಗೆ ನಾನು ರಾಯಲ್‌ ಚಾಲೆಂಜರ್‌ ಬೆಂಗಳೂರು (ಆರ್‌ಸಿಬಿ) ತಂಡವನ್ನು ತೊರೆಯುವುದಿಲ್ಲ ಎಂದು ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ರಾಯಲ್‌ ಚಾಲೆಂಜರ್‌ ಬೆಂಗಳೂರು ತಂಡದ ಅಭಿಮಾನಿಗಳ ಪ್ರೀತಿ ಮತ್ತು ನಿಷ್ಠೆ ನನ್ನನ್ನು ಆ ತಂಡದಿಂದ ಹೊರ ಬರಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು ಆರ್‌ಸಿಬಿ ತಂಡದ ಆಟಗಾರ ಎಬಿ ಡಿವಿಲಿಯರ್ಸ್ ಅವರೊಂದಿಗಿನ ಇನ್‌ಸ್ಟಾಗ್ರಾಮ್‌ ಲೈವ್ ಸೆಷನ್‌ನಲ್ಲಿ ಮಾತನಾಡಿರುವ ವಿರಾಟ್‌ ಕೊಹ್ಲಿ, ‘ಕೂಟದಲ್ಲಿ ಗೆಲ್ಲುವುದು ನಮ್ಮ ಗುರಿಯಾಗಿಯೇ ಉಳಿದಿದೆ. ಆದರೆ ಫಲಿತಾಂಶಗಳ ಹೊರತಾಗಿಯೂ ನಾನು ತಂಡದಲ್ಲೇ ಉಳಿಯಲಿದ್ದೇನೆ. ಅದನ್ನು ತೊರೆಯುವುದಿಲ್ಲ,’ ಎಂದು ಅವರು ಹೇಳಿದ್ದಾರೆ.

‘ಆರ್‌ಸಿಬಿಯೊಂದಿಗಿನ ಪ್ರಯಾಣ ಅದ್ಭುತವಾದದ್ದು. ಐಪಿಎಲ್‌ ಅನ್ನು ನಾವು ಒಟ್ಟಾಗಿ ಗೆಲ್ಲಬೇಕು ಎಂಬುದು ನಮ್ಮ ಕನಸಾಗಿದೆ. ಆದರೆ, ತಂಡವನ್ನು ತೊರೆಯಬೇಕು ಎಂದು ನಾನು ಯಾವ ಹಂತದಲ್ಲೂ ಯೋಚಿಸಿಲ್ಲ,’ ಎಂದು ಕೊಹ್ಲಿ ತಿಳಿಸಿದ್ದಾರೆ.

‘ಐಪಿಎಲ್‌ ಆವೃತ್ತಿ ತಂಡಕ್ಕೆ ಪೂರಕವಾಗಿರಲಿಲ್ಲ ಎಂದಾಗ ನಿಮಗೆ ಭಾವುಕತೆ ಉಂಟಾಗಹುದು. ಆದರೆ, ಐಪಿಎಲ್‌ ಆರಂಭವಾದಾಗಿನಿಂದ ಈ ವರೆಗೆ ನಾನು ಈ ತಂಡವನ್ನು ಬಿಟ್ಟಿಲ್ಲ. ಅಭಿಮಾನಿಗಳ ನಿಷ್ಠೆ ಅದ್ಭುತವಾದದ್ದು,’ ಎಂದು ಕೊಹ್ಲಿ ಹೇಳಿದ್ದಾರೆ.

ಕೊಹ್ಲಿ ಅವರ ಈ ಮಾತುಗಳನ್ನು ಬೆಂಬಲಿಸಿರುವ ಸ್ಪೋಟಕ ಬ್ಯಾಟ್ಸ್‌ಮನ್‌ ಎ.ಬಿ.ಡಿ ವಿಲಿಯರ್ಸ್‌. ಕಳೆದ 9 ವರ್ಷಗಳಿಂದ ಅಭಿಮಾನಿಗಳು ತೋರಿರುವ ಪ್ರೀತಿಯನ್ನು ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT