ಮಂಗಳವಾರ, ಜನವರಿ 18, 2022
24 °C
ಟೆಸ್ಟ್: ಕಿವೀಸ್ ಎದುರು ಬಾಂಗ್ಲಾದೇಶ ದಿಟ್ಟ ಹೋರಾಟ

NZ vs BAN Test: ಮೆಹಮುದುಲ್ಲಾ, ನಜಿಮುಲ್ ಅರ್ಧಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೌಂಟ್ ಮಾಂಗನೂಯಿ: ಮೆಹಮುದುಲ್ ಹಸನ್ ಜಾಯ್ ಮತ್ತು ನಜಿಮುಲ್ ಹುಸೇನ್ ಶಾಂತೊ ಅವರ ದಿಟ್ಟ ಬ್ಯಾಟಿಂಗ್‌ನಿಂದಾಗಿ ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್ ಎದುರಿನ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಪ್ರತ್ಯುತ್ತರ ನೀಡಿದೆ.

ನ್ಯೂಜಿಲೆಂಡ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 108.1 ಓವರ್‌ಗಳಲ್ಲಿ 328 ರನ್‌ ಗಳಿಸಿ ಆಲೌಟ್ ಆಯಿತು. ಭಾನುವಾರ ಎರಡನೇ ದಿನದಾಟದ ಕೊನೆಗೆ ಬಾಂಗ್ಲಾ ತಂಡವು 67 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 175 ರನ್ ಗಳಿಸಿತು. ಮೆಹಮುದುಲ್ ಹಸನ್ (ಬ್ಯಾಟಿಂಗ್ 70; 211ಎ, 4X7) ಮತ್ತು ಮೊಮಿನುಲ್ ಹಕ್ (ಬ್ಯಾಟಿಂಗ್ 8; 27ಎ) ಕ್ರೀಸ್‌ನಲ್ಲಿದ್ದಾರೆ. 

ಆತಿಥೇಯ ತಂಡದ ನೀಲ್ ವಾಗ್ನರ್ ದಾಳಿಗೆ ಆರಂಭಿಕ ಬ್ಯಾಟರ್ ಶಾದ್ಮನ್ ಇಸ್ಲಾಂ (22ರನ್) 19ನೇ ಓವರ್‌ನಲ್ಲಿ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಮೆಹಮುದುಲ್ ಮತ್ತು ನಜೀಮುಲ್ (64; 109ಎ, 4X7, 6X1) ಎರಡನೇ ವಿಕೆಟ್ ಜೊತೆಯಾಟದಲ್ಲಿ 104 ರನ್‌ಗಳನ್ನು ಸೇರಿಸಿ ತಂಡದ ಇನಿಂಗ್ಸ್‌ಗೆ ಬಲತುಂಬಿದರು. 

ಈ ಜೊತೆಯಾಟವನ್ನೂ ವಾಗ್ನರ್ ಮುರಿದರು. 58ನೇ ಓವರ್‌ನಲ್ಲಿ ವಾಗ್ನರ್ ಅವರು ನಜಿಮುಲ್ ವಿಕೆಟ್ ಗಳಿಸಿದರು. 

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್: 108.1 ಓವರ್‌ಗಳಲ್ಲಿ 328, ಬಾಂಗ್ಲಾದೇಶ: 67 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 175 (ಶಾದ್ಮನ್ ಇಸ್ಲಾಂ 22, ಮೆಹಮುದುಲ್ ಹಸನ್ ಜಾಯ್ ಬ್ಯಾಟಿಂಗ್ 70, ನಜಿಮುಲ್ ಹುಸೇನ್ ಶಾಂತೊ 64, ನೀಲ್ ವಾಗ್ನರ್ 27ಕ್ಕೆ2) 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು