ಗುರುವಾರ , ಜನವರಿ 30, 2020
19 °C
ಭಾರತ–ಶ್ರೀಲಂಕಾ ಪಂದ್ಯ: ಹಿಟ್‌ ಮ್ಯಾನ್ ಸಾಧನೆ ನೆನಪು ಮಾಡಿದ ಐಸಿಸಿ

ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ ವೈಯಕ್ತಿಕ 3ನೇ ದ್ವಿಶತಕ ಗಳಿಸಿದ್ದು ಇದೇ ದಿನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಕ್ರಿಕೆಟ್ ತಂಡದ ಉಪನಾಯಕ ರೋಹಿತ್‌ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಮೂರನೇ ದ್ವಿಶತಕ ಸಿಡಿಸಿದ್ದು ಇದೇ ದಿನ. ಶ್ರೀಲಂಕಾ ತಂಡದ ಎದುರು 2017ರ ಡಿಸೆಂಬರ್‌ 13ರಂದು ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ 208 ರನ್‌ ಗಳಿಸಿದ್ದರು.

13 ಬೌಂಡರಿ ಹಾಗೂ 12 ಅಮೋಘ ಸಿಕ್ಸರ್‌ಗಳಿದ್ದ ಅವರ ಇನಿಂಗ್ಸ್‌ ಬಲದಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 392 ರನ್‌ ಕಲೆಹಾಕಿತ್ತು. ಈ ಮೊತ್ತ ಬೆನ್ನತ್ತಿದ ಲಂಕಾ ಪಡೆ 141 ರನ್‌ ಅಂತರದಿಂದ ಸೋಲೊಪ್ಪಿಕೊಂಡಿತ್ತು.

ಇದನ್ನೂ ಓದಿ: 

ಈ ದಿನವನ್ನು ನೆನಪು ಮಾಡಿಕೊಂಡಿರುವ ಐಸಿಸಿ ತನ್ನ ಟ್ವಿಟರ್‌ ಪುಟದಲ್ಲಿ, ‘ 208 ರನ್‌, 153 ಎಸೆತಗಳು, 13 ಬೌಂಡರಿ, 12 ಸಿಕ್ಸರ್‌. ರೋಹಿತ್ ಶರ್ಮಾ 2017ರ ಇದೇ ದಿನ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಮೂರನೇ ದ್ವಿಶತಕ ದಾಖಲಿಸಿದ್ದರು’ ಎಂದು ಬರೆದುಕೊಂಡಿದೆ.

ಇದನ್ನೂ ಓದಿ: ಸ್ಪೇನ್‌ನ ಲಾ ಲಿಗಾ ಫುಟ್‌ಬಾಲ್‌ ಟೂರ್ನಿಗೆ ರೋಹಿತ್ ಶರ್ಮಾ ಪ್ರಚಾರ ರಾಯಭಾರಿ

ರೋಹಿತ್‌ ಗಳಿಸಿರುವ ಮೂರ ದ್ವಿಶತಕದಲ್ಲಿ ಎರಡು ಶ್ರೀಲಂಕಾ ವಿರುದ್ಧವೇ ದಾಖಲಾಗಿವೆ. ಮತ್ತೊಂದು ಆಸ್ಟ್ರೇಲಿಯಾ ವಿರುದ್ಧ ಮೂಡಿಬಂದಿದೆ. ಹೀಗಾಗಿ ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಶ್ರೇಯ ರೋಹಿತ್‌ ಅವರದ್ದು.

ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಏಕದಿನ ಕ್ರಿಕೆಟ್‌ನ ಮೊದಲ ದ್ವಿಶತಕವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಬಾರಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು