ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ನಲ್ಲಿ ಮತ್ತೆ ಭಾರತ ಎದುರಾಗುವ ಸಾಧ್ಯತೆ: ಪಾಕ್ ನಾಯಕ ಬಾಬರ್ ಹೇಳಿದ್ದೇನು?

Last Updated 10 ನವೆಂಬರ್ 2022, 7:18 IST
ಅಕ್ಷರ ಗಾತ್ರ

ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ದಾಖಲಿಸಿರುವ ಪಾಕಿಸ್ತಾನ ತಂಡವು ಫೈನಲ್‌ಗೆ ಲಗ್ಗೆಯಿಟ್ಟಿದೆ.

ಗುರುವಾರ ನಡೆಯಲಿರುವ ಮಗದೊಂದು ಸೆಮಿಫೈನಲ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸೆಣಸಲಿವೆ.

ಇದರಿಂದಾಗಿ ಫೈನಲ್‌ನಲ್ಲಿ ಮಗದೊಮ್ಮೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಯಿವೆ.

ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪಾಕಿಸ್ತಾನದ ನಾಯಕ ಬಾಬರ್ ಆಜಂ, ಫೈನಲ್‌ನಲ್ಲಿ ನಿರ್ಭೀತ ಕ್ರಿಕೆಟ್ ಆಡುವುದಾಗಿ ಹೇಳಿದ್ದಾರೆ.

ಫೈನಲ್‌ನಲ್ಲಿ ಯಾವ ತಂಡವನ್ನು ಎದುರಿಸಲಿದ್ದೇವೆ ಎಂದು ಈಗಾಗಲೇ ಹೇಳಲು ಸಾಧ್ಯವಿಲ್ಲ. ಯಾವ ತಂಡವಾದರೂ ನಾವು ಶೇ 100ರಷ್ಟು ಪ್ರದರ್ಶನ ನೀಡಲು ಪ್ರಯತ್ನಿಸಲಿದ್ದೇವೆ ಎಂದು ಹೇಳಿದ್ದಾರೆ.

ಫೈನಲ್ ಪಂದ್ಯವು ಅತ್ಯಂತ ಒತ್ತಡದಿಂದ ಕೂಡಿರಲಿದ್ದು, ನಮ್ಮ ಮುಂದಿರುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಪ್ರಯತ್ನಿಸಲಿದ್ದೇವೆ. ಟೂರ್ನಿಯಲ್ಲಿ ಹಲವು ಹಂತದ ಸವಾಲುಗಳನ್ನು ದಾಟಿದ ಬಳಿಕ ಫೈನಲ್‌ಗೆ ಪ್ರವೇಶಿಸಿದ್ದೇವೆ. ಫೈನಲ್‌ನಲ್ಲಿ ನಿರ್ಭೀತ ಕ್ರಿಕೆಟ್ ಆಡಲು ಪ್ರಯತ್ನಿಸಲಿದ್ದೇವೆ. ಕಳೆದ 3-4 ಪಂದ್ಯಗಳಲ್ಲಿ ಆಡಿದ ರೀತಿಯನ್ನು ಮುಂದುವರಿಸಲು ಬಯಸುತ್ತೇವೆ ಎಂದು ಹೇಳಿದರು.

ಸೂಪರ್ 12ರ ಎರಡನೇ ಗುಂಪಿನ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ (ಅಜೇಯ 82) ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಪಾಕಿಸ್ತಾನ ವಿರುದ್ಧ ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಈಗ ಅಭಿಮಾನಿಗಳು ಮಗದೊಂದು ಭಾರತ-ಪಾಕಿಸ್ತಾನ ಪೈಪೋಟಿಯ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT