ಮಂಗಳವಾರ, ಮಾರ್ಚ್ 28, 2023
30 °C

ಪಾಕಿಸ್ತಾನ–ನ್ಯೂಜಿಲೆಂಡ್ ಟೆಸ್ಟ್ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕರಾಚಿ (ಎಎಫ್‌ಪಿ): ಟಿಮ್ ಸೌಥಿ ನಾಯಕತ್ವದ ನ್ಯೂಜಿಲೆಂಡ್ ತಂಡವು ಸೋಮವಾರದಿಂದ ಇಲ್ಲಿ ಆರಂಭವಾಗಲಿರುವ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. 

ಈಚೆಗೆ ಇಂಗ್ಲೆಂಡ್‌ ವಿರುದ್ಧ ತನ್ನದೇ ತವರಿನಲ್ಲಿ ಸೋತಿರುವ ಪಾಕ್ ತಂಡವು ಕಿವೀಸ್ ಎದುರಿನ ಸರಣಿಯಲ್ಲಿ ಜಯಿಸುವ ಛಲದಲ್ಲಿದೆ. ಇತ್ತೀಚೆಗೆ ಕಿವೀಸ್ ತಂಡಕ್ಕೆ ಟಿಮ್ ಸೌಥಿ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಅವರು ಪೂರ್ಣಾವಧಿ ನಾಯಕರಾದ ನಂತರ ತಂಡವು ಮೊದಲ ಬಾರಿಗೆ ವಿದೇಶದಲ್ಲಿ ಸರಣಿ ಆಡಲಿದೆ. 

ಬಾಬಾರ್ ಆಜಂ ಬಳಗವು ಇಂಗ್ಲೆಂಡ್ ಎದುರು ಉತ್ತಮ ಹೋರಾಟ ಮಾಡಿತ್ತು. ಆದರೆ ಬೆನ್ ಸ್ಟೋಕ್ಸ್‌ ಬಳಗದ ಅಬ್ಬರದ ಮುಂದೆ ಸೋತಿತು. ಆದರೆ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ಕೂಡ ನಿಕಟ ಪೈಪೋಟಿಯೊಡ್ಡುವ ಸಾಧ್ಯತೆ ಇದೆ.

ಇಲ್ಲಿಯ ಪಿಚ್ ಹಾಗೂ ವಾತಾವರಣದ ಪರಿಚಯ ಕಿವೀಸ್ ಆಟಗಾರರಿಗೆ ಇಲ್ಲ. ಬಹಳಷ್ಟು ವರ್ಷಗಳ ನಂತರ ತಂಡವು ಇಲ್ಲಿಗೆ ಬಂದಿದೆ. ಈ ಹಿಂದೆ ಪಾಕ್‌ ನಲ್ಲಿ ಕಿವೀಸ್ ತಂಡವು 21 ಪಂದ್ಯಗಳನ್ನು ಆಡಿತ್ತು. ಅದರಲ್ಲಿ ಎರಡರಲ್ಲಿ ಮಾತ್ರ ಜಯಿಸಿದೆ.

ಇಲ್ಲಿಯ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ಸಾಧ್ಯತೆ ಇದೆ. 

ಪಂದ್ಯ ಆರಂಭ: ಬೆಳಿಗ್ಗೆ 10

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು