ಬುಧವಾರ, ಜನವರಿ 29, 2020
30 °C

ಇಂದಿನಿಂದ ಪಾಕ್‌–ಲಂಕಾ ಟೆಸ್ಟ್‌ ಪಂದ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ರಾವಲ್ಪಿಂಡಿ: ಟೆಸ್ಟ್ ಕ್ರಿಕೆಟ್, ದಶಕದ ನಂತರ ಪಾಕಿಸ್ತಾನಕ್ಕೆ ಹಿಂತಿರು ಗುತ್ತಿರುವುದು ಭಾವನಾತ್ಮಕ ಕ್ಷಣ  ಎಂದು ತಂಡದ ನಾಯಕ ಅಜರ್‌ ಅಲಿ ಮಂಗಳವಾರ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್‌ಗಳ ಸರಣಿ ಬುಧವಾರ ಇಲ್ಲಿ ಆರಂಭವಾಗಲಿದೆ. 

‘ನಮ್ಮ ನೆಲದಲ್ಲೇ ಆಡುವ ಈ ಕ್ಷಣ ಭಾವೋದ್ವೇಗದ್ದು. ಆದರೆ, ಆಸ್ಟ್ರೇಲಿಯಾ ವಿರುದ್ಧ ಇತ್ತೀಚಿನ ನಿರಾಶಾದಾಯಕ ಪ್ರವಾಸದ ನಂತರ ಸುಧಾರಣೆ ಮಾಡಿಕೊಳ್ಳುವ ನಮ್ಮ ಪ್ರಯತ್ನಕ್ಕೆ ಇದು ಅಡ್ಡಿಯಾಗದು’ ಎಂದೂ ಅವರು ಹೇಳಿದ್ದಾರೆ. 2009ರಲ್ಲಿ ಪಾಕಿಸ್ತಾನ ನೆಲದಲ್ಲಿ ಕೊನೆಯ ಬಾರಿ ಟೆಸ್ಟ್‌ ಪಂದ್ಯ ನಡೆದಿತ್ತು.

ಆ ವರ್ಷ, ಪ್ರವಾಸಿ ಶ್ರೀಲಂಕಾ ತಂಡ ಪ್ರಯಾಣಿಸುತ್ತಿದ್ದ ಬಸ್‌ ಮೇಲೆ ಉಗ್ರರು ದಾಳಿ ನಡೆಸಿದ್ದರು. ನಂತರ ಪಾಕಿಸ್ತಾನದಲ್ಲಿ ಆಡಲು ಹೊರದೇಶದ ತಂಡಗಳು ಹಿಂದೇಟು ಹಾಕಿದ ಕಾರಣ, ಆ ತಂಡ ತಟಸ್ಥ ಸ್ಥಳದಲ್ಲಿ ತನ್ನ ತವರು ಪಂದ್ಯಗಳನ್ನು ಆಡುವ ಅನಿವಾರ್ಯಕ್ಕೆ ಒಳಗಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು