ಗುರುವಾರ , ನವೆಂಬರ್ 26, 2020
20 °C

ಕೋವಿಡ್‌ ‘ಪರೀಕ್ಷೆ’ ಪಾಸಾದ ಪಾಕ್‌, ಜಿಂಬಾಬ್ವೆ ಕ್ರಿಕೆಟಿಗರು

ಎಪಿ Updated:

ಅಕ್ಷರ ಗಾತ್ರ : | |

Prajavani

ರಾವಲ್ಪಿಂಡಿ: ಸೀಮಿತ ಓವರ್‌ಗಳ ಸರಣಿಯನ್ನು ಆಡಲು ಇಲ್ಲಿಗೆ ಬಂದಿರುವ ಜಿಂಬಾಬ್ವೆ ಹಾಗೂ ಪಾಕಿಸ್ತಾನದ ಕ್ರಿಕೆಟ್‌ ತಂಡದ ಆಟಗಾರರು ಕೋವಿಡ್‌–19 ಪರೀಕ್ಷೆಗೆ ಒಳಗಾಗಿದ್ದು, ಯಾರಲ್ಲಿಯೂ ಸೋಂಕು ಕಂಡುಬಂದಿಲ್ಲ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಮಂಗಳವಾರ ಈ ವಿಷಯ ತಿಳಿಸಿದೆ.

ಪಿಸಿಬಿಯ ಕೋವಿಡ್‌–19 ತಡೆ ಮಾರ್ಗಸೂಚಿಗಳ ಪ್ರಕಾರ ಕಡ್ಡಾಯವಾಗಿ ಆಟಗಾರರು, ಅಧಿಕಾರಿಗಳು, ನೆರವು ಸಿಬ್ಬಂದಿ, ಕೋಚ್‌ ಸೇರಿದಂತೆ 107 ಮಂದಿಗೆ ಪರೀಕ್ಷೆ ನಡೆಸಲಾಯಿತು.

ಎಲ್ಲ ಆಟಗಾರರು, ಸಿಬ್ಬಂದಿಗೆ ಜೀವಸುರಕ್ಷಾ ವಾತಾವರಣವಿರುವ ಇಸ್ಲಾಮಾಬಾದ್‌ನ ಹೊಟೇಲೊಂದರಲ್ಲಿ ವಸತಿಗೆ ಅವಕಾಶ ಕಲ್ಪಿಸಲಾಗಿದೆ.

ಪಿಂಡಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಉಭಯ ತಂಡಗಳು ತರಬೇತಿಯನ್ನು ಆರಂಭಿಸಿವೆ. ತಲಾ ಮೂರು ಏಕದಿನ ಹಾಗೂ ಟ್ವೆಂಟಿ–20 ಪಂದ್ಯಗಳು ಇಲ್ಲಿ ನಡೆಯಲಿವೆ.

ಶುಕ್ರವಾರದಿಂದ ಏಕದಿನ ಸರಣಿ ಆರಂಭವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು