ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PBKS vs RR Highlights: ಜೈಸ್ವಾಲ್‌, ಆವೇಶ್‌ ಖಾನ್‌, ಅಶುತೋಷ್‌ ಮಿಂಚಿಂಗ್‌...

Published 14 ಏಪ್ರಿಲ್ 2024, 3:24 IST
Last Updated 14 ಏಪ್ರಿಲ್ 2024, 3:24 IST
ಅಕ್ಷರ ಗಾತ್ರ

ಮುಲ್ಲನ್‌ಪುರ(ಚಂಡೀಗಢ): ರಾಜಸ್ಥಾನ್ ರಾಯಲ್ಸ್‌ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ರಾಯಲ್ಸ್‌ ರೋಚಕ ಗೆಲುವು ದಾಖಲಿಸಿತು. 

ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಿತು. ಬೌಲರ್‌ಗಳ ಸ್ನೇಹಿಯಾಗಿದ್ದ ಪಿಚ್‌ನಲ್ಲಿ ಎರಡೂ ತಂಡಗಳು ವೇಗವಾಗಿ ರನ್‌ ಗಳಿಸಲು ಪರದಾಡಿದವು.

ಮೊದಲು ಆಡಲು ಕಳುಹಿಸಲ್ಪಟ್ಟ ಪಂಜಾಬ್ 20 ಓವರುಗಳಲ್ಲಿ 8 ವಿಕೆಟ್‌ಗೆ 147 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ‌ಇದಕ್ಕೆ ಉತ್ತರವಾಗಿ ರಾಯಲ್ಸ್ ತಂಡ ಉತ್ತಮ ಆರಂಭ ಮಾಡಿದರೂ ಮಧ್ಯಮ ಹಂತದಲ್ಲಿ ಪರದಾಡಿ ಕೊನೆಗೆ ಒಂದು ಎಸೆತ ಇರುವಂತೆ 7 ವಿಕೆಟ್‌ಗೆ 152 ರನ್ ಹೊಡೆಯಿತು.

ಈ ಪಂದ್ಯದ ಹೈಲೈಟ್ಸ್‌...

  • ರಾಜಸ್ಥಾನ್ ರಾಯಲ್ಸ್‌ ತಂಡದ ಶಿಮ್ರೋನ್ ಹೆಟ್ಮೆಯರ್ ಕೊನೆಗಳಿಗೆಯ ಬೀಸಾಟದಿಂದ ಅಜೇಯ 27 ರನ್‌ ಸಿಡಿಸಿದರು.

  • ರಾಜಸ್ಥಾನ್ ರಾಯಲ್ಸ್‌ನ ಯಶಸ್ವಿ ಜೈಸ್ವಾಲ್ 28 ಎಸೆತಗಳಲ್ಲಿ 39 ರನ್‌ ಬಾರಿಸಿದರು. ಎರಡು ಇನ್ನಿಂಗ್ಸ್‌ಗಳ ಪೈಕಿ ಇವರೇ ಹೆಚ್ಚು ರನ್‌ ಹೊಡೆದರು. 

  • ಪಂಜಾಬ್‌ ಕಿಂಗ್ಸ್‌ನ ಸ್ಯಾಮ್ ಕರನ್ 19ನೇ ಓವರ್‌ನಲ್ಲಿ ಎರಡು ಬೌಂಡರಿ ನೀಡಿದರೂ, ಎರಡು ವಿಕೆಟ್‌ (ರೋವ್ಮನ್ ಪಾವೆಲ್ ಮತ್ತು ಕೇಶವ ಮಹಾರಾಜ್) ಪಡೆದ ಕಾರಣ ಪಂದ್ಯ ರೋಚಕವಾಯಿತು.

  • ರಾಯಲ್ಸ್‌ ತಂಡಕ್ಕೆ ತನುಷ್ ಕೋಟ್ಯಾನ್ ಮತ್ತು ಯಶಸ್ವಿ ಜೈಸ್ವಾಲ್ 8 ಓವರುಗಳಲ್ಲಿ 56 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು.

  • ವೇಗಿಗಳಾದ ರಬಡ, ಆವೇಶ್‌ ಖಾನ್, ಸ್ಯಾಮ್‌ ಕರನ್‌ ಮತ್ತು ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ ತಲಾ ಎರಡು ವಿಕೆಟ್‌ ಪಡೆದರು

  • ಇನಿಂಗ್ಸ್‌ನ ಕೊನೆಯ ಹಂತದಲ್ಲಿ ‘ಇಂಪ್ಯಾಕ್ಟ್‌ ಸಬ್‌’ ಅಶುತೋಷ್‌ ಶರ್ಮಾ 31 ರನ್‌ ಸಿಡಿಸಿ ತಮಗೆ ಕೊಟ್ಟ ಕೆಲಸವನ್ನು ಉತ್ತಮವಾಗಿಯೇ ನಿರ್ವಹಿಸಿದರು.

  • ವಿಕೆಟ್ ಕೀಪರ್ ಜಿತೇಶ್‌ ಶರ್ಮಾ 29ರನ್‌ ಹೊಡೆದು ಉಪಯುಕ್ತ ಆಟವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT