ಶನಿವಾರ, ಏಪ್ರಿಲ್ 1, 2023
29 °C

ಕೌಂಟಿ ಕ್ರಿಕೆಟ್‌: ಲೆಷ್ಟರ್‌ಷೈರ್‌ ಪರ ಆಡಲಿರುವ ರಹಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲೆಸ್ಟರ್‌ಷೈರ್‌: ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಬ್ಯಾಟರ್‌ ಅಜಿಂಕ್ಯ ರಹಾನೆ ಅವರು ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಲೆಸ್ಟರ್‌ಷೈರ್‌ ತಂಡದ ಪರ ಆಡಲಿದ್ದಾರೆ.

ಐಪಿಎಲ್‌ ಟೂರ್ನಿಯ ಬಳಿಕ ತಂಡವನ್ನು ಸೇರಿಕೊಳ್ಳಲಿರುವ ಅವರು ಈ ಋತುವಿನಲ್ಲಿ ಎಂಟು ಪಂದ್ಯಗಳನ್ನು ಆಡಲಿದ್ದಾರೆ. ಒನ್‌ಡೇ ಕಪ್‌ ಟೂರ್ನಿಯ ಎಲ್ಲ ಪಂದ್ಯಗಳಿಗೂ ಅವರು ಲಭ್ಯರಿದ್ದಾರೆ ಎಂದು ಲೆಸ್ಟರ್‌ಷೈರ್‌ ಕ್ಲಬ್‌ ಮಂಗಳವಾರ ತಿಳಿಸಿದೆ.

34 ವರ್ಷದ ರಹಾನೆ, ಕಳೆದ ವರ್ಷದ ಜನವರಿಯಲ್ಲಿ ಕೊನೆಯದಾಗಿ ಟೆಸ್ಟ್‌ ಪಂದ್ಯದಲ್ಲಿ ಆಡಿದ್ದರು. ಐಪಿಎಲ್‌ನಲ್ಲಿ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡುತ್ತಿದ್ದಾರೆ.

ರಹಾನೆ ಅವರು 2019 ರಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಹ್ಯಾಂಪ್‌ಷೈರ್‌ ತಂಡದ ಪರ ಆಡಿದ್ದರು. ನಾಟಿಂಗ್‌ಹ್ಯಾಂಷೈರ್‌ ವಿರುದ್ಧದ ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದ್ದರು.

ಮುಂಬೈನ ಬ್ಯಾಟರ್‌ 82 ಟೆಸ್ಟ್‌ ಪಂದ್ಯಗಳಿಂದ 4,931 ರನ್‌ ಹಾಗೂ 90 ಏಕದಿನ ಪಂದ್ಯಗಳಿಂದ 2,962 ರನ್‌ ಕಲೆಹಾಕಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು