ಬೆಂಗಳೂರು: ‘ಅಡುಗೆಮನೆಯಲ್ಲಿ ಮಾತ್ರ ಗ್ರೈಂಡಿಂಗ್ (ಪುಡಿ ಮಾಡುವುದು) ಮಾಡುತ್ತಾರೆಂದು ಬಾಲ್ಯದಿಂದಲೂ ತಿಳಿದಿದ್ದೆ. ಆದರೆ ಕ್ರಿಕೆಟ್ ಪಿಚ್ನಲ್ಲಿಯೂ ಮಿಕ್ಸಿಂಗ್–ಗ್ರೈಂಡಿಂಗ್ ಮಾಡಬಹುದು ಎಂಬುದನ್ನು ರಾಹುಲ್ ದ್ರಾವಿಡ್ ಬ್ಯಾಟಿಂಗ್ ನೋಡಿದ ಮೇಲೆ ಗೊತ್ತಾಯಿತು..ಹ್ಯಾಪಿ ಬರ್ತಡೆ ದ ವಾಲ್’

ಶನಿವಾರ 47ನೇ ಜನ್ಮದಿನ ಆಚರಿಸಿಕೊಂಡ ದಿಗ್ಗಜ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ಅವರಿಗೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೋರಿರುವ ಶುಭಾಶಯ ಇದು. ತಮ್ಮ ತಾಳ್ಮೆಯ ಬ್ಯಾಟಿಂಗ್ ಮೂಲಕ ‘ಗೋಡೆ’ ಎಂದೇ ಖ್ಯಾತರಾಗಿದ್ದ ರಾಹುಲ್ ಎದುರಾಳಿ ಬೌಲರ್ಗಳ ಎಸೆತಗಳನ್ನು ಪುಡಿಗಟ್ಟುತ್ತಿದ್ದ ರೀತಿಯನ್ನು ವೀರೂ ಈ ರೀತಿ ಬಣ್ಣಿಸಿದ್ದಾರೆ. ಈ ಸಂದೇಶವನ್ನು ಅವರು ತಮ್ಮ ಟ್ವಿಟರ್, ಫೇಸ್ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥರಾಗಿರುವ ದ್ರಾವಿಡ್ ಅವರಿಗೆ ಜನ್ಮದಿನದ ಶುಭಾಶಯ ಕೋರಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ, ಬಿಸಿಸಿಐ ಮತ್ತು ಹಲವು ದಿಗ್ಗಜರು ಸಂದೇಶ ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.