ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ತಂಡದ ಮುಖ್ಯಕೋಚ್‌ ಆಗಿ ಮುಂದುವರಿದ ದ್ರಾವಿಡ್‌

Published 29 ನವೆಂಬರ್ 2023, 11:41 IST
Last Updated 29 ನವೆಂಬರ್ 2023, 11:41 IST
ಅಕ್ಷರ ಗಾತ್ರ

ಭಾರತೀಯ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಕರ್ನಾಟಕದ ರಾಹುಲ್‌ ದ್ರಾವಿಡ್‌ ಮುಂದುವರಿಯಲು ಒಪ್ಪಿದ್ದಾರೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ. ‘ತಂಡವನ್ನು ಸಮರ್ಥವಾಗಿ ರೂಪಿಸುವಲ್ಲಿ, ವೃತ್ತಿಪರವಾಗಿಸುವಲ್ಲಿ ದ್ರಾವಿಡ್‌ ಶ್ರಮ ಅಪಾರ. ಅವರ ದೂರದೃಷ್ಟಿ, ವೃತ್ತಿಪರತೆ ಭಾರತ ತಂಡದ ಆಧಾರ ಸ್ತಂಭವಿದ್ದಂತೆ’ ಎಂದು ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ಶ್ಲಾಘಿಸಿದ್ದಾರೆ. ‘ಈ ಪಯಣದ ಉದ್ದಕ್ಕೂ ಹಲವು ಏರಿಳಿತಗಳಿಗೆ ಸಾಕ್ಷಿಯಾಗಿದ್ದೇನೆ. ನನಗೆ ಸಿಕ್ಕ ತಂಡದ ಬೆಂಬಲ ವರ್ಣಿಸಲು ಅಸಾಧ್ಯ’ ಎಂದು ದ್ರಾವಿಡ್ ಹೇಳಿದ್ದಾರೆ. ಬ್ಯಾಟಿಂಗ್‌ ಕೋಚ್‌ ವಿಕ್ರಂ ರಾಥೋಡ್‌, ಬೌಲಿಂಗ್ ಕೋಚ್‌ ಪಾರಸ್‌ ಮಾಂಬ್ರೆ ಕೂಡ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಮುಂದಿನ ಟಿ20 ವಿಶ್ವಕಪ್‌ವರೆಗೆ ಇದೇ ತಂಡ ಮುಂದುವರಿಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT