ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RR vs GT:  ಟೈಟನ್ಸ್‌ ಗೆಲುವಿಗೆ 197 ರನ್ ಬೃಹತ್ ಸವಾಲು ಒಡ್ಡಿದ ರಾಯಲ್ಸ್

Published 10 ಏಪ್ರಿಲ್ 2024, 16:16 IST
Last Updated 10 ಏಪ್ರಿಲ್ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ಸಂಜು ಸಾಮ್ಸನ್ ಹಾಗೂ ರಿಯಾನ್ ಪರಾಗ್ ಅವರ ಅದ್ಭುತ ಆಟದಿಂದಾಗಿ ರಾಜಸ್ಥಾನ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 196 ರನ್ ಗಳಿಸಿತು. ಆ ಮೂಲಕ ಗುಜರಾತ್ ಟೈಟನ್ಸ್‌ಗೆ 197ರ ಗುರಿಯನ್ನು ನಿಗದಿಪಡಿಸಿತು.

ಐಪಿಎಲ್ 17ನೇ ಆವೃತ್ತಿಯಲ್ಲಿ ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತ ರಾಜಸ್ಥಾನ ರಾಯಲ್ಸ್ ಮೊದಲು ಬ್ಯಾಟ್‌ ಮಾಡುವ ಅವಕಾಶವನ್ನು ಟೈಟನ್ಸ್‌ಗೆ ನೀಡಿತು.

ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಸಂಜು ಸ್ಯಾಮ್ಸನ್ ಔಟ್ ಆಗದೇ 38 ಎಸತಗಳಲ್ಲಿ 2 ಸಿಕ್ಸರ್ ಹಾಗೂ 7 ಬೌಂಡ್ರಿ ಸಹಿತ 68 ರನ್ ಸಿಡಿಸಿದರು. ಇವರೊಂದಿಗೆ ರಿಯಾನ್ ಪರಾಗ್ ಅವರು 48 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 3 ಬೌಂಡ್ರಿ ಸಹಿತ 76 ರನ್ ಪೇರಿಸಿ ತಂಡವು ಬೃಹತ್ ಮೊತ್ತ ಕಲೆಹಾಕುವಲ್ಲಿ ನೆರವಾದರು.

ಆರಂಭಿಕ ಬ್ಯಾಟರ್ ಆಗಿ ಕ್ರೀಡಾಂಗಣಕ್ಕಿಳಿದ ಯಶಸ್ವಿ ಜೈಸ್ವಾಲ್ ಅವರು  19 ಎಸೆತಗಳಲ್ಲಿ ಐದು ಬೌಂಡ್ರಿ ಮೂಲಕ 24 ರನ್ ಕಲೆಹಾಕಿದರು. ತಂಡದ ಮೊತ್ತ 32 ಇದ್ದಾಗ ಉಮೇಶ್ ಯಾದವ್ ಅವರ ಬೌಲಿಂಗ್‌ನಲ್ಲಿ ಮ್ಯಾಥ್ಯೂ ವಾಡೆ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.

ಜೋಸ್ ಬಟ್ಲರ್ ಅವರಿಗೆ 10 ಎಸೆತಗಳಲ್ಲಿ 8 ರನ್ ಅಷ್ಟೇ ಗಳಿಸಲು ಸಾಧ್ಯವಾಯಿತು. ರಿಶಾದ್ ಖಾನ್ ಅವರ ಬೌಲಿಂಗ್‌ನಲ್ಲಿ ರಾಹುಲ್ ತೆವಾಟಿಯಾ ಅವರಿಗೆ ಜೋಸ್ ಕ್ಯಾಚ್ ನೀಡಿದರು.

ಸ್ಯಾಮ್ಸನ್ ಹಾಗೂ ರಿಯಾನ್ ಅವರ ಜತೆಯಾಟದಲ್ಲಿ ಮೋಹಿತ್ ಶರ್ಮಾ ಚೆಂಡುಗಳು ಆಗಾಗ ಬೌಂಡರಿ ಗೆರೆ ದಾಟುತ್ತಿದ್ದುದರಿಂದ ಪ್ರೇಕ್ಷಕರಿಗೆ ರಸದೌತಣ ಬಡಿಸಿತು. 130 ರನ್‌ಗಳ ಜತೆಯಾಟದೊಂದಿಗೆ ತಂಡದ ಮೊತ್ತ 172 ಇದ್ದಾಗ ಮೋಹಿತ್ ಶರ್ಮಾ ಅವರ ಬೌಲಿಂಗ್‌ನಲ್ಲಿ ಪರಾಗ್ ಅವರ ಬ್ಯಾಟ್‌ನಿಂದ ಚಿಮ್ಮಿದ ಚೆಂಡು ವಿಜಯ್ ಶಂಕರ್ ಅವರ ಕೈಸೇರಿದಾಗ ಅದ್ಭುತ ಜತೆಯಾಟಕ್ಕೆ ತೆರೆ ಬಿದ್ದಿತು.

ಕೊನೆಯದಾಗಿ ಶಿಮ್ರನ್ ಹಿಟ್‌ಮೆಯರ್ ಅವರು 5 ಎಸೆತಗಳಿಗೆ ವೇಗದ 13 ರನ್ ಗಳಿಸಿ ತಂಡದ ಮೊತ್ತ 196 ರನ್‌ಗೆ ತಂದರು.

ಗುಜರಾತ್ ಟೈಟನ್ಸ್ ಪರವಾಗಿ ರಿಶಾದ್ ಖಾನ್ ಅವರು 4 ಓವರ್‌ ಮಾಡಿ 4.5 ಸರಾಸರಿಯೊಂದಿಗೆ ಒಂದು ವಿಕೆಟ್ ಪಡೆದು 18 ರನ್ ನೀಡಿದರು. ಮೋಹಿತ್ ಶರ್ಮಾ ಅವರು 4 ಓವರ್‌ಗೆ 51 ರನ್ ಹಾಗೂ ಉಮೇಶ್ ಯಾದವ್ ಅವರು 4 ಓವರ್‌ಗೆ 47 ರನ್ ನೀಡಿ ದುಬಾರಿ ಎನಿಸಿದರೂ, ತಲಾ ಒಂದು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT