ಕೊಹ್ಲಿ, ರೋಹಿತ್ ಭರ್ಜರಿ ಬ್ಯಾಟಿಂಗ್ ಮಾಡುವಾಗ ಖುಷಿಯ ನಗೆ ಬೀರುತ್ತಾರೆ 'ಭಂಡಾರಿ'

ಬುಧವಾರ, ಜೂಲೈ 17, 2019
29 °C

ಕೊಹ್ಲಿ, ರೋಹಿತ್ ಭರ್ಜರಿ ಬ್ಯಾಟಿಂಗ್ ಮಾಡುವಾಗ ಖುಷಿಯ ನಗೆ ಬೀರುತ್ತಾರೆ 'ಭಂಡಾರಿ'

Published:
Updated:

ಬೆಂಗಳೂರು: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಹಿಟ್‌ಮ್ಯಾನ್ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ಮಾಡುವಾಗ ಬೆಂಗಳೂರಿನ ರಾಮ್ ಭಂಡಾರಿಯವರ ಮುಖದಲ್ಲಿ ಖುಷಿಯ ನಗೆ. ಬ್ಯಾಟ್ ಡಾಕ್ಟರ್ ಎಂದೇ ಕರೆಯಲ್ಪಡುವ ರಾಮ್ ಭಂಡಾರಿಯವರೇ ಕೊಹ್ಲಿ ಮತ್ತು ರೋಹಿತ್ ಬ್ಯಾಟ್ ಸಿದ್ಧಪಡಿಸಿದ್ದು. ಹಾಗಾಗಿ ಈ ಕ್ರಿಕೆಟಿಗರ ಬ್ಯಾಟ್‌ನಿಂದ ರನ್ ಹೊಳೆ ಹರಿವಾಗ ಭಂಡಾರಿ ಮುಖದಲ್ಲಿ ಸಂತೃಪ್ತಿ ಮೂಡುತ್ತದೆ.

ರೋಹಿತ್ ಮತ್ತು ಕೊಹ್ಲಿಯ ಬ್ಯಾಟ್ ಹ್ಯಾಂಡಲ್ ಬದಲಿಸಿ ಅವರಿಗೆ ಹೊಂದುವ ರೀತಿಯಲ್ಲಿ ನವೀಕರಣ ಮಾಡಿಕೊಟ್ಟವರು ಇವರು.

ತಮ್ಮ 20 ವರ್ಷಗಳ ವೃತ್ತಿ ಜೀವನದಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮಹೇಂದ್ರ ಸಿಂಗ್ ಧೋನಿ, ವಿರೇಂದ್ರ ಸೆಹ್ವಾಗ್, ರಿಕಿ ಪಾಂಟಿಂಗ್, ಕ್ರಿಸ್ ಗೇಲ್, ಮ್ಯಾಥ್ಯೂ ಹೇಡನ್, ಬ್ರಯಾನ್ ಲಾರಾ ಮೊದಲಾದ ಕ್ರಿಕೆಟಿಗರ ಬ್ಯಾಟ್ ಸಿದ್ದಪಡಿಸಿದ್ದು ಇದೇ ಭಂಡಾರಿ.

ಬ್ಯಾಟ್ ರಿಪೇರಿ ಮಾಡುವುದರಲ್ಲಿ ಇವರು ಎಕ್ಸ್‌ಪರ್ಟ್. ಹಾಗಾಗಿ ಬ್ಯಾಟ್‌ನಲ್ಲಿ ಏನೇ ಸಂಸ್ಯೆ ಇದ್ದರೂ ಕ್ರಿಕೆಟ್ ತಾರೆಯರು ರಾಮ್ ಭಂಡಾರಿಗೆ ಫೋನ್ ಮಾಡುತ್ತಾರೆ. ರಾಮ್ ಭಂಡಾರಿ ಆ ಬ್ಯಾಟ್ ಪರಿಶೀಲಿಸಿ ಅದನ್ನು ರಿಪೇರಿ ಮಾಡಿದರೆ ಮಾತ್ರ ಕ್ರಿಕೆಟಿಗರಿಗೆ ತೃಪ್ತಿ.

ಇದನ್ನೂ ಓದಿ: ಸಚಿನ್‌, ರಾಹುಲ್‌, ಗಂಗೂಲಿಗೆ ಬ್ಯಾಟ್ ಸಿದ್ಧಪಡಿಸುತ್ತಿದ್ದ ಬೆಂಗಳೂರಿನ ಭಂಡಾರಿ

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !