ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಕರ್ನಾಟಕ ತಂಡಕ್ಕೆ ನಿರೀಕ್ಷಿತ ಜಯ

ಮಯಂಕ್ ಬಳಗದ ಶುಭಾರಂಭ
Published 9 ಜನವರಿ 2024, 3:24 IST
Last Updated 9 ಜನವರಿ 2024, 3:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊನೆಯ ದಿನ ಪಂಜಾಬ್ ತಂಡಕ್ಕೆ ಇನಿಂಗ್ಸ್‌ ಸೋಲು ತಪ್ಪಿಸಿಕೊಂಡಿದ್ದೊಂದೇ ಸಮಾಧಾನವಾಯಿತು. ಕರ್ನಾಟಕ ತಂಡ ರಣಜಿ ಟ್ರೋಫಿ ಪ್ರಸಕ್ತ ಋತುವಿನ ಮೊದಲ ಪಂದ್ಯವನ್ನು ಪಂಜಾಬ್ ವಿರುದ್ಧ ಸೋಮವಾರ ಏಳು ವಿಕೆಟ್‌ಗಳಿಂದ ಗೆದ್ದುಕೊಂಡು ಶುಭಾರಂಭ ಮಾಡಿತು.

ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ದಿನವಾದ ಸೋಮವಾರ ಪಂಜಾಬ್ ತಂಡ ಲಂಚ್‌ ನಂತರ ಎರಡನೇ ಇನಿಂಗ್ಸ್‌ನಲ್ಲಿ 413 ರನ್‌ಗಳಿಗೆ ಆಲೌಟ್‌ ಆಯಿತು. ಮೊದಲ ಇನಿಂಗ್ಸ್‌ನಲ್ಲಿ 362 ರನ್‌ಗಳ ಭಾರಿ ಮುನ್ನಡೆ ಪಡೆದಿದ್ದ ಮಯಂಕ್ ಬಳಗ ಗೆಲುವಿಗೆ ಬೇಕಾಗಿದ್ದ 52 ರನ್‌ಗಳ ಅಲ್ಪ ಗುರಿಯನ್ನು 3 ವಿಕೆಟ್ ಕಳೆದುಕೊಂಡು ಮುಟ್ಟಿತು.

ಕರ್ನಾಟಕ ಮುಂದಿನ ಪಂದ್ಯವನ್ನು ಗುಜರಾತ್‌ ವಿರುದ್ಧ ಅಹಮದಾಬಾದಿನಲ್ಲಿ ಜನವರಿ 12 ರಿಂದ ಆಡಲಿದೆ.

ನಾಯಕ ಮಯಂಕ್ ಅಗರ್‌ವಾಲ್ (0) ಎರಡನೇ ಇನಿಂಗ್ಸ್‌ನಲ್ಲಿಯೂ ಖಾತೆ ತೆರೆಯಲಿಲ್ಲ. ಉಪನಾಯಕ ನಿಕಿನ್‌ ಜೋಸ್‌ ಕೂಡ ಮತ್ತೊಮ್ಮೆ ವಿಫಲರಾಗಿ ಎಡಗೈ ಸ್ಪಿನ್ನರ್ ಪ್ರೇರಿತ್‌ ದತ್ತಾ ಬೌಲಿಂಗ್‌ನಲ್ಲಿ ನಿರ್ಗಮಿಸಿದರು. ಈ ಹಂತದಲ್ಲಿ ಆರ್‌.ಸಮರ್ಥ್ (21) ಮತ್ತು ಎಸ್.ಶರತ್‌ (ಔಟಾಗದೇ 21) ಕುಸಿತ ತಡೆದರು. ಶರತ್‌ ಶ್ರೀನಿವಾಸ್ ಜೊತೆಗೂಡಿ ಮನೀಷ್‌ ಪಾಂಡೆ 17ನೇ ಓವರ್‌ನಲ್ಲಿ ಗೆಲುವಿನ ವಿಧಿ ಪೂರೈಸಿದರು.

ಮೊದಲ ಇನಿಂಗ್ಸ್‌ನಲ್ಲಿ 193 ರನ್‌ ಗಳಿಸಿದ್ದ ಬ್ಯಾಟರ್ ದೇವದತ್ತ ಪಡಿಕ್ಕಲ್‌ ಹೊಟ್ಟೆ ಕೆಟ್ಟಿದ್ದ ಕಾರಣ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡಲಿಲ್ಲ. ಅವರು ಫೀಲ್ಡಿಂಗ್‌ಗೂ ಬಂದಿರಲಿಲ್ಲ.

ಇದಕ್ಕೂ ಮುನ್ನ 3 ವಿಕೆಟ್‌ಗೆ 238 ರನ್‌ಗಳಿಂದ ಬೆಳಿಗ್ಗೆ ಆಟ ಮುಂದುವರಿಸಿದ ಪಂಜಾಬ್ ತಂಡ ಕರ್ನಾಟಕ ಸ್ಪಿನ್ನರ್‌ಗಳ ಶಿಸ್ತಿನ ದಾಳಿಗೆ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಮನದೀಪ್‌ ಸಿಂಗ್ (27; 96ಎ, 4X2) ಅವರನ್ನು ಎಡಗೈ ಸ್ಪಿನ್ನರ್‌ ರೋಹಿತ್ ಕುಮಾರ್ ಬೌಲ್ಡ್ ಮಾಡಿದರು. ನಂತರ ಇನ್ನೊಬ್ಬ ಸ್ಪಿನ್ನರ್‌ ಶುಭಾಂಗ್‌ ಹೆಗ್ಡೆ ಪೆಟ್ಟು ನೀಡಿದರು. ನೇಹಲ್‌ ವಧೇರಾ (26; 79ಎ, 4X4) ಅವರನ್ನು ತಮ್ಮದೇ ಬೌಲಿಂಗ್‌ನಲ್ಲಿ ಕ್ಯಾಚ್‌ ಹಿಡಿದ ಶುಭಾಂಗ್, ನಂತರ ಪ್ರೇರಿತ್ ದತ್ತಾ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು.

ಹುಬ್ಬಳ್ಳಿಯ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಣಜಿ ಟ್ರೋಫಿ‌ ಕ್ರಿಕೆಟ್ ಟೂರ್ನಿಯ ‍ಪಂದ್ಯದಲ್ಲಿ ಪಂಜಾಬ್ ತಂಡವನ್ನು ಆಲೌಟ್ ಮಾಡಿದ ಕರ್ನಾಟಕ ತಂಡದ ಆಟಗಾರರ ಸಂಭ್ರಮ
-ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿಯ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಣಜಿ ಟ್ರೋಫಿ‌ ಕ್ರಿಕೆಟ್ ಟೂರ್ನಿಯ ‍ಪಂದ್ಯದಲ್ಲಿ ಪಂಜಾಬ್ ತಂಡವನ್ನು ಆಲೌಟ್ ಮಾಡಿದ ಕರ್ನಾಟಕ ತಂಡದ ಆಟಗಾರರ ಸಂಭ್ರಮ -ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ಅನುಭವಿ ಬ್ಯಾಟರ್ ಗೀತಾಂಶ್ ಖೇರಾ (43, 81 ಎಸೆತ) ಮತ್ತು ಮಯಂಕ್ ಮಾರ್ಕಂಡೆ (36) ಏಳನೇ ವಿಕೆಟ್‌ ಜತೆಯಾಟದಲ್ಲಿ 61 ರನ್‌ ಸೇರಿಸಿ ಆತಿಥೇಯ ತಂಡಕ್ಕೆ ಕೆಲಕಾಲ ಪ್ರತಿರೋಧ ಒಡ್ಡಿದರು. ರೋಹಿತ್‌ಕುಮಾರ್ ಈ ಜೋಡಿಯನ್ನು ಬೇರ್ಪಡಿಸಿದರು.

<div class="paragraphs"><p>&nbsp;</p></div>

 

ಅರ್ಷದೀಪ್ ಸಿಂಗ್, ಎರಡು ಸಿಕ್ಸರ್‌ ಸಹಿತ 14 ರನ್‌ ಗಳಿಸಿ ತಂಡವನ್ನು ಇನಿಂಗ್ಸ್‌ ಸೋಲಿನಿಂದ ಪಾರು ಮಾಡಿದರು. ಅವರು ವೇಗವಾಗಿ 36 (34ಎ, 4X3, 6X3) ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ರೋಹಿತ್ ಕುಮಾರ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಯತ್ನಿಸಿದ ಮಯಂಕ್ ಮಾರ್ಕಂಡೆ (36; 67ಎ, 4x6) ಸ್ಟಂಪ್ಡ್‌ ಆಗಿ ಕೊನೆಯವರಾಗಿ ನಿರ್ಗಮಿಸಿದರು.

‘ತವರಿನಲ್ಲಿ ಗೆಲುವು ಹೆಮ್ಮೆಯ ಕ್ಷಣ’:

ತವರು ನೆಲದಲ್ಲಿ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದು ಹೆಮ್ಮೆಯ ಕ್ಷಣ. ಹಿರಿಯ ಆಟಗಾರರ ಮಾರ್ಗದರ್ಶನಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು.. ಇಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪ್ರಸಕ್ತ ವರ್ಷದ ಮೊದಲ ಪಂದ್ಯದಲ್ಲಿ 4 ವಿಕೆಟ್ ಪಡೆದ ಎಡಗೈ ಸ್ಪಿನ್ನರ್ ಎ.ಸಿ.ರೋಹಿತ್‌ಕುಮಾರ್‌ ಅವರ ಮನದಾಳ. ಇದು ಅವರಿಗೆ ಪದಾರ್ಪಣೆ ಪಂದ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT