ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್: ಮುಂಬೈನ ಮಾಜಿ ವೇಗಿ ರಾಜೇಶ್ ವರ್ಮಾ ನಿಧನ

Last Updated 24 ಏಪ್ರಿಲ್ 2022, 10:39 IST
ಅಕ್ಷರ ಗಾತ್ರ

ಮುಂಬೈ: 2006-07ನೇ ಋತುವಿನ ರಣಜಿ ಟ್ರೋಫಿ ವಿಜೇತ ಮುಂಬೈ ತಂಡದ ಮಾಜಿ ಆಟಗಾರ ರಾಜೇಶ್ ವರ್ಮಾ ಅವರು ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ.

ಬಲಗೈ ಮಧ್ಯಮ ವೇಗಿ ರಾಜೇಶ್ ವರ್ಮಾ ಅವರಿಗೆ 40 ವರ್ಷ ವಯಸ್ಸಾಗಿತ್ತು.

ರಾಜೇಶ್ ನಿಧನದ ಬಗ್ಗೆ ಮುಂಬೈ ತಂಡದ ಮಾಜಿ ಸಹ ಆಟಗಾರ ಭವಿನ್ ಠಕ್ಕರ್ ಖಚಿತಪಡಿಸಿದ್ದಾರೆ.

ರಾಜೇಶ್ ಅವರು ಏಳು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. ವರ್ಮಾ 2006-07ನೇ ಋತುವಿನಲ್ಲಿ ರಣಜಿ ಟ್ರೋಫಿ ವಿಜೇತ ಮುಂಬೈ ತಂಡದ ಪ್ರಮುಖ ಆಟಗಾರರಾಗಿದ್ದರು.

ರಾಜೇಶ್, 2002 –03ನೇ ಋತುವಿನಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ್ದರು. 2008ರಲ್ಲಿ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಪಂಜಾಬ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು.

ಏಳು ಪಂದ್ಯಗಳಲ್ಲಿ 23 ವಿಕೆಟ್‌ಗಳನ್ನು ಪಡೆಯುವಲ್ಲಿ ರಾಜೇಶ್ ಯಶಸ್ವಿಯಾಗಿದ್ದರು. ಆ ಋತುವಿನಲ್ಲಿ ಐದು ವಿಕೆಟ್ ಸಾಧನೆ ಮಾಡಿದ ಏಕೈಕ ಬೌಲರ್‌ ಎನಿಸಿದ್ದರು.

ಹನ್ನೊಂದು ‘ಲಿಸ್ಟ್-ಎ’ಪಂದ್ಯಗಳನ್ನು ಆಡಿರುವ ಅವರು 20 ವಿಕೆಟ್‌ಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT