ಶುಕ್ರವಾರ, ಫೆಬ್ರವರಿ 28, 2020
19 °C
ದೆಹಲಿ, ಉತ್ತರಪ್ರದೇಶ, ಪುದುಚೇರಿ ಜಯಭೇರಿ

ರಣಜಿ ಕ್ರಿಕೆಟ್: ಶುಭಮನ್, ಮಾನ್ ಶತಕಗಳ ಅಬ್ಬರ, ಡ್ರಾ ಪಂದ್ಯದಲ್ಲಿ ಪಂಜಾಬ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಪುರ: ಶುಭಮನ್ ಗಿಲ್ (100 ರನ್) ಮತ್ತು ಗುರುಕೀರತ್ ಸಿಂಗ್ ಮಾನ್ (149 ರನ್) ಅವರ ಶತಕಗಳ ಬಲದಿಂದ ಪಂಜಾಬ್ ತಂಡವು ಹಾಲಿ ಚಾಂಪಿಯನ್ ವಿದರ್ಭ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿ ಮೂರು ಪಾಯಿಂಟ್ಸ್ ಪಡೆಯಿತು.

ಕನ್ನಡಿಗ ಗಣೇಶ್ ಸತೀಶ್ (145) ಅವರ ಶತಕದ ನೆರವಿನಿಂದ ವಿದರ್ಭ ತಂಡವು ಮೊದಲ ಇನಿಂಗ್ಸ್‌ನಲ್ಲಿ 338 ರನ್ ಗಳಿಸಿತು. ಅದಕ್ಕುತ್ತರವಾಗಿ ಪಂಜಾಬ್ 97.5 ಓವರ್‌ಗಳಲ್ಲಿ 5ಕ್ಕೆ408 ರನ್ ಗಳಿಸಿತು. ಮಳೆ ಮತ್ತು ಮಂದಬೆಳಕಿನಿಂದಾಗಿ ಈ ಪಂದ್ಯದ ಬಹುತೇಕ ಸಮಯವು ನಷ್ಟವಾಗಿದ್ದರಿಂದ ಉಭಯ ತಂಡಗಳು ಎರಡನೇ ಇನಿಂಗ್ಸ್‌ ಆಡಲು ಸಾಧ್ಯವೇ ಆಗಲಿಲ್ಲ. ಆದ್ದರಿಂದ ಪಂದ್ಯವು ಡ್ರಾ ಆಯಿತು. ಪಂಜಾಬ್ ಮೂರು ಮತ್ತು ಆತಿಥೇಯ ತಂಡವು ಒಂದು ಪಾಯಿಂಟ್ ಗಳಿಸಿತು.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್: ಮಿಜೋರಾಂ: 73, ಪುದುಚೇರಿ: 458, ಎರಡನೇ ಇನಿಂಗ್ಸ್: ಮಿಜೋರಾಂ 113(ಪ್ರತೀಕ್ ದೇಸಾಯಿ 45, ಲಾಲ್‌ರುಯ್ ರಾಲ್ಟೆ 24, ವಿನಯಕುಮಾರ್ 24ಕ್ಕೆ3, ಸಾಗರ್ ಉದೇಶಿ 34ಕ್ಕೆ3, ದಾಮೋದರನ್ ರೋಹಿತ್ 16ಕ್ಕೆ2) ಫಲಿತಾಂಶ: ಪುದುವೇರಿ ತಂಡಕ್ಕೆ ಇನಿಂಗ್ಸ್, 272 ರನ್‌ಗಳ ಜಯ.

ವಿದರ್ಭ: 118.2 ಓವರ್‌ಗಳಲ್ಲಿ 338 (ಗಣೇಶ್ ಸತೀಶ್ 145, ಆದಿತ್ಯ ಸರವಟೆ 48, ಅಕ್ಷಯ್ ವಖ್ರೆ 34, ರಜನೀಶ್ ಗುರಬಾನಿ ಔಟಾಗದೆ 27, ಸಂದೀಪ್ ಶರ್ಮಾ 104ಕ್ಕೆ2, ಬಲ್ತೇಜ್ ಸಿಂಗ್ 59ಕ್ಕೆ3, ಅರ್ಷದೀಪ್ ಸಿಂಗ್ 65ಕ್ಕೆ3) ಪಂಜಾಬ್: 97.5 ಓವರ್‌ಗಳಲ್ಲಿ 5ಕ್ಕೆ408 (ಸನ್ವೀರ್ ಸಿಂಗ್ 82, ಶುಭಮನ್ ಗಿಲ್ 100, ಗುರುಕೀರತ್ ಸಿಂಗ್ ಮಾನ್ 149, ಮನದೀಪ್ ಸಿಂಗ್ 59, ರಜನೀಶ್ ಗುರಬಾನಿ 62ಕ್ಕೆ2, ಯಶ್ ಠಾಕೂರ್ 99ಕ್ಕೆ2) ಫಲಿತಾಂಶ: ಡ್ರಾ. ಪಂಜಾಬ್‌ಗೆ ಮೂರು, ವಿದರ್ಭಕ್ಕೆ ಒಂದು ಪಾಯಿಂಟ್.

ಉತ್ತರಾಖಂಡ: 117,  ಒಡಿಶಾ: 253, ಉತ್ತರಾಖಂಡ: 195, ಒಡಿಶಾ:  21.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 63 (ಶಂತನು ಮಿಶ್ರಾ ಔಟಾಗದೆ 29, ಗೋವಿಂದ ಪೋದ್ದಾರ್ ಔಟಾಗದೆ 26) ಫಲಿತಾಂಶ: ಒಡಿಶಾ ತಂಡಕ್ಕೆ 10 ವಿಕೆಟ್‌ಗಳ ಜಯ.

ದೆಹಲಿ: 284, ಹೈದರಾಬಾದ್: 69 (ಫಾಲೋ ಆನ್), ಹೈದರಾಬಾದ್: 298, ದೆಹಲಿ: 27. 5 ಓವರ್‌ಗಳಲ್ಲಿ 3ಕ್ಕೆ84 (ಶಿಖರ್ ಧವನ್ 21, ಧ್ರುವ್ ಶೋರೆ ಔಟಾಗದೆ 32, ರವಿಕಿರಣ್ 29ಕ್ಕೆ2) ಫಲಿತಾಂಶ:ದೆಹಲಿ ತಂಡಕ್ಕೆ 7 ವಿಕೆಟ್‌ಗಳ ಜಯ.

ತಮಿಳುನಾಡು: 149, ಮಧ್ಯಪ್ರದೇಶ: 333, ತಮಿಳುನಾಡು: 131.4 ಓವರ್‌ಗಳಲ್ಲಿ 7ಕ್ಕೆ 377 (ಕೌಶಿಕ್ ಗಾಂಧಿ 154, ಹರಿ ನಿಶಾಂತ್ 23, ಬಾಬಾ ಅಪರಾಜಿತ್ 39, ಕೆ. ಮುಕುಂದ್ ಔಟಾಗದೆ 52, ಆವೇಶ್ ಖಾನ್ 86ಕ್ಕೆ2, ಕುಲದೀಪ್ ಸೇನ್ 59ಕ್ಕೆ2) ಪಂದ್ಯ ಡ್ರಾ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು