ಬೆಂಗಳೂರು: ಕರ್ನಾಟಕ ತಂಡವು ಈ ಬಾರಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಸೌರಾಷ್ಟ್ರದ ವಿರುದ್ಧ ಆಡಲಿದೆ. ಈ ಪಂದ್ಯವು ರಾಜ್ಕೋಟ್ನಲ್ಲಿ ನಡೆಯಲಿದೆ.

ಅಕ್ಟೋಬರ್ 15ರಿಂದ ಆರಂಭವಾಗಲಿರುವ ಲೀಗ್ ಹಂತದಲ್ಲಿ ಕರ್ನಾಟಕವು ಒಟ್ಟು ಏಳು ಪಂದ್ಯಗಳನ್ನು ಆಡಲಿದೆ. ಅದರಲ್ಲಿ ಮೂರು ತವರಿನಲ್ಲಿ ನಡೆಯಲಿವೆ. ಶಿವಮೊಗ್ಗದಲ್ಲಿ ಗೋವಾ ಎದುರು ಹಾಗೂ ಹುಬ್ಬಳ್ಳಿಯಲ್ಲಿ ಚಂಡೀಗಡದ ಎದುರು ಪಂದ್ಯಗಳನ್ನು ಆಡಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಮಧ್ಯಪ್ರದೇಶವನ್ನು ಕರ್ನಾಟಕವು ಎದುರಿಸುವುದು.

ಬಿಸಿಸಿಐ ಡಾಟ್ಕಾಮ್ನಲ್ಲಿ ಪ್ರಕಟಿಸಿರುವ ಕರ್ನಾಟಕದ ವೇಳಾಪಟ್ಟಿ ಇಂತಿದೆ;

ಸೌರಾಷ್ಟ್ರ ವಿರುದ್ಧ (ರಾಜ್ಕೋಟ್; ಅ.15 ರಿಂದ 18), ಗೋವಾ ವಿರುದ್ಧ (ಶಿವಮೊಗ್ಗ; ಅ.25ರಿಂದ 28), ಕೇರಳದ ಎದುರು (ತಿರುವನಂತಪುರ; ನ. 1ರಿಂದ 4), ಮಹಾರಾಷ್ಟ್ರ ವಿರುದ್ಧ (ನಾಸಿಕ್; ನ 8ರಿಂದ 11), ಚಂಡೀಗಡ ವಿರುದ್ಧ (ಹುಬ್ಬಳ್ಳಿ; ನ 16 ರಿಂದ 19), ಮಧ್ಯಪ್ರದೇಶ ಎದುರು (ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು; ಜ.22 ರಿಂದ 25), ಪಂಜಾಬ್ ಎದುರು (ಚಂಡೀಗಡ; ಜ 29 ರಿಂದ ಫೆ. 1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.