ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ: ಮೈಸೂರು ಪಂದ್ಯಕ್ಕೆ ಮಯಂಕ್ ಅಗರವಾಲ್

Last Updated 21 ಡಿಸೆಂಬರ್ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರಿನಲ್ಲಿ ಇದೇ 25ರಿಂದ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪಂದ್ಯದಲ್ಲಿ ಆಡಲಿರುವ ಕರ್ನಾಟಕ ತಂಡಕ್ಕೆ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ ಮರಳಲಿದ್ದಾರೆ.

ವೆಸ್ಟ್ ಇಂಡೀಸ್ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುತ್ತಿರುವ ಭಾರತ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ. ಸರಣಿಯ ಕೊನೆಯ ಪಂದ್ಯವು ಭಾನುವಾರ ನಡೆಯಲಿದೆ. ಸೋಮವಾರ ಮಯಂಕ್ ಅವರು ಬೆಂಗಳೂರಿಗೆ ಮರಳಲಿದ್ದು, ತವರಿನ ತಂಡವನ್ನು ಸೇರಿಕೊಳ್ಳಲಿದ್ದಾರೆಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ. ಟೂರ್ನಿಯಲ್ಲಿ ಕರ್ನಾಟಕವು ಆಡಿರುವ ಎರಡೂ ಪಂದ್ಯಗಳಲ್ಲಿ ಮಯಂಕ್, ಕೆ.ಎಲ್. ರಾಹುಲ್ ಮತ್ತು ಮನೀಷ್ ಪಾಂಡೆ ಇರಲಿಲ್ಲ. ಆದರೆ, ಮನೀಷ್ ಮತ್ತು ರಾಹುಲ್ ಅವರು ತಂಡಕ್ಕೆ ಮರಳುವ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಆದ್ದರಿಂದ ಕರುಣ್ ನಾಯರ್‌ ಅವರೇ ನಾಯಕರಾಗಿ ಮುಂದುವರಿದಿದ್ದಾರೆ. ಡೇವಿಡ್‌ ಮಥಾಯಿಸ್‌ ಅವರನ್ನು ಕೈಬಿಡಲಾಗಿದೆ.

ದಿಂಡಿಗಲ್‌ನಲ್ಲಿ ನಡೆದಿದ್ದ ಮೊದಲ ರಣಜಿ ಪಂದ್ಯದಲ್ಲಿ ಆಲ್‌ರೌಂಡ್ ಆಡಿ ಜಯದ ರೂವಾರಿಯಾಗಿದ್ದ ಕೃಷ್ಣಪ್ಪ ಗೌತಮ್ ಅವರು ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಆದ್ದರಿಂದ ಅವರು ಮೈಸೂರಿನ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಉತ್ತರಪ್ರದೇಶ ಎದುರು ನಡೆದಿದ್ದ ಎರಡನೇ ಪಂದ್ಯವು ಡ್ರಾ ಆಗಿತ್ತು. ಕರ್ನಾಟಕ ಮೂರು ಅಂಕ ಗಳಿಸಿತ್ತು. ಮೈಸೂರಿನಲ್ಲಿ ತಂಡವು ಹಿಮಾಚಲ ಪ್ರದೇಶವನ್ನು ಎದುರಿಸಲಿದೆ.

ಇದೇ ಸಂದರ್ಭಧಲ್ಲಿ ಕೂಚ್ ಬಿಹಾರ್ ಟ್ರೋಫಿ ಟೂರ್ನಿಯಲ್ಲಿ ಆಡುವ 19 ವರ್ಷದೊಳಗಿನವರ ಕರ್ನಾಟಕ ತಂಡವನ್ನೂ ಪ್ರಕಟಿಸಲಾಗಿದೆ. ಆರ್. ಸ್ಮರಣ್ ತಂಡದ ನಾಯಕರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ತಂಡ: ಕರುಣ್ ನಾಯರ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಮಯಂಕ್ ಅಗರವಾಲ್, ರೋಹನ್ ಕದಂ, ದೇವದತ್ತ ಪಡಿಕ್ಕಲ್, ಡೇಗಾ ನಿಶ್ಚಲ್, ಆರ್. ಸಮರ್ಥ್, ಪ್ರವೀಣ ದುಬೆ, ಜೆ. ಸುಚಿತ್, ಬಿ.ಆರ್. ಶರತ್, ಶರತ್ ಶ್ರೀನಿವಾಸ್ (ಇಬ್ಬರೂ ವಿಕೆಟ್‌ಕೀಪರ್), ರೋನಿತ್ ಮೋರೆ, ಕೆ.ಎಸ್. ದೇವಯ್ಯ, ವಿ. ಕೌಶಿಕ್, ಮಿಥುನ್ ಅಭಿಮನ್ಯು, ಯರೇಗೌಡ (ಕೋಚ್), ಎಸ್. ಅರವಿಂದ್ (ಬೌಲಿಂಗ್ ಕೋಚ್), ಶಬರೀಶ್ ಪಿ ಮೋಹನ್ (ಫೀಲ್ಡಿಂಗ್ ಕೋಚ್), ಅನುತೋಷ್ ಪೋಳ(ಮ್ಯಾನೇಜರ್), ರಕ್ಷಿತ್ (ಸ್ಟ್ರೆಂತ್ ಮತ್ತು ಕಂಡಿಷನಿಂಗ್ ಕೋಚ್), ಜಾಬ ಪ್ರಭು (ಫಿಸಿಯೊ), ವಿನೋದ್ (ವಿಡಿಯೋ ಅನಾಲಿಸ್ಟ್), ಎ. ರಮೇಶ್‌ ರಾವ್ (ಲಾಜಿಸ್ಟಿಕ್ ಮ್ಯಾನೇಜರ್), ಸೋಮಸುಂದರ (ಮಸಾಜ್ ತಜ್ಞ).

19 ವರ್ಷದೊಳಗಿನವರ ತಂಡ: ಆರ್. ಸ್ಮರಣ್ (ನಾಯಕ), ಲೋಚನ್ ಎಸ್ ಗೌಡ (ಉಪನಾಯಕ/ವಿಕೆಟ್‌ಕೀಪರ್), ಅಕೀಬ್ ಜಾವೇದ್, ರೋಹನ್ ಪಾಟೀಲ, ಕೆ.ವಿ. ಅನೀಶ್, ಕೆ. ಲಂಕೇಶ್, ಕೃತಿಕ್ ಕೃಷ್ಣ (ವಿಕೆಟ್‌ಕೀಪರ್), ಪಾರಸ್ ಗುರುಭಕ್ಷ್ ಆರ್ಯಾ, ಚಿರಾಗ್ ನಾಯಕ, ಕೆ. ಶಶಿಕುಮಾರ್, ತಹಾ ಖಾನ್, ಚಿನ್ಮಯ್ ಅಮ್ಮಣಗಿ, ಕೆ. ಗೌರವ್, ಎಲ್. ಆರ್. ಕುಮಾರ್. ನಿಖಿಲ್ ಹಳದಿಪುರ (ಕೋಚ್), ಜಿ. ಚೈತ್ರಾ (ಕೋಚ್), ಸೈಯದ್ ರಶೀದ್ ಹುಸೇನ್ (ಮ್ಯಾನೇಜರ್), ವೃಷಭ್ ಪ್ರವೀಣ (ಫಿಸಿಯೊ), ಕಿರಣ ಕುಡತರಕರ್ (ವಿಡಿಯೋ ಅ್ಯನಾಲಿಸ್ಟ್), ಕೆ. ಸಮೀ ಉರ್ ರೆಹಮಾನ್ (ಟ್ರೇನರ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT